ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೊರೊನಾ ಕರಿನೆರಳು

ನವದೆಹಲಿ: ಅಯ್ಯೋಧ್ಯೆಯಲ್ಲಿ ಆಗಸ್ಟ್‌ 5ರಂದು ನಡೆಯಲಿರುವ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಮೇಲೆ ಕೊರೊನಾ ಹೆಮ್ಮಾರಿಯ ಕರಿ ನೆರಳು ಆವರಿಸಿದೆ.

ಹೌದು ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅಯ್ಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಹೋಗುತ್ತಿದ್ದಾರೆ. ಇಷ್ಟೇ ಅಲ್ಲ ಪ್ರಮುಖ ಹಿಂದು ನಾಯಕರು ಮತ್ತು ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದ್ರೆ ಈಗ ಈ ಕಾರ್ಯಕ್ರಮದ ಮೇಲೆ ಕೊರೊನಾ ಹೆಮ್ಮಾರಿಯ ಕರಿನೆರಳು ಆವರಿಸಿದೆ. ಇದಕ್ಕೆ ಕಾರಣ ಶ್ರೀರಾಮ ಮಂದಿರದ ಪ್ರಮಖ ಆರ್ಚಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರೋದು.

ಹೀಗಾಗಿ ಭದ್ರತಾ ಸಿಬ್ಬಂದಿ ಶ್ರೀರಾಮ ಮಂದಿರದ ಎಲ್ಲ ಪೂಜಾರಿಗಳು, ಆರ್ಚಕರು ಮತ್ತು ಅಲ್ಲಿನ ಭದ್ರತಾ ಸಿಬ್ಬಂದಿಗಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸುತ್ತಿದ್ದಾರೆ. ಆದ್ರೂ ಪ್ರಧಾನಿ ಭಾಗವಹಿಸುತ್ತಿರೋ ಕಾರ್ಯಕ್ರಮವಾಗಿರೋದ್ರಿಂದ ಭದ್ರತಾ ಸಿಬ್ಬಂದಿಗೆ ಈಗ ಸಾಕಷ್ಟು ಆತಂಕ ಶುರುವಾಗಿದೆ.

Related Tags:

Related Posts :

Category:

error: Content is protected !!