ಯಾವುದೇ ಕ್ಷಣ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕೊರೊನಾ ಲಸಿಕೆ ಏರ್​ ಲಿಫ್ಟ್: ಭರದಿಂದ ಸಾಗಿದೆ ಸಿದ್ಧತೆಗಳು

ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಪುಣೆಯಿಂದ ಬೆಳಗಾವಿಗೆ ವ್ಯಾಕ್ಸಿನ್ ಹೊತ್ತ ವಿಮಾನಗಳು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ, ವಾಹನ ಮತ್ತು ಸಿಬ್ಬಂದಿಗಳು ತಯಾರಾಗಿದ್ದಾರೆ.

  • TV9 Web Team
  • Published On - 17:14 PM, 11 Jan 2021
ಬೆಳಗಾವಿ ಲಸಿಕೆ ಸಿದ್ಧತೆ

ಬೆಳಗಾವಿ: ಜಿಲ್ಲೆಗೆ ಕೊರೊನಾ ಲಸಿಕೆ ಸದ್ಯದಲ್ಲೇ ಏರ್ ‌ಲಿಫ್ಟ್  ಆಗುವ  ಸಾಧ್ಯತೆಗಳು ನಿಚ್ಚಳವಾಗಿದೆ. ಪುಣೆಯಿಂದ ನಾಳೆ ಬೆಳಗ್ಗೆ ಲಸಿಕೆ ಬರುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ, ನಗರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಯಲ್ಲಿರುವ 2 ವಾಕ್ ಇನ್ ಕೂಲರ್​ನಲ್ಲಿ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ನಡೆಯುತ್ತಿದೆ.

ಯಾವುದೇ ಕ್ಷಣದಲ್ಲಿ ಬೆಳಗಾವಿಗೆ ಕೊರೊನಾ ಲಸಿಕೆ ಏರ್‌ ಲಿಫ್ಟ್ ಆಗಲಿದ್ದು, ವ್ಯಾಕ್ಸಿನ್ ಹೊತ್ತ ವಿಶೇಷ ವಿಮಾನಗಳು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬರಲಿರುವ ಬಗ್ಗೆ ಹೇಳಲಾಗುತ್ತಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಪುಣೆಯಿಂದ ಬೆಳಗಾವಿಗೆ ವ್ಯಾಕ್ಸಿನ್ ಹೊತ್ತ ವಿಮಾನಗಳು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ, ವಾಹನ ಮತ್ತು ಸಿಬ್ಬಂದಿ ತಯಾರಾಗಿ ನಿಂತಿದ್ದಾರೆ.

ಬೆಳಗಾವಿಯ 2 ವಾಕ್ ಇನ್ ಕೂಲರ್‌ಗಳಲ್ಲಿ, ಒಟ್ಟು 13.5 ಲಕ್ಷ ವ್ಯಾಕ್ಸಿನ್ ಸಂಗ್ರಹಿಸಿಡಬಹುದು. ಆ ಮೂಲಕ, ಬೆಳಗಾವಿಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೊರೊನಾ ಲಸಿಕೆ ರವಾನೆಗೆ ಸಿದ್ಧತೆಯಾಗುತ್ತಿದೆ. ಒಂದು ಕೂಲರ್ ವ್ಯಾಕ್ಸಿನ್ ಡಿಪೋದಲ್ಲಿ ಮತ್ತೊಂದು ಕೂಲರ್ ಜಿಲ್ಲಾಸ್ಪತ್ರೆಯ ಔಷಧ ಉಗ್ರಾಣದಲ್ಲಿದೆ.

ಬೆಳಗಾವಿಗೆ ಮೊದಲ ಹಂತದಲ್ಲಿ ಸುಮಾರು 4 ಲಕ್ಷ ವ್ಯಾಕ್ಸಿನ್ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಳಿಕ, ಬೆಳಗಾವಿಯ ಪ್ರಾದೇಶಿಕ ಸ್ಟೋರೇಜ್‌ನಿಂದ ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ಲಸಿಕೆ ರವಾನೆಯಾಗಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 29,500 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ನಡೆಯಲಿದೆ. ಲಸಿಕಾ ವಿತರಣೆಗೆ ಬೆಳಗಾವಿಯಲ್ಲಿ 180 ಕೋಲ್ಡ್ ಚೈನ್ ಪಾಯಿಂಟ್​ಗಳ ಸ್ಥಾಪನೆ ಮಾಡಲಾಗಿದೆ.

ಭಾರತದ ಲಸಿಕೆ ಅತ್ಯಂತ ಸುರಕ್ಷಿತ, ಪರಿಣಾಮಕಾರಿ ಮತ್ತು ಅಗ್ಗ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್