ನಿಮಗೆ ಸಿಗಲಿರುವ ಕೊರೊನಾ ಲಸಿಕೆಯ ದರ ಎಷ್ಟು ಗೊತ್ತಾ?

ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆಗಳು ಅಗ್ಗ. ವಿದೇಶಿ ಲಸಿಕೆಗಳು ಜೇಬಿಗೆ ಭಾರ.. ಎಷ್ಟಿದೆ ದರ ಅಂತರ? ಈಗ ಸೆರಮ್​ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾ ಮತ್ತು ಭಾರತ್ ಬಯೋಟೆಕ್​ ಅಂದಾಜು ಎಷ್ಟು ಹಣ ಗಳಿಸಿರಬಹುದು ಎಂಬ ಲೆಕ್ಕ ಇಲ್ಲಿದೆ.

  • TV9 Web Team
  • Published On - 13:06 PM, 13 Jan 2021
ಸಂಗ್ರಹ ಚಿತ್ರ

ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿದೆ. ಭಾರತದಲ್ಲಿ ಸಂಕ್ರಾಂತಿಯ ಮರು ದಿನವೇ ಲಸಿಕೆ ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿದೆ. ಭಾರತದಲ್ಲಿ ತಯಾರಾದ ಲಸಿಕೆಗಳಿಗೆ ಹೋಲಿಸಿದರೆ ಬೇರೆ ಬೇರೆ ದೇಶಗಳ ಲಸಿಕೆ ದರ ಅತ್ಯಂತ ದುಬಾರಿ ಎನ್ನಿಸದೇ ಇರದು. ಆದರೆ, ಇಲ್ಲಿ ಲಸಿಕೆ ಕಡಿಮೆ ದರಕ್ಕೆ ಸಿಕ್ಕರೇನು ಪ್ರಯೋಜನ? ಗ್ಯಾಸ್​, ಪೆಟ್ರೋಲ್, ಡೀಸೆಲ್​ ಬೆಲೆ ಏರಿಸಿ ಸರ್ಕಾರ ದುಡ್ಡು ವಸೂಲಿ ಮಾಡ್ತಾ ಇದೆ ಎನ್ನುವುದು ಕೆಲವರ ವಾದ. ಆ ವಾದ ಎಷ್ಟು ಸಮಂಜಸವೋ ಅಥವಾ ಅಲ್ಲವೋ ಅನ್ನುವುದನ್ನು ಪಕ್ಕಕ್ಕಿಟ್ಟು ಬೆಲೆಗಳ ಬಗ್ಗೆ ಗಮನಹರಿಸುವುದಾದರೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ತಯಾರಾದ ಲಸಿಕೆಗಳ ದರ
1. ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ, ಕೊವಿಶೀಲ್ಡ್ ಲಸಿಕೆ.
ದರ: ಸರ್ಕಾರಕ್ಕೆ ನೀಡಿರುವ 10 ಕೋಟಿ ಡೋಸ್​ ಲಸಿಕೆ ಬೆಲೆ 1 ಡೋಸ್​ಗೆ ₹200. ನಂತರ 1 ಡೋಸ್​ಗೆ ₹ 1,000.
ಇದೇ ಲೆಕ್ಕಾಚಾರದ ಪ್ರಕಾರ ಹೋದರೂ ಸದ್ಯ ಸೆರಮ್​ ಸಂಸ್ಥೆ 10 ಕೋಟಿ ಡೋಸ್​ ಲಸಿಕೆಗಳಿಂದ ಗಳಿಸಿರುವ ಹಣ ಬರೋಬ್ಬರಿ ₹ 2,000 ಕೋಟಿ.

2. ಭಾರತ್ ಬಯೋಟೆಕ್, ಕೊವ್ಯಾಕ್ಸಿನ್ ಲಸಿಕೆ.
ದರ: ಸರ್ಕಾರಕ್ಕೆ ಉಚಿತವಾಗಿ 16.5 ಲಕ್ಷ ಡೋಸ್​ ಲಸಿಕೆ ನೀಡಲಾಗಿದೆ. ನಂತರ ನೀಡಲಿರುವ 38.5 ಲಕ್ಷ ಡೋಸ್​ ಲಸಿಕೆಗೆ 1 ಡೋಸ್​ಗೆ ₹ 295ರಂತೆ ದರ ನಿಗದಿ. (ಒಟ್ಟಾರೆ 55 ಲಕ್ಷ ಡೋಸ್​ ಲಸಿಕೆಯ ಲೆಕ್ಕಾಚಾರ ಹಾಕಿದಾಗ ತಲಾ 1 ಡೋಸ್​ಗೆ ₹ 206 ವೆಚ್ಚ ತಗುಲುತ್ತದೆ).
55 ಲಕ್ಷ ಡೋಸ್​ ಲಸಿಕೆಗಳಿಂದ ಭಾರತ್​ ಬಯೋಟೆಕ್​ ಗಳಿಸಿರಬಹುದಾದ ಹಣ ₹ 113 ಕೋಟಿ.

ಬೇರೆ ಬೇರೆ ದೇಶಗಳು ತಯಾರಿಸುತ್ತಿರುವ ಲಸಿಕೆಗಳ ಅಂದಾಜು ದರ
1. ಫೈಜರ್​-ಬಯೋಎನ್​ಟೆಕ್​
ದರ: 1 ಡೋಸ್​ಗೆ ₹ 1,431

2. ಮಾಡೆರ್ನಾ
ದರ: 1 ಡೋಸ್​ಗೆ ₹ 2,348ರಿಂದ ₹ 2,715

3. ಸಿನೋಫಾರ್ಮಾ
ದರ: 1 ಡೋಸ್​ಗೆ ₹ 5,560ರ ಆಸುಪಾಸು

4. ಸಿನೋವ್ಯಾಕ್​ ಬಯೋಟೆಕ್​
ದರ: 1 ಡೋಸ್​ಗೆ ₹ 1,027

5. ನೋವಾವ್ಯಾಕ್ಸ್​
ದರ: 1 ಡೋಸ್​ಗೆ ₹ 1,114

6. ಗಮಾಲೆಯಾ ಸೆಂಟರ್
ದರ: 1 ಡೋಸ್​ಗೆ ₹ 734ರ ಆಸುಪಾಸು

7. ಜಾನ್ಸನ್​ ಅಂಡ್​ ಜಾನ್ಸನ್​
ದರ: 1 ಡೋಸ್​ಗೆ ₹ 734ರ ಆಸುಪಾಸು

8. ಸ್ಪುಟ್ನಿಕ್​ ವಿ
ದರ: ರಷ್ಯಾದಲ್ಲಿ ಉಚಿತವಾಗಿ ವಿವರಿಸುವುದಾಗಿ ಸಂಸ್ಥೆ ಹೇಳಿದೆ.
ಭಾರತದಲ್ಲಿ ಹೈದರಾಬಾದ್ ಮೂಲದ ರೆಡ್ಡೀಸ್​ ಸಂಸ್ಥೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದು ಬೆಲೆಯ ಕುರಿತಾಗಿ ಮಾಹಿತಿಗಳಿಲ್ಲ.

ಈ ಮೇಲಿನ ಲಸಿಕೆಗಳ ಪೈಕಿ ಫೈಜರ್​-ಬಯೋಎನ್​ಟೆಕ್ ಸಂಸ್ಥೆ ತಯಾರಿಸಿದ ಲಸಿಕೆಯನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಲಸಿಕೆಗಳನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಿಸಿಡಬಹುದು. ಫೈಜರ್​-ಬಯೋಎನ್​ಟೆಕ್ ಲಸಿಕೆ ಶೇಖರಣೆಗೆ -70 ಡಿಗ್ರಿ ಸೆಲ್ಸಿಯಸ್​ ತಾಪಮಾನ ಅಗತ್ಯವಿದೆ ಎನ್ನುವುದು ಗಮನಾರ್ಹ ಸಂಗತಿ.

ಲಸಿಕೆ ತಯಾರಿಕೆ ಕಂಪನಿಗಳಿಗೆ ಕೋರ್ಟ್​​ನಿಂದ ರಕ್ಷಣೆ ಇಲ್ಲ.. ಸೈಡ್ ಎಫೆಕ್ಟ್​​ ಆದ್ರೆ ಕೇಸ್ ದಾಖಲಿಸಬಹುದು