ಸೋಂಕಿತರಿಗೆ ದೊರೆಯದ ಆ್ಯಂಬುಲೆನ್ಸ್, ರಕ್ತಚಂದನ ಕಳ್ಳಸಾಗಾಟಕ್ಕೆ ಬಳಕೆಯಾಯ್ತು!

ದೇವನಹಳ್ಳಿ: ಚಿಕಿತ್ಸೆಗೆಂದು ಆಸ್ಪತ್ರೆ ಸೇರಲು ಕೊರೊನಾ ಸೋಂಕಿತರು ಆ್ಯಂಬುಲೆನ್ಸ್​ಗಳಿಲ್ಲದೆ ಪರದಾಡುತ್ತಿದ್ದಾರೆ. ಇತ್ತ ನೋಡಿದರೆ ಕೆಲವು ಖದೀಮರು ಆ್ಯಂಬುಲೆನ್ಸ್​ನಲ್ಲಿ ರಕ್ತಚಂದನ ಸಾಗಾಟಕ್ಕೆ ಮುಂದಾಗಿದ್ದಾರೆ. ಅಂದ ಹಾಗೆ, ಈ ಘಟನೆ ನಡೆದಿರೋದು ಹೊಸಕೋಟೆಯ ಟೋಲ್​ ಬಳಿ.

ಪೊಲೀಸರ ಕಣ್ತಪ್ಪಿಸಲು ಆ್ಯಂಬುಲೆನ್ಸ್​ನಲ್ಲಿ ಆಂಧ್ರದ ಕಡಪದಿಂದ ಬೆಂಗಳೂರಿಗೆ ರಕ್ತಚಂದನವನ್ನ ಸಾಗಾಟ ಮಾಡಲಾಗುತ್ತಿತ್ತು. ಇದೇ ವೇಳೆ ಪೊಲೀಸರು ಹೊಸಕೋಟೆ ಟೋಲ್ ಬಳಿ ಆ್ಯಂಬುಲೆನ್ಸ್ ತಡೆದು ಪರಿಶೀಲಿಸಿದಾಗ ಘಟನೆ‌ ಬೆಳಕಿಗೆ ಬಂದಿದೆ.

ಪೊಲೀಸರು ಇದೀಗ ಆ್ಯಂಬುಲೆನ್ಸ್ ವಶಕ್ಕೆ ಪಡೆದಿದ್ದು ರಕ್ತಚಂದನ ಸಾಗಾಟ ಮಾಡ್ತಿದ್ದ ಆರೋಪಿ ನರಸಯ್ಯನನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಆ್ಯಂಬುಲೆನ್ಸ್​ನಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ 137 ಕೆಜಿ ರಕ್ತ ಚಂದನವನ್ನ ಜಪ್ತಿ ಮಾಡಿದ್ದಾರೆ.

Related Tags:

Related Posts :

Category: