ಕೊವಿಡ್-19 ಸೋಂಕು ಪುನಃ ದೆಹಲಿಯಲ್ಲಿ ಅಟ್ಟಹಾಸಗೈಯಲಾರಂಭಿಸಿದ್ದು ಸಾವಿನ ಪ್ರಮಾಣವೂ ಕಳವಳಕಾರಿಯಾಗಿ ಏರಿಕೆಯಾಗುತ್ತದೆ. ಮೂಲಗಳ ಪ್ರಕಾರ ರಾಜಧಾನಿಯಲ್ಲಿ ಪ್ರತಿ ಗಂಟೆಗೆ 5 ಜನ ಮಹಾಮಾರಿಗೆ ಬಲಿಯಾಗುತ್ತಿದ್ದಾರೆಂದು ವರದಿಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಯುಟಿಗಳಲ್ಲಿ ದಾಖಲಾದ ಒಟ್ಟು ಸಾವುಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಸೋಮವಾರ ಬೆಳಿಗ್ಗೆ ಒಂದು ವರದಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 511 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಆ ಪೈಕಿ 121 ಸಾವುಗಳು ದೆಹಲಿಯಲ್ಲಿ ಸಂಭವಿಸಿವೆ.
ದೆಹಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರದಂದು 6,746 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸೋಂಕಿಗೆ ಸಂಬಂಧಿಸಿದ ಸಾವುಗಳ ಸಂಖ್ಯೆ 8,391 ತಲುಪಿದೆ.