ಕೊರೊನಾ ಟೆಸ್ಟ್ ಫಲಿತಾಂಶ ಬರೋದು ಲೇಟ್​ ಆಗ್ತಿದೆ, ಇದರಿಂದ ಏನಾಗ್ತಿದೆ?

ಬೆಂಗಳೂರು:ನಗರದಲ್ಲಿ ಕೊರೊನಾ ಸೋಂಕಿತರ ಕೊವಿಡ್ ಟೆಸ್ಟ್ ರಿಸಲ್ಟ್ ಲೇಟ್ ಆಗಿ ಬರುತ್ತಿರುವುದೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಹೆಚ್ಚಳಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್ ಟೆಸ್ಟ್ ಗೆ ಒಳಪಟ್ಟವರು ತಮ್ಮ ವರದಿ ಪಾಸಿಟಿವ್ ಬರೋಕು ಮುನ್ನ ಮನೆಯಲ್ಲಿ ಐಸೋಲೇಟ್ ಆಗ್ತಿಲ್ಲ. ವರದಿ ಬರೋಕು ಮುಂಚೆಯೇ ನಗರದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇದರಿಂದ ಇನ್ನೊಂದಿಷ್ಟು ಜನ್ರಿಗೆ ಸೋಂಕು ಹರಡುತ್ತಿದ್ದಾರೆ. ಅಲ್ಲದೆ ವಾರ ಆದರೂ ವರದಿ ಬಾರದ ಕಾರಣ ಮನೆಯವ್ರ ಜೊತೆ ಬೆರೆತು ಅವ್ರಿಗು ಸೋಂಕು ತಗುಲುವಂತೆ ಮಾಡುತ್ತಿದ್ದಾರೆ.

ವ್ಯಕ್ತಿಯ ವರದಿ ಪಾಸಿಟಿವ್ ಬಂದ ತಕ್ಷಣದಿಂದ ಆತನನ್ನು ಐಸೋಲೇಟ್ ಮಾಡಲು ಐದಾರು ದಿನ ಲೇಟ್ ಆಗ್ತಿದೆ. ಇದರಿಂದ ಸೋಂಕಿತ ನಗರದ ನಾನಾ ಕಡೆ ಓಡಾಡಿ ಇನ್ನೊಂದಿಷ್ಟು ಜನರಿಗೆ ಸೋಂಕು ಹಬ್ಬಿಸುತ್ತಿದ್ದಾನೆ. ಹೀಗೆ ಎಲ್ಲ ಕಡೆ ಕೊವಿಡ್ ಟೆಸ್ಟ್ ವರದಿ ಬರುವುದು ವಿಳಂಬವಾಗುತ್ತಿರುವುದೇ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಲು ಕಾರಣ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

Related Tags:

Related Posts :

Category:

error: Content is protected !!