ರಸ್ತೆ ಮೇಲೆಯೇ ಬಿದ್ದಿದೆ ಸೋಂಕಿತನ ಶವ, 3 ಗಂಟೆಯಾದ್ರೂ ಬಾರದ ಆ್ಯಂಬುಲೆನ್ಸ್

ಬೆಂಗಳೂರು: ಕೊರೊನಾದಿಂದ ಮೃತಪಟ್ಟಿದ್ದ ವ್ಯಕ್ತಿಯ ಶವ ಮೂರು ಗಂಟೆಗಳಾದ್ರೂ ಸಾಗಿಸುವವರು ಯಾರೂ ಇಲ್ಲದೇ ರಸ್ತೆ ಮೇಲೆಯೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹನುಮಂತ ನಗರದ ನಿವಾಸಿ 55 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಮೃತಪಟ್ಟು 3 ಗಂಟೆಗಳಾದ್ರೂ, ಆ್ಯಂಬುಲೆನ್ಸ್‌ ಇಲ್ಲದೆ ರಸ್ತೆ ಮೇಲೆಯೇ ಶವವನ್ನಿಟ್ಟಿದ್ದಾರೆ. ಜೊತೆಗೆ ಮಳೆ ಬೇರೆ ಸುರಿಯುತ್ತಿದೆ. ಆದ್ರೂ ಆ್ಯಂಬುಲೆನ್ಸ್​‌ ಬಂದಿಲ್ಲ. ಆರೋಗ್ಯ ಅಧಿಕಾರಿಗಳು ಇತ್ತ ಸುಳಿದಿಲ್ಲ. ಹೀಗಾಗಿ ಸಿಬ್ಬಂದಿ ಶವವನ್ನ ರಸ್ತೆ ಮೇಲೆಯೇ ಬಿಟ್ಟಿದ್ದಾರೆ.

ಅಧಿಕಾರಿಗಳ ಈ ಬೇಜವಾಬ್ದಾರಿಗೆ ಸ್ಥಳೀಯರು ಗರಂ‌ ಆಗಿದ್ದಾರೆ. ಮಾನವೀಯತೆಯನ್ನೇ ಮರೆತಿರುವ ಆರೋಗ್ಯಾಧಿಕಾರಿಗಳ ಬೇಜವಾಬ್ದಾರಿಗೆ ಹನುಮಂತನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಬೆಂಗಳೂರು ಕೂಡಾ ಮುಂಬೈ, ದೆಹಲಿಯಂತಾಗುತ್ತಿದೆಯಾ ಅನ್ನೋ ಅನುಮಾನಗಳು ಮೂಡುತ್ತಿವೆ.

 

Related Tags:

Related Posts :

Category:

error: Content is protected !!