ಸೆನ್ಸೇಷನಲ್ ಕ್ರೈಮ್ ಕತೆಗಳು: ಬುರಾರಿ ಕುಟುಂಬದ ಒಟ್ಟು ಹನ್ನೊಂದು ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ದೆಹಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಒಂದು ಧಾರ್ಮಿಕ ವಿಧಿ ಇಲ್ಲವೇ ಮೂಢನಂಬಿಕೆಯ ಭಾಗವಾಗಿ ಚಂದಾವತ್ ಕುಟುಂದದ ಸದಸ್ಯರೆಲ್ಲ ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಿತು. ತನಿಖೆಯಲ್ಲಿ ಭಾಗವಹಿಸಿದ ಮಾನಸಿಕ ರೋಗ ತಜ್ಞರು ಅದನ್ನು ಕಾಮನ್ ಸೈಕೋಸಿಸ್ ಡಿಸಾರ್ಡರ್ ಅಂತ ವಿಶ್ಲೇಷಿಸಿದರು.
ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ನವದೆಹಲಿಯಲ್ಲಿ ನಡೆದ ಬುರಾರಿ ಕುಟುಂಬದ (Burari Family) ಸದಸ್ಯರ ಸಾಮೂಹಿಕ ಸಾವಿನ ಬಗ್ಗೆ ಹೇಳುತ್ತಿದ್ದೇವೆ. ಘಟನೆ ನಡೆದಿದ್ದು ಜುಲೈ 1, 2018 ರಂದು. ಚಂದಾವತ್ (Chandavath) ಅವರ ಮನೆಯಲ್ಲಿ ಕುಟುಂಬದ ಒಟ್ಟು ಹನ್ನೊಂದು ಸದಸ್ಯರ ಮೃತದೇಹಗಳು (dead bodies) ಪತ್ತೆಯಾಗಿದ್ದವು. ಅವರೆಲ್ಲ ಸಾಮೂಹಿಕವಾಗಿ ಅತ್ಮಹತ್ಯೆ ಮಾಡಿಕೊಂಡರೆಂದು ಹೇಳಲಾಗಿತ್ತು.
ಅಸಲಿಗೆ ಅವತ್ತು ನಡೆದಿದ್ದೇನು?
ಚಂದಾವತ್ ಕುಟುಂಬದ ನೆರೆಮನೆಯರಾಗಿದ್ದ ಗುರುಚರಣ್ ಸಿಂಗ್ ಅವರು ಪ್ರತಿದಿನದ ಹಾಗೆ ಅವತ್ತು ಸಹ ಬೆಳಗಿನ ವಾಕ್ ಗಾಗಿ ಚಂದಾವತ್ ಕುಟುಂಬದ ಹಿರಿಯ ಮಗನಾಗಿದ್ದ ಲಲಿತ್ ಗಾಗಿ ಕಾಯುತ್ತಿದ್ದರು. ಅಲ್ಲದೆ ಅಷ್ಟೊತ್ತಿಗಾಗಲೇ ಓಪನ್ ಆಗಿರುತ್ತಿದ್ದ ಚಂದಾವತ್ ಕುಟುಂಬ ನಡೆಸುತ್ತಿದ್ದ ಅಂಗಡಿ ಇನ್ನೂ ಮುಚ್ಚಿತ್ತು. ಹಾಗಾಗೇ, ಲಲಿತ್ ಯಾಕೆ ಹೊರಗೆ ಬರುತ್ತಿಲ್ಲ ನೋಡೋಣ ಅಂತ ಗುರುಚರಣ್ ಸಿಂಗ್ ಚಂದಾವತ್ ಗಳ ಮನೆ ಪ್ರವೇಶಿಸಿದರು.
ಒಳಗಿನಿಂದ ಬೋಲ್ಟ್ ಹಾಕಿರದಿದ್ದ ಮನೆ ಬಾಗಿಲು ಇವರು ತಳ್ಳಿದಾಗ ತೆರೆದುಕೊಂಡಿತು. ಮನೊಯೊಳಗೆ ಸಿಂಗ್ ಗೆ ಕಂಡಿದ್ದು ಮಾತ್ರ ಎಂಟೆದೆಯವನ ಮೈಯಲ್ಲೂ ನಡುಕ ಹುಟ್ಟಿಸುವ ದೃಶ್ಯ. ಚಂದಾವತ್ ಕುಟುಂಬದ ಹಿರಿಯರು ಕಿರಿಯರು ಸೇರಿದಂತೆ ಹತ್ತು ಜನರ ದೇಹಗಳು ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದವು!
ಕೂಡಲೇ ಸಿಂಗ್ ಅಕ್ಕಪಕ್ಕವರನ್ನು ಕೂಗಿ ಕರೆದು ಭಯಾನಕ ದೃಶ್ಯವನ್ನು ತೋರಿಸಿ ಪೊಲೀಸರಿಗೆ ಫೋನ್ ಮಾಡಿದರು. ಆಗ ಸಮಯ ಬೆಳಗಿನ 7.30. ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೇ ಅಥವಾ ಸಾಮೂಹಿಕವಾಗಿ ಅವರನ್ನು ಕೊಲ್ಲಲಾಗಿತ್ತೇ?
ಸಾಮೂಹಿಕ ಆತ್ಮಹತ್ಯೆ ಪ್ರಕರಣ
ಬುರಾರಿ ಪ್ರಕರಣ ಕೇಸ್ ಎಂದು ಕರೆಸಿಕೊಳ್ಳುವ ಈ ಘಟನೆಯು ಸಾಮೂಹಿಕ ಆತ್ಮಹತ್ಯೆಗಳ ಪ್ರಕರಣವೆಂದು ಪರಿಗಣಿಸಲಾಗಿದೆ. ಆ ಮನೆಯಲ್ಲಿ ಒಟ್ಟು 11 ಮೃತದೇಹಗಳಿದ್ದವು. ಹತ್ತು ಸದಸ್ಯರ ದೇಹಗಳು ವೃತ್ತಾಕಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹಾಲ್ ನಲ್ಲಿ ನೇತಾಡುತ್ತಿದ್ದರೆ, ಕುಟುಂಬದ ಅತ್ಯಂತ ಹಿರಿಯ ಸದಸ್ಯೆ ಮತ್ತು ಚಂದಾವತ್ ಅವರ ತಾಯಿ 77-ವರ್ಷ-ವಯಸ್ಸಿನ ನಾರಾಯಣಿ ದೇವಿಯವರ ದೇಹ ಮತ್ತೊಂದು ರೂಮಿನಲ್ಲಿ ಪತ್ತೆಯಾಯಿತು. ಅವರನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಅಂತ ಪೊಲೀಸರು ಶಂಕಿಸಿದರು.
ಹಾಲ್ ನಲ್ಲಿ ಸತ್ತವರಲ್ಲಿ ಇಬ್ಬರು ವಯಸ್ಕ ಪುರುಷರು, 6 ಮಹಿಳೆಯರು ಮತ್ತು 2 ಹದಿಹರೆಯದವರು ಸೇರಿದ್ದರು. ಅವರೆಲ್ಲರ ಕಣ್ಣು ಮತ್ತು ಬಾಯಿಗಳನ್ನು ಕಟ್ಟಲಾಗಿತ್ತು. ಕೆಲವರ ಕೈಕಾಲುಗಳನ್ನೂ ಕಟ್ಟಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ದೆಹಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಒಂದು ಧಾರ್ಮಿಕ ವಿಧಿ ಇಲ್ಲವೇ ಮೂಢನಂಬಿಕೆಯ ಭಾಗವಾಗಿ ಚಂದಾವತ್ ಕುಟುಂದದ ಸದಸ್ಯರೆಲ್ಲ ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಿತು. ತನಿಖೆಯಲ್ಲಿ ಭಾಗವಹಿಸಿದ ಮಾನಸಿಕ ರೋಗ ತಜ್ಞರು ಅದನ್ನು ಕಾಮನ್ ಸೈಕೋಸಿಸ್ ಡಿಸಾರ್ಡರ್ ಅಂತ ವಿಶ್ಲೇಷಿಸಿದರು.
ಪ್ರಕರಣದ ಈಗಿನ ಸ್ಥಿತಿ ಏನು?
ಕುಟುಂಬದ ಎಲ್ಲ 10 ಸದಸ್ಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡರೆಂಬ ವಾದ ಸಾರ್ವಜನಿಕವಾಗಿ ಸ್ವೀಕೃತವಾಗಿರಲಿಲ್ಲ. ಹಾಗಾಗಿ ಪ್ರಕರಣವನ್ನು ಪ್ರತಿಯೊಂದು ಕೋನದಿಂದ ತನಿಖೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಡೈರಿಗಳು ಪತ್ತೆಯಾಗಿದ್ದವು ಮತ್ತು ಅವುಗಳನ್ನು 11 ವರ್ಷಗಳಿಂದ ನಿರ್ವಹಣೆ ಮಾಡಲಾಗುತಿತ್ತು. ಕಾಲುಗಳನ್ನು ಹೇಗೆ ಕಟ್ಟಬೇಕು, ಸಾಮೂಹಿಕ ಆತ್ಮಹತ್ಯೆ ಮತ್ತು ಇನ್ನೂ ಹಲವಾರು ಮೂಢನಂಬಿಕೆಗೆ ಸಂಬಂಧಪಟ್ಟ ಸಂಗತಿಗಳನ್ನು ಅವುಗಳಲ್ಲಿ ಬರೆಯಲಾಗಿತ್ತು.
ಡೈರಿಗಳು ಪತ್ತೆಯಾಗಿದ್ದು ಕುಟುಂಬದ ಪ್ರಾರ್ಥನಾ ಕೊಠಡಿಯಲ್ಲಿ. ಸದಸ್ಯರ ದೇಹಗಳು ವೃತ್ತಾಕಾರಲ್ಲಿ ನೇತಾಡುತ್ತಿದ್ದುದ್ದಕ್ಕೆ ಹೋಲಿಕೆಯಾಗುವ ಅಂಶ ಡೈರಿಯಲ್ಲಿ ನಮೂದಿಸಲಾಗಿತ್ತು. ಸಾಮೂಹಿಕ ಆತ್ಮಹತ್ಯೆಯ ಪ್ರಕರಣ ಎಂಬ ಪೊಲೀಸರ ವಾದವನ್ನು ಪುಷ್ಠೀಕರಿಸಲು ಲಭ್ಯವಾದ ಮತ್ತೊಂದು ಅಂಶವೆಂದರೆ, ಕುಟುಂಬ ಇಬ್ಬರು ಮಹಿಳಾ ಸದಸ್ಯರಾಗಿದ್ದ ಪ್ರಿಯಾಂಕಾ ಮತ್ತು ನೀತು ಸ್ಟೂಲ್ ಮತ್ತು ಹಗ್ಗಗಳನ್ನು ಮನೆಯೊಳಗೆ ಹೊತ್ತೊಯ್ಯುತ್ತಿರುವುದು ಸಿಸಿಟಿವಿಲ್ಲಿ ಸೆರೆಯಾಗಿದೆ. ಇವುಗಳನ್ನು ಆತ್ಮಹತ್ಯೆ ಮಾಡಿಕೊಳ್ಳಲು ಬಳಸಲಾಗಿತ್ತು.
ಡೈರಿ, ಮೊಬೈಲ್ ಫೋನ್ ಮತ್ತು ಐಪ್ಯಾಡ್ ಗಳನ್ನು ಫೋರೆನ್ಸಿಕ್ ಟೆಸ್ಟ್ ಗಳಿಗಾಗಿ ಕಳಿಸಲಾಗಿತ್ತು. ಡೈರಿಗಳಲ್ಲಿನ ಕೈಬರಹ ಮತ್ತು ಕುಟುಂಬದ ಇಬ್ಬರು ಮಹಿಳೆಯರ ಕೈಬರಹ ಮ್ಯಾಚ್ ಆಗುವ ಅಂಶ ಸಾಬೀತಾಗಿತ್ತು. ಅಲ್ಲಿಗೆ ಇದೊಂದು ಸಾಮೂಹಿಕ ಅತ್ಮಹತ್ಯೆಯ ಪ್ರಕರಣ ಎಂದು ಪೊಲೀಸರು ಘೋಷಿಸಿಬಿಟ್ಟರು.