ಜಮೀನು ನೋಂದಣಿಗಾಗಿ ಕಿಡ್ನ್ಯಾಪ್! ಅಪಹರಣಕಾರನ ಮೇಲೆ ಖಾಕಿ ಫೈರಿಂಗ್

  • KUSHAL V
  • Published On - 18:21 PM, 23 Oct 2020

ದೊಡ್ಡಬಳ್ಳಾಪುರ: ಅಪಹರಣಕಾರನ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಮಾವಳ್ಳಿಪುರ ಬಳಿ ನಡೆದಿದೆ. ಅಂಜನ್ ಗೌಡ ಎಂಬುವವರನ್ನ ಕಿಡ್ನ್ಯಾಪ್ ಮಾಡಿದ್ದ ಆರೋಪಿ ಮನೋಜ್ ಮೇಲೆ ಖಾಕಿ ಪಡೆ ಫೈರಿಂಗ್ ನಡೆಸಿದ್ದಾರೆ. ಜಮೀನು ನೋಂದಣಿಗಾಗಿ ಅಂಜನ್​ ಗೌಡರನ್ನು ಆರೋಪಿ ಮನೋಜ್​ ದೊಡ್ಡಬಳ್ಳಾಪುರ ನಗರದಿಂದ ಕಿಡ್ನ್ಯಾಪ್ ಮಾಡಿದ್ದ.

ಕಿಡ್ನ್ಯಾಪ್ ಪ್ರಕರಣದ ಹಿ‌ನ್ನೆಲೆಯಲ್ಲಿ ಮನೋಜ್​ನನ್ನು ಬಂಧಿಸಲು ತೆರಳಿದ್ದ PSIಶಂಕರಪ್ಪ ಮೇಲೆ ಆರೋಪಿ ಹಲ್ಲೆಗೆ ಯತ್ನ ನಡೆಸಿದ್ದಾನೆ. ಈ ವೇಳೆ ದೊಡ್ಡಬಳ್ಳಾಪುರ ಮಹಿಳಾ ಠಾಣೆ PSI ಕುಮಾರ್​ರಿಂದ ಫೈರಿಂಗ್ ನಡೆದಿದ್ದು ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಅಪಹರಣವಾಗಿದ್ದ ಅಂಜನ್​ ಗೌಡರನ್ನು ಪೊಲೀಸರು ರಕ್ಷಿಸಿದ್ದಾರೆ.