ಒಂದೇ ದಿನ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕದತ್ತ!

ಬೆಂಗಳೂರು: ಕರ್ನಾಟಕದಲ್ಲಿ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕದತ್ತ ನಾಗಾಲೋಟದಲ್ಲಿದೆ! ಇದುವರೆಗೂ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1939 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 196 ಜನರಿಗೆ ಕೊರೊನಾ ಅಂಟಿಕೊಂಡಿದೆ ಎಂದು ಸರ್ಕಾರದ ಹೆಲ್ತ್ ಬುಲೆಟಿನ್ ನಲ್ಲಿ ಘೋಷಣೆಯಾಗಿದೆ.

ಬೆಂಗಳೂರಿನಲ್ಲಿ ನಾಲ್ಕು:
ಯಾದಗಿರಿ ಜಿಲ್ಲೆಯಲ್ಲಿ ಇಂದು 72 ಕೊರೊನಾ ಕೇಸ್​ ದೃಢಪಟ್ಟಿದೆ. ಬೆಂಗಳೂರು 4, ರಾಯಚೂರು 38 (ಜಿಲ್ಲೆಯಲ್ಲಿ ಒಟ್ಟು 64ಕ್ಕೆ ಏರಿಕೆ), ಉಡುಪಿ 1, ಧಾರವಾಡ 1, ಚಿಕ್ಕಬಳ್ಳಾಪುರ 20, ಗದಗ 15 ಪ್ರಕರಣ, ಮಂಡ್ಯದಲ್ಲಿ 28 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 196 ಸೋಂಕಿತರ ಪೈಕಿ 91 ಮಹಿಳೆಯರಿಗೆ ಕೊರೊನಾ ತಗುಲಿದೆ.

ಯಾದಗಿರಿ ಜಿಲ್ಲೆಯಲ್ಲಿ ಇಂದು 72 ಜನರಿಗೆ ಕೊರೊನಾ ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿದ್ದ 72 ಜನರಿಗೆ ಕೊರೊನಾ ಸೋಂಕು ತಗುಲಿದ್ದು,
ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ.

ಮಂಡ್ಯದಲ್ಲಿ 28 ಪ್ರಕರಣಗಳ ಪೈಕಿ ಸೋಂಕಿತ ಎಲ್ಲರೂ ಮುಂಬೈನಿಂದ ವಾಪಸ್ಸಾದವರು. ಇದರೊಂದಿಗೆ ಜಿಲ್ಲೆಯಲ್ಲಿ 237ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ. 212 ಸಕ್ರಿಯ ಪ್ರಕರಣಗಳು. ಎಲ್ಲರಿಗೂ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

P 1815 ಚಾಮರಾಜಪೇಟೆಯ ಪೊಲೀಸ್ ಪೇದೆ:
ಬೆಂಗಳೂರಿನಲ್ಲಿ ಮತ್ತೊಬ್ಬ ಪೊಲೀಸ್ ಪೇದೆಗೆ ಕೊರೋನಾ ಸೋಂಕು ತಗುಲಿದೆ. ಇವರು ಮಹಾಲಕ್ಷ್ಮಿ ಲೇಔಟ್ ನಿವಾಸಿ. ಚಾಮರಾಜಪೇಟೆಯಲ್ಲಿ ಪೋಸ್ಟಿಂಗ್ ನಲ್ಲಿರುವ 34 ವರ್ಷದ ಈ ಪೇದೆ ಟಿಪ್ಪುನಗರದಲ್ಲಿ ಆನಂದಪುರ ಕೊಳೆಗೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆ ವೇಳೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Related Posts :

Category:

error: Content is protected !!