ನಿಜಕ್ಕೂ ನಾನು ಐಪಿಎಲ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ -ರಾಹುಲ್​

ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯೋದಕ್ಕೆ ಕಾತರನಾಗಿರೋದಾಗಿ ಟೀಮ್ ಇಂಡಿಯಾ ಆಟಗಾರ ಕನ್ನಡಿಗ ಕೆ.ಎಲ್.ರಾಹುಲ್ ಹೇಳಿದ್ದಾರೆ. ನಿಜಕ್ಕೂ ನಾನು ಐಪಿಎಲ್ ಅನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಸೀಸನ್ ನನಗೆ ತಂಡದ ನಾಯಕತ್ವ ವಹಿಸೋದಕ್ಕೆ ತುಂಬಾ ಮಹತ್ವದ್ದಾಗಿದೆ. ಯಾಕಂದ್ರೆ ನಾವು ತಂಡದಲ್ಲಿ ಅದ್ಭುತವಾದ ಆಟಗಾರರನ್ನ ಹೊಂದಿದ್ದೇವೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನ ಈ ಹಿಂದೆ ರವಿಚಂದ್ರನ್ ಅಶ್ವಿನ್ ಮುನ್ನಡೆಸುತ್ತಿದ್ರು. 2018 ಮತ್ತು 2019 ಆವೃತ್ತಿಯಲ್ಲಿ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಅಶ್ವಿನ್​ರನ್ನ, ಈ ಬಾರಿ ಡೆಲ್ಲಿ ತಂಡ ಖರೀದಿಸಿದೆ. ಹೀಗಾಗಿ ಕೆಎಲ್ ರಾಹುಲ್‌ಗೆ ಪಂಜಾಬ್ ತಂಡದ ನಾಯಕತ್ವ ನಿಭಾಯಿಸೋ ಸುವರ್ಣಾವಕಾಶ ಸಿಕ್ಕಿದೆ.

ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿರೋ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಓಪನ್ ನೆಟ್ಸ್ ವಿತ್ ಮಯಾಂಕ್ ವಿಶೇಷ ಎಪಿಸೋಡ್‌ನಲ್ಲಿ ಪಾಲ್ಗೊಂಡಿದ್ದ ರಾಹುಲ್ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಈ ವಿಡಿಯೋದಲ್ಲಿ ರಾಹುಲ್ ಐಪಿಎಲ್‌ಗಾಗಿ ಕಾತರದಿಂದ ಕಾಯುತ್ತಿರೋದಾಗಿ ಹೇಳಿಕೊಂಡಿದ್ದಾರೆ. ಕ್ರಿಸ್ ಗೇಲ್, ನೀವು(ಮಯಾಂಕ್ ಅಗರ್ವಾಲ್) ಮತ್ತು ಮ್ಯಾಕ್ಸ್‌ವೆಲ್ ಹಾಗೂ ಇನ್ನೂ ಹಲವು ಆಟಗಾರರ ಜೊತೆಗೆ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more