ಲಾಡ್ಜ್​ನಲ್ಲಿ ಯುವತಿ ಜೊತೆಗಿದ್ದ ಉದ್ಯಮಿಗೆ ಬ್ಲಾಕ್​ಮೇಲ್: ನಕಲಿ CCB ಇನ್​ಸ್ಪೆಕ್ಟರ್ ಅರೆಸ್ಟ್​

  • KUSHAL V
  • Published On - 19:59 PM, 21 Nov 2020

ಬೆಂಗಳೂರು: ಸಿಸಿಬಿ ಇನ್​ಸ್ಪೆಕ್ಟರ್ ಸೋಗಿನಲ್ಲಿ ಉದ್ಯಮಿಯನ್ನು ಬೆದರಿಸಿ, ಹಣ ವಸೂಲಿ ಮಾಡಿದ್ದ ಆರೋಪಿ ಶ್ರೀನಿವಾಸ ಗದ್ದಿಗೆ ಎಂಬಾತನನ್ನು ಪೀಣ್ಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಯುವತಿಯೊಬ್ಬರೊಂದಿಗೆ ಉದ್ಯಮಿ ಮಂಜುನಾಥ್​ ಲಾಡ್ಜ್​ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನೇ ಆರೋಪಿ ಶ್ರೀನಿವಾಸ ಗದ್ದಿಗೆ ಬ್ಲಾಕ್​ಮೇಲ್ ಅಸ್ತ್ರವಾಗಿಸಿಕೊಂಡಿದ್ದ.

ನೀನು ಯುವತಿ ಜೊತೆಗಿರುವ ವಿಡಿಯೊ ನನ್ನ ಬಳಿ ಇದೆ. 10 ಕೋಟಿ ರೂಪಾಯಿ ನೀಡಿದರೆ ಪ್ರಕರಣ ಮುಚ್ಚಿಹಾಕುತ್ತೇನೆ ಎಂದು ಬೆದರಿಸಿ ಉದ್ಯಮಿಯಿಂದ ಹಂತಹಂತವಾಗಿ 5 ಲಕ್ಷ ಪಡೆದಿದ್ದ. ಮತ್ತೊಮ್ಮೆ 4 ಲಕ್ಷಕ್ಕೆ ಬೇಡಿಕೆಯಿಟ್ಟಾಗ ಮಂಜುನಾಥ್​ ಪೀಣ್ಯ ಠಾಣೆಗೆ ದೂರು ನೀಡಿದರು.

ಯುವತಿಯು ಕೆಲಸ ಮಾಡುತ್ತಿದ್ದ ಕಚೇರಿಯ ಮಾಲೀಕ ಶ್ರೀನಿವಾಸನ ಮೇಲೆ ಅನುಮಾನ ವ್ಯಕ್ತಪಡಿಸಿ ಮಂಜುನಾಥ್ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.