BBMPಯ ಮಾನವರೂಪೀ ಭ್ರಷ್ಟ ವೈರಸ್‌ಗಳು, ಕೊರೊನಾಕ್ಕಿಂತ ಡೇಂಜರ್‌ ಕ್ರಿಮಿಗಳು

ಬೆಂಗಳೂರು: ಕೊರೊನಾ ವೈರಸ್‌ ಹೆಸರಿನಲ್ಲಿ ಕರ್ನಾಟಕದಲ್ಲಿ ಈಗ ಭ್ರಷ್ಟಾಚಾರದ ವೈರಸ್‌ ಕೊರೊನಾಗಿಂತಲೂ ಹೆಚ್ಚು ಭಯಂಕರವಾಗಿ ಹಬ್ಬಿದೆ. ಅದ್ರಲ್ಲೂ ಬೆಂಗಳೂರಿನಲ್ಲಂತೂ ಮಾನ ಮರ್ಯಾದೆ ಬಿಟ್ಟೇ ಜನರ ತೆರಿಗೆ ಹಣವವನ್ನ ರಕ್ತಬೀಜಾಸುರನಂತೆ ಹೀರುತ್ತಿದ್ದಾರೆ ಮಾನವರೂಪೀ ಭ್ರಷ್ಟ ವೈರಸ್‌ಗಳು.

ಹೌದು ಕೊರನಾ ಹೆಮ್ಮಾರಿಯ ಕಾಟ ಶುರವಾಗಿದ್ದೇ ಬಂತು, ಬೆಂಗಳೂರಿನ ಕೆಲ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ಜನರ ತೆರಿಗೆ ಹಣವನ್ನ ಲೂಟಿ ಮಾಡುತ್ತಿದ್ದಾರೆ. ಸೀಲ್ ಡೌನ್ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಈಗ ಬೃಹತ್‌ ಭ್ರಷ್ಟಾಚಾರವೇ ಶುರುವಾಗಿದೆ. ನೂರು ಮೀಟರ್ ಕಂಟೇನ್ಮೆಂಟ್ ಜೋನ್ ಮಾಡೋಕೆ ದಿನಕ್ಕೆ 69,143 ಸಾವಿರ ರೂ.ಗಳನ್ನು ಬಾಡಿಗೆ ಯಂತೆ 14 ದಿನಕ್ಕೆ 7,26,413 ರೂಪಾಯಿ ಬಾಡಿಗೆ ಬಿಲ್‌ ಬೇಕಂತೆ.

ವಾರ್ಡ್ ನಂಬರ್ 91ರ ಭಾರತಿನಗರದಲ್ಲಿ ಸೋಕಿಂತನ ಮನೆ ಸುತ್ತಮುತ್ತಲು ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಿದ ಗುತ್ತಿಗೆದಾರ, ದಿನಕ್ಕೆ 69,143 ಸಾವಿರ ಬಾಡಿಗೆಯಂತೆ 14 ದಿನಕ್ಕೆ 7,26,413 ರೂ.ಗಳ ಬಿಲ್‌ ಮಾಡಿದ್ದಾನೆ. ಅಚ್ಚರಿಯಂದ್ರೆ ಗುತ್ತಿಗೆದಾರನ ಈ ಬಿಲ್‌ಗೆ ಅಧಿಕಾರಿಗಳಿಂದ ಅಂಗೀಕಾರವೂ ಸಿಕ್ಕಿದೆ. ಈಗ ಡಿಸಿ ಬಿಲ್ ಗೆ ಕಳುಹಿಸಿದ್ದಾರೆ ಅಧಿಕಾರಿಗಳು.

ಅಂದಹಾಗೆ ಸೀಲ್‌ಡೌನ್‌ಗೆ ಬೆೇಕಾಗುವುದು ಕೇವಲ ನಾಲ್ಕು‌ ತಗಡು, ಒಂದೆರಡು ಕಂಬಗಳು. ಆದ್ರೆ ಇದಕ್ಕೆ ಗುತ್ತಿಗೆದಾರು ಮತ್ತು ಅಧಿಕಾರಿಗಳು ಸೇರಿ ಲಕ್ಷ ಲಕ್ಷ ಬಿಲ್‌ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 28,889 ಕಂಟೇನ್ಮೆಂಟ್ ಜೋನ್ಸ್ ಗಳಿವೆ. ಪ್ರತಿ ಸೋಂಕಿತನ ಮನೆಯನ್ನು ಬಿಬಿಎಂಪಿ ಸೀಲ್ ಡೌನ್ ಮಾಡುತ್ತಿದೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುತ್ತಿಗೆದಾರರು, ಬ್ಯಾರಿಕೇಡ್, ಕಬ್ಬಿಣದ ಶೀಟ್ ಹೆಸರಲ್ಲಿ ಲಕ್ಷ ಲಕ್ಷ ಬಿಲ್ ಹಾಕುತ್ತಿದ್ದಾರೆ. ಇವರ ಲೆಕ್ಕಾಚಾರದ ಪ್ರಕಾರ ಬೆಂಗಳೂರಿನ ಕಂಟೈನ್ ಮೆಂಟ್ ಜೋನ್‌ಗೆ ಬಿಲ್ ಪಾವತಿ ಮಾಡಿದ್ರೆ ಬಿಬಿಎಂಪಿ ಆರ್ಥಿಕವಾಗಿ ದಿವಾಳಿಯಾಗೋದು ಗ್ಯಾರಂಟಿ.

Related Tags:

Related Posts :

Category: