ಕ್ರೇನ್‌‌ ಮೈಮೇಲೆ ಬಿದ್ದು‌ 5 ಕಾರ್ಮಿಕರು ಸ್ಥಳದಲ್ಲಿಯೇ‌ ಸಾವು, ಎಲ್ಲಿ?

ಆಂಧ್ರಪ್ರದೇಶ: ಕೊರೊನಾ ಮಹಾಮಾರಿಯ ಅಟ್ಟಹಾಸದ ನಡುವೆ ಆಂದ್ರ ಪ್ರದೇಶದಲ್ಲಿ ಕಾರ್ಮಿಕರ ಸಾವಿನ ಸರಣಿ ಮುಂದುವರದಿದೆ. ಕೈಗಾರಿಕಾ ಅವಘಡಗಳಿಗೆ ಅಂತ್ಯ ಅನ್ನುವುದೇ ಇಲ್ಲವಾಗಿದೆ. ಇಂದು ಕ್ರೇನ್‌‌ ಬಿದ್ದು 5 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿರುವ ದುರ್ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ವಿಶಾಖಪಟ್ಟಣಂನಲ್ಲಿರುವ ಹಿಂದುಸ್ತಾನ್ ಶಿಪ್‌ ಯಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಕ್ರೇನ್ ಮೈಮೇಲೆ ಬಿದ್ದು 5 ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಜೊತೆಗೆ ಹಲವಾರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದುರಂತದ ವಿಚಾರ ತಿಳಿದ ಕಾರ್ಮಿಕರ ಸಂಬಂಧಿಗಳು ಘಟನಾಸ್ಥಳಕ್ಕೆ ಆತಂಕದಿಂದ ಧಾವಿಸುತ್ತಿದ್ದು, ಕಾರ್ಖಾನೆಯ ಭದ್ರತಾ ಸಿಬ್ಬಂದಿಗಳು ಯಾರೊಬ್ಬರನ್ನು ಘಟನಾ ಸ್ಥಳಕ್ಕೆ ಬಿಡುತ್ತಿಲ್ಲ. ಹೀಗಾಗಿ ಮೃತರ ಸಂಬಂಧಿಗಳು ಕಾರ್ಖಾನೆಯ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

Related Tags:

Related Posts :

Category:

error: Content is protected !!