ನ್ಯೂಜಿಲೆಂಡ್​ಗೆ ಬಂದಿದ್ದ ಪಾಕ್​ ಕ್ರಿಕೆಟಿಗರಿಗೆ ಕೊರೊನಾ ಸೋಂಕು: ತರಬೇತಿಗೆ ನಿರ್ಬಂಧ

ಇಬ್ಬರು ಆಟಗಾರರಲ್ಲಿ ಸೋಂಕು ಮರುಕಳಿಸಿದೆ. ನಾಲ್ವರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಎಲ್ಲ ಆರು ಆಟಗಾರರನ್ನು ಇದೀಗ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ

  • sandhya thejappa
  • Published On - 16:01 PM, 26 Nov 2020
ಪಾಕಿಸ್ತಾನ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗೆಂದು ಬಂದಿದ್ದ ಪಾಕಿಸ್ತಾನ ತಂಡದ ಆರು ಆಟಗಾರರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಸ್ಪಷ್ಟಪಡಿಸಿದೆ.

ಈ ಪೈಕಿ ಇಬ್ಬರು ಆಟಗಾರರಲ್ಲಿ ಸೋಂಕು ಮರುಕಳಿಸಿದೆ. ನಾಲ್ವರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಎಲ್ಲ ಆರು ಆಟಗಾರರನ್ನು ಇದೀಗ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಹೇಳಿದೆ.

ಲಾಹೋರ್​ನಿಂದ ಹೊರಡುವ ಮೊದಲು ಎಲ್ಲ ಆಟಗಾರರನ್ನು ನಾಲ್ಕು ಬಾರಿ ತಪಾಸಣೆಗೆ ಒಳಪಡಿಸಲಾಗಿತ್ತು. ಪ್ರತಿಸಲವೂ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ನ್ಯೂಜಿಲೆಂಡ್​ನಲ್ಲಿ ತಪಾಸಣೆ ನಡೆಸಿದ ವೇಳೆ ಆರು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.

ಸೋಂಕಿತರನ್ನು ಕಟ್ಟುನಿಟ್ಟಿನ ಏಕಾಂತವಾಸದಲ್ಲಿ ಇರಿಸಲಾಗಿದೆ. ಕ್ವಾರಂಟೈನ್ ಅವಧಿಯಲ್ಲಿ ತರಬೇತಿ ಪಡೆಯಲು ನೀಡಿದ್ದ ಅವಕಾಶವನ್ನು ಹಿಂಪಡೆಯಲಾಗಿದೆ.

ನ್ಯೂಝಿಲೆಂಡ್ ವಿರುದ್ಧ ಪಾಕಿಸ್ತಾನವು ಮೂರು T20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.