ಸಿಸಿಬಿ ವಶದಲ್ಲಿದ್ದ ಜಾಗ್ವಾರ್ ಕಾರು ಮಾರಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್​

ಸದ್ಯ ಚಿಕ್ಕಮಗಳೂರಿನಲ್ಲಿ ಎಸ್ಐ ಆಗಿರುವ ಕಬಾಳ್ ರಾಜ್ ಉದ್ಯಮಿ ಕರುಣಾಕರ ಭಂಡಾರಿ ಎಂಬುವವರ ಮೇಲೆ ಬಿಟ್ಟಿಂಗ್ ವಿಚಾರದಲ್ಲಿ ದಾಳಿ ನಡೆಸಿ ಸುಮಾರು 55 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

  • TV9 Web Team
  • Published On - 14:37 PM, 27 Feb 2021
ಸಿಸಿಬಿ ವಶದಲ್ಲಿದ್ದ ಜಾಗ್ವಾರ್ ಕಾರು ಮಾರಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್​
CCB PSI ಕಬ್ಬಾಳ್ ರಾಜ್

ಮಂಗಳೂರು:  ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನು ಡಿಜಿ ಮತ್ತು ಐಜಿಪಿ ಅಮಾನತುಗೊಳಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಯೊಬ್ಬರನ್ನು ಸಿಲುಕಿಸಿ ಹಣ ವಸೂಲಿ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ಮಂಗಳೂರು ನಾರ್ಕೋಟಿಕ್ ಠಾಣೆಯ ಇನ್ಸ್​ಪೆಕ್ಟರ್​ ರಾಮಕೃಷ್ಣ ಮತ್ತು ಸಿಸಿಬಿಯ ಹಿಂದಿನ ಎಸ್ಐ ಕಬ್ಬಾಳ್ ರಾಜ್ ಅಮಾನತುಗೊಂಡಿದ್ದಾರೆ.

ಸದ್ಯ ಚಿಕ್ಕಮಗಳೂರಿನಲ್ಲಿ ಎಸ್ಐ ಆಗಿರುವ ಕಬಾಳ್ ರಾಜ್ ಉದ್ಯಮಿ ಕರುಣಾಕರ ಭಂಡಾರಿ ಎಂಬುವವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ದಾಳಿ ನಡೆಸಿ ಸುಮಾರು 55 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಮನಿ ಡಬ್ಲಿಂಗ್ ಆಮಿಷವೊಡ್ಡಿ ಹಣ ಸಂಗ್ರಹಿಸಿದ್ದ ಎಲಿಯಾ ಕನ್​ಸ್ಟ್ರಕ್ಷನ್ ಕಂಪನಿ ವಿರುದ್ಧ ನಡೆದಿದ್ದ ತನಿಖೆ ವೇಳೆ ಬಿ ಎಂಡಬ್ಲ್ಯೂ, ಪಾರ್ಷೆ ಹಾಗೂ ಜಾಗ್ವಾರ್ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಇದರಲ್ಲಿ ಜಾಗ್ವಾರ್ ಕಾರನ್ನು ಪೊಲೀಸರೇ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಡಿಜಿಪಿ ಪ್ರವೀಣ್ ಸೂದ್ ಅವರು ಸಿಐಡಿ ತನಿಖೆಗೆ ಆದೇಶ ನೀಡಿದ್ದರು.

ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ 2019ರ ಜೂನ್ 25 ರಂದು ಮಂಗಳೂರು ಕಚೇರಿ ಮೇಲೆ ದಾಳಿ ಮಾಡಿದ್ದರು.  66 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡು ದಾಖಲೆಯಲ್ಲಿ 51 ಲಕ್ಷದ 74 ಸಾವಿರ ರೂ ಎಂದು ಉಲ್ಲೇಖವಾಗಿತ್ತು. ಐಸ್ ಪ್ಲ್ಯಾಂಟ್ ನಿರ್ಮಾಣಕ್ಕೆ ಬ್ಯಾಂಕ್​ನಿಂದ ಸಾಲ ಪಡೆದ ಹಣವಾಗಿತ್ತು. ಐಟಿ ಅಧಿಕಾರಿಗಳ ಮುಂದೆ ಹಣವನ್ನು ಕ್ಲೈಮ್ ಮಾಡಿಕೊಂಡೆ. ಉಳಿದ 14 ಲಕ್ಷದ 26 ಸಾವಿರ ನಾಪತ್ತೆಯಾಗಿದೆ. ಅಂದಿನ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್​ಗೂ ಈ ಬಗ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಅನ್ಯಾಯಕ್ಕೊಳಗಾದ ಕರುಣಾಕರ ಭಂಡಾರಿ ತಿಳಿಸಿದ್ದಾರೆ.

ಇದನ್ನೂ ಓದಿ

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಗಳನ್ನ ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ: ಮಂಗಳೂರು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ

ಸಿಸಿಬಿ ಪೊಲೀಸರಿಂದ ಮೂರು ರೌಡಿ ಗ್ಯಾಂಗ್​​ಗಳ 11 ಜನರ ಬಂಧನ: ಆಯುಕ್ತ ಕಮಲ್ ಪಂಥ್ ಮಾಹಿತಿ