ಟಾಲಿವುಡ್ ಭೀಷ್ಮನ ಮದುವೆಗೆ ಕೊರೊನಾ ಅಡ್ಡಿ, ನಿತಿನ್ ದುಬೈನಲ್ಲಿ ಹಸೆಮಣೆ ಏರೋದು ಡೌಟು

ಕೊರೊನಾ ಹುಟ್ಟಿಸಿರೋ ಭಯದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಕೊರೊನಾದಿಂದ ಸ್ಟಾರ್​ಗಳಂತೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲೂ ಕೊರೊನಾ ಭೀತಿಯಿಂದ ಟಾಲಿವುಡ್ ನಟನ ಮದ್ವೆ ಕೂಡ ಪೋಸ್ಟ್ ಪೋನ್ ಆಗ್ತಿದೆ ಅನ್ನೋ ಮಾತುಗಳು ಕೇಳಿ ಬರ್ತಿದೆ.

ಭೀಷ್ಮಾ.. ಇತ್ತೀಚಿಗಷ್ಟೇ ರಿಲೀಸ್ ಆಗಿ ಸೂಪರ್ ಸಕ್ಸಸ್ ಕಂಡಿರೋ ಸಿನಿಮಾ. ಇದೇ ಖುಷಿಯಲ್ಲಿ ಟಾಲಿವುಡ್ ಹೀರೋ ನಿತಿನ್ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ದಾರೆ. 8 ವರ್ಷಗಳಿಂದ ಪ್ರೀತಿಸಿದ್ದ ಶಾಲಿನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದ್ಧೂರಿಯಾಗಿ ಮದ್ವೆ ಆಗೋಕೆ ರೆಡಿಯಾಗಿದ್ದ ಕ್ಯೂಟ್ ಕಪಲ್​ಗೆ ಕರೊನಾ ಅನ್ನೋ ಮಾಹಾಮಾರಿ ಅಡ್ಡಗಾಲಾಕಿದೆ.

ಅಂದ್ಹಾಗೇ, ನಿತಿನ್ ಗುರು ಹಿರಿಯರ ನಿಶ್ಚಯದಂತೆ ಏಪ್ರಿಲ್ 16ರಂದು ದುಬೈನಲ್ಲಿ ಮದ್ವೆಯಾಗೋಕೆ ನಿರ್ಧರಿಸಿದ್ರು. ಆದ್ರೆ ವಿದೇಶದಲ್ಲಿ ಕೊರೊನಾ ಹಾವಳಿ ಜೋರಾಗಿರೋದ್ರಿಂದ, ದುಬೈನಲ್ಲಿ ಮದ್ವೆ ನಡೆಯೋದು ಅನುಮಾನ ಎನ್ನಲಾಗ್ತಿದೆ. ಹೀಗಾಗಿ ಸಿಂಗಲ್ ಆಗಿರೋ ಟಾಲಿವುಡ್ ಭೀಷ್ಮಾ ಮಿಂಗಲ್ ಆಗೋದು ಯಾವಾಗ ಅನ್ನೋ ಡೌಟ್ ಶುರುವಾಗಿದೆ.

ಇನ್ನು ನಿತಿನ್ ಆಪ್ತ ಮೂಲಗಳ ಪ್ರಕಾರ, ಮದ್ವೆ ನಿಶ್ಚಿತವಾಗಿರುವ ದಿನಾಂಕ & ಮುಹೂರ್ತದಂದೇ ನಡೆಯಲಿದೆಯಂತೆ. ಆದ್ರೆ ಕೊರೊನಾ ಕಾರಣದಿಂದಾಗಿ ದುಬೈಗೆ ತೆರಳುವುದು ಕಷ್ಟ ಸಾಧ್ಯವಾಗಿರೋದ್ರಿಂದ, ಹೈದರಾಬಾದ್​ನ ಫಾರ್ಮ್​ಹೌಸ್​ನಲ್ಲೇ ಮದ್ವೆಗೆ ಸಿದ್ಧತೆ ನಡೀತಿದೆ ಎನ್ನಲಾಗಿದೆ. ಈಗಾಗ್ಲೇ ಚೆನ್ನೈನಲ್ಲಿ ಶಾಪಿಂಗ್ ಮುಗಿಸಿರುವ ಕುಟುಂಬಸ್ಥರು, ಏಪ್ರಿಲ್ 16ರಂದೇ ಮದ್ವೆ ಮಾಡಲು ನಿರ್ಧರಿಸಿದ್ದಾರಂತೆ. ಬಳಿಕ ಏಪ್ರಿಲ್ 21ರಂದು ಹೈದರಾಬಾದ್​ನಲ್ಲೇ ಗ್ರ್ಯಾಂಡ್ ರಿಸೆಪ್ಷನ್ ನಡೆಯಲಿದೆ.

Related Posts :

Category:

error: Content is protected !!