ರಾಜಧಾನಿಯಲ್ಲಿ ಕೊರೊನಾ ಮಹಾಸ್ಫೋಟ, ಒಂದೇ ದಿನ 2,704 ಸೋಕಿತರು?

ಬೆಂಗಳೂರು: ಬೆಂಗಳೂರು ಈಗ ನ್ಯೂಯಾರ್ಕ್​, ಮುಂಬೈ, ದೆಹಲಿಯಂತೆ ಆಗಿಬಿಟ್ಟಿದೆಯಾ? ಎನ್ನುವ ಅನುಮಾನಗಳು ಕಾಡುತ್ತಿವೆ. ಇದಕ್ಕೆ ಕಾರಣ ಇಷ್ಟು ದಿನ ತಕ್ಕಮಟ್ಟಿಗೆ ಕಡಿಮೆ ಇದ್ದ ಕೊರೊನಾ ಈಗ ಸ್ಫೋಟಗೊಳ್ಳಲಾರಂಭಿಸಿರೋದು.

ಇವತ್ತು ಒಂದೇ ದಿನ ಸಿಲಿಕಾನ್​ ಸಿಟಿಯಲ್ಲಿ 2,704 ಪ್ರಕರಣ ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಾವಿರ ಸಾವಿರ ಸಂಖ್ಯೆ ಸೋಂಕಿತರನ್ನು ಕಂಡು ವೈದ್ಯ ಸಿಬ್ಬಂದಿಯೇ ದಂಗಾಗುತ್ತಿದೆ. ಇಷ್ಟೊಂದು ಪ್ರಮಾಣದ ಸೋಂಕಿತರನ್ನು ನಿಭಾಯಿಸುವುದೇ ಈಗ ದೊಡ್ಡ ಸವಾಲಾಗುತ್ತಿದೆ.

ಇನ್ನು ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವುದು ಮತ್ತೊಂದು ಬಹುದೊಡ್ಡ ಸವಾಲಾಗಿದೆ. ಇದಕ್ಕಿಂತ ಆಘಾತಕಾರಿ ಅಂದ್ರೆ ಚಾಮರಾಜಪೇಟೆ ಒಂದರಲ್ಲೇ 70ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿರೋದು.

Related Tags:

Related Posts :

Category:

error: Content is protected !!