ಕೊರೊನಾವನ್ನೇ ಗೆದ್ದುಬಂದ ವೃದ್ಧ ನೇಣಿಗೆ ಶರಣು.. ಎಲ್ಲಿ? ಯಾಕೆ?

ರಾಯಚೂರು: ಕೊರೊನಾ ಸೋಂಕಿಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡಿದ್ದೇವೆ. ಆದರೆ, ಇದೀಗ ಸೋಂಕಿನಿಂದ ಗುಣಮುಖನಾದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ‌ ರಾಗಲಪರವಿ ಗ್ರಾಮದಲ್ಲಿ ನಡೆದಿದೆ.

ಕೊರೊನಾವನ್ನ ಗೆದ್ರೂ ಕೌಟುಂಬಿಕ ಕಲಹಕ್ಕೆ ಮನನೊಂದ ವೃದ್ಧ
ಬಳ್ಳಾರಿಯ ಜಿಂದಾಲ್​ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಕರ ಮನೆಗೆ ತೆರಳಿದ್ದ 65 ವರ್ಷದ ವೃದ್ದನಿಗೆ ಅಲ್ಲಿಂದಲೇ ಸೋಂಕು ತಗಲಿತ್ತು. ಬಳಿಕ ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ.

ಆದರೆ, ಅಲ್ಲಿಂದ ಮನೆಗೆ ಹಿಂದಿರುಗಿದ್ದ ವೃದ್ಧ ಕೌಟುಂಬಿಕ ಕಲಹದಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಹಾಗಾಗಿ, ನಿನ್ನೆ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮೃತನ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಸಿಂಧನೂರು ತಹಶೀಲ್ದಾರ ಮಂಜುನಾಥ್​ ಟಿವಿ 9ಗೆ ಮಾಹಿತಿ ನೀಡಿದ್ದಾರೆ.

Related Tags:

Related Posts :

Category:

error: Content is protected !!