ಸೆನ್ಸೇಷನಲ್ ಕ್ರೈಮ್ ಕತೆಗಳು: ಅಸಹಾಯಕ ಪುರುಷರನ್ನು ಬೇಟೆಯಾಡುತ್ತಿದ್ದ ಡೆನಿಸ್ ನಿಲ್ಸನ್, ಅವರನ್ನು ಕೊಂದು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ!

ಅವನನ್ನು ವಿಕೃತ ಮತ್ತು ವಿಲಕ್ಷಣ ಅಂತ ಹೇಳಲು ಕಾರಣವಿದೆ. ತನ್ನ ಬೇಟೆಯನ್ನು ಮನೆಗೆ ಕರೆತಂದ ಬಳಿಕ ಅವನು ಮೊದಲು ಲೈಂಗಿಕ ಅತ್ಯಾಚಾರ ನಡೆಸುತ್ತಿದ್ದ. ಅವನ ಬೇಟೆ ವಿರೋಧಿಸಿದರೆ ನಿರ್ದಾಕ್ಷಿಣ್ಯವಾಗಿ ಕೊಂದು ಶವದ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ತನ್ನಿಂದ ಕೊಲೆಯಾದ ಜನರ ದೇಹಗಳನ್ನು ಕೊಳೆತು ನಾರುವ ಸಮಯದವರೆಗೆ ಮನೆಯಲ್ಲೇ ಇಟ್ಟುಕೊಂಡು ತನ್ನ ಮನಬಂದಾಗೆಲ್ಲ ಶವಗಳ ಜೊತೆ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ

ಸೆನ್ಸೇಷನಲ್ ಕ್ರೈಮ್ ಕತೆಗಳು: ಅಸಹಾಯಕ ಪುರುಷರನ್ನು ಬೇಟೆಯಾಡುತ್ತಿದ್ದ ಡೆನಿಸ್ ನಿಲ್ಸನ್, ಅವರನ್ನು ಕೊಂದು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ!
ಡೆನಿಸ್ ನಿಲ್ಸನ್ ಮತ್ತು ಅವನಿಗೆ ಬಲಿಯಾದವರು
TV9kannada Web Team

| Edited By: Arun Belly

Nov 24, 2022 | 7:57 AM

ನೆಟ್ ಪ್ಲಿಕ್ಸ್ ಸ್ಟ್ರೀಮಿಂಗ್ ಸರ್ವಿಸ್ ನಿಯಮಿತವಾಗಿ ವೀಕ್ಷಿಸುವವರಿಗೆ ಸೆಪ್ಟೆಂಬರ್ 2020ರಲ್ಲಿ ಪ್ರಸಾರವಾದ ಮೆಮೊರೀಸ್ ಆಫ್ ಎ ಮರ್ಡರರ್: ದಿ ನಿಲ್ಸನ್ ಟೇಪ್ಸ್ (The Nilsen Tapes) ಡಾಕ್ಯುಮೆಂಟರಿ ನೆನಪಿರುತ್ತದೆ ಮತ್ತು ಇಂಗ್ಲೆಂಡ್ ಯಾರ್ಕ್ ಶೈರ್ ನಿವಾಸಿಯಾಗಿದ್ದ ಡೆನಿಸ್ ನಿಲ್ಸನ್ (Denis Nilsen) ಹೆಸರಿನ ರಾಕ್ಷಸ ನಡೆಸಿದ ಭಯಾನಕ ಹತ್ಯೆಗಳ ಚಿತ್ರಣ ಸ್ಮೃತಿಪಟಲದಿಂದ ಸರಿದಿರುವುದಿಲ್ಲ. ಅವನೊಬ್ಬ ಅತ್ಯಂತ ಕ್ರೂರ ಮತ್ತು ವಿಲಕ್ಷಣ ವ್ಯಕ್ತಿಯಾಗಿದ್ದ. ವಿಕೃತ ಮನಸ್ಸಿನ ಸಲಿಂಗಿಯಾಗಿದ್ದ (gay) ನಿಲ್ಸನ್ ತನ್ನ ಬೇಟೆಗಳನ್ನು ಬಹಳ ಚಾಣಾಕ್ಷತೆಯಿಂದ ಆರಿಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಒಬ್ಬಂಟಿ ಮತ್ತು ಅಸಹಾಯಕರಾಗಿರುತ್ತಿದ್ದ ಪುರುಷರನ್ನು ಅವನು ಬೇಟೆಯಾಡುತ್ತಿದ್ದ. ಅವನ ಬೇಟೆಗಳಲ್ಲಿ ಬೀದಿಗಳಲ್ಲಿ ಅಲೆಯುತ್ತಿದ್ದ ಮಾದಕ ವ್ಯಸನಿಗಳೂ ಸೇರಿದ್ದರು. ಎರಡರ ಮಿಶ್ರಣದಂತಿದ್ದ ವ್ಯಕ್ತಿಗಳು ಸಹ ಅವನಿಗೆ ಬಲಿಯಾಗಿದ್ದರು.

ಅವನು ಬಲಿ ಪಡೆದವರಲ್ಲಿ ಅತ್ಯಂತ ಚಿಕ್ಕವನೆಂದರೆ 14-ವರ್ಷ-ವಯಸ್ಸಿನ ಸ್ಟೀಫನ್ ಹೋಮ್ಸ್. 2006 ರಲ್ಲಿ ಡಿಎನ್ ಎ ಪರೀಕ್ಷೆ ಮೂಲಕ ಅವನ ಗುರುತು ಪತ್ತೆಯಾಗಿತ್ತು. ಪ್ರಾಯಶ: ಸ್ಟೀಫನ್ ಹೋಮ್ಸ್, ಪಾತಕಿ ನಿಲ್ಸೆನ್ ನ ಮೊದಲ ಬಲಿಯೂ ಆಗಿದ್ದ. ಮಾರ್ಟಿನ್ ಡಫ್ಫಿ ಹೆಸರಿನ ಹುಡುಗ ನಿಲ್ಸೆನ್ ಗೆ ಬಲಿಯಾದಾಗ ಕೇವಲ 16-ವರ್ಷದವನಾಗಿದ್ದ. ಅವನಿಂದ ಕೊಲೆಯಾದ 8 ಜನರ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದರು. ಆದರೆ ಖುದ್ದು ನಿಲ್ಸೆನ್ ಹೇಳಿರುವಂತೆ ಅವನು 15 ಜನರನ್ನು ಕೊಂದಿದ್ದ.

ಜೈಲು ಶಿಕ್ಷೆ ಅನುಭವಿಸುವಾಗ ನಿಲ್ಸನ್ ತನ್ನ ಆತ್ಮ ಚರಿತ್ರೆಯನ್ನು ಬರೆದಿದ್ದು, ಅದರಲ್ಲಿ ತಾನೆಸಗಿದ ಬೇರೆ ಹಲವಾರು ಅಪರಾಧ ಕೃತ್ಯಗಳನ್ನು ಉಲ್ಲೇಖಿಸಿದ್ದಾನೆ. ಕುಡಿದ ಮತ್ತನಲ್ಲಿದ್ದ ಒಬ್ಬ ಯೋಧನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಬಗ್ಗೆ ಅವನು ಪುಸ್ತಕದಲ್ಲಿ ಬರೆದಿದ್ದಾನೆ.

Denis Nilsen in police custody

ಪೊಲೀಸರ ವಶದಲ್ಲಿರುವ ಡೆನಿಸ್ ನಿಲ್ಸನ್

ಅವನನ್ನು ವಿಕೃತ ಮತ್ತು ವಿಲಕ್ಷಣ ಅಂತ ಹೇಳಲು ಕಾರಣವಿದೆ. ತನ್ನ ಬೇಟೆಯನ್ನು ಮನೆಗೆ ಕರೆತಂದ ಬಳಿಕ ಅವನು ಮೊದಲು ಲೈಂಗಿಕ ಅತ್ಯಾಚಾರ ನಡೆಸುತ್ತಿದ್ದ. ಅವನ ಬೇಟೆ ವಿರೋಧಿಸಿದರೆ ನಿರ್ದಾಕ್ಷಿಣ್ಯವಾಗಿ ಕೊಂದು ಶವದ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ತನ್ನಿಂದ ಕೊಲೆಯಾದ ಜನರ ದೇಹಗಳನ್ನು ಕೊಳೆತು ನಾರುವ ಸಮಯದವರೆಗೆ ಮನೆಯಲ್ಲೇ ಇಟ್ಟುಕೊಂಡು ತನ್ನ ಮನಬಂದಾಗೆಲ್ಲ ಶವಗಳ ಜೊತೆ ಅಸ್ವಾಭಾವಿಕ ಸೆಕ್ಸ್ ನಡೆಸುತ್ತಿದ್ದ. ‘ಶವಗಳನ್ನು ಮನೆಯಲ್ಲಿಟ್ಟುಕೊಂಡು ಅವುಗಳೊಂದಿಗೆ ಸೆಕ್ಸ್ ನಡೆಸುತ್ತಿದ್ದೆ ಮತ್ತು ಶವಗಳೊಂದಿಗೆ ಮಾತಾಡುತ್ತಿದ್ದೆ’ ಎಂದು ಅವನು ಪೊಲೀಸರಿಗೆ ಹೇಳಿದ್ದ.

1983ರಲ್ಲಿ ಅವನು ಪೊಲೀಸರಿಗೆ ಸಿಕ್ಕ ಬಳಿಕ ಅವನ ವಿಚಾರಣೆ ನಡೆದು 6 ಹತ್ಯೆ ಮತ್ತು 2 ಕೊಲೆ ಪ್ರಯತ್ನ ನಡೆಸಿದ ಅಪರಾಧದಲ್ಲಿ ನ್ಯಾಯಾಲಯ 25 ವರ್ಷಗಳ ಕಾರಾಗೃಹವಾಸದ ಶಿಕ್ಷೆ ವಿಧಿಸಿತ್ತು ನಂತರ ಅದನ್ನು ಜೀವಾವಧಿ ಸೆರೆವಾಸದ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು. ನಿಲ್ಸನ್ ಗೆ ಆಗ 37ರ ಪ್ರಾಯ.

ಜೈಲಿನಲ್ಲಿದ್ದಾಗ ಅದೊಂದು ದಿನ ನಿಲ್ಸನ್ ಭಯಂಕರ ಹೊಟ್ಟೆ ನೋವು ಎಂದು ಜೈಲು ಅಧಿಕಾರಿಯೊಬ್ಬರ ಬಳಿ ಹೇಳಿಕೊಂಡ. ಅವನನ್ನು ಜೈಲಿನ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಹೊಟ್ಟೆ ಭಾಗದ ಸ್ಕ್ರೀನಿಂಗ್ ಮಾಡಲು ವೈದ್ಯರು ಮುಂದಾದಾಗ ಅವನು ಬೇಡ ಅಂತ ಹೇಳಿ ತಾನಾಗಿಯೇ ತನ್ನ ಸೆಲ್ ನೊಳಗೆ ಹೋಗಿದ್ದ.

ವಿಚಾರಣೆಯ ಸಂದರ್ಭದಲ್ಲಿ ಫುಲ್ ಸುಟ್ಟನ್ ಜೈಲಿನ ಆರೋಗ್ಯ ಕೇಂದ್ರದ ಮುಖ್ಯಸ್ಥೆಯಾಗಿದ್ದ ಲಿಸಾ ನೊಬ್ಲ್, ‘ಅರೋಗ್ಯ ಕೇಂದ್ರ ಅವನಿಗೆ ಇಷ್ಟವಾಗಲಿಲ್ಲ, ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಆರೋಗ್ಯ ಕೇಂದ್ರದ ಸಿಬ್ಬಂದಿ ಅವನಿಗೆ ಇಇಷ್ಟವಾಗಲಿಲ್ಲ,’ ಎಂದು ಹೇಳಿದ್ದರು.

ನಂತರ ಅವನನ್ನು ಆಸ್ಪತ್ರೆಯೊಂದಕ್ಕೆ ಒಯ್ದು ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆದರೆ ಅದಾಗಲೇ ಅವನ ದೇಹಕ್ಕೆ ಸಾಕಷ್ಟು ಹಾನಿಯುಂಟಾಗಿತ್ತು. ಶ್ವಾಸಕೋಶದ ರಕ್ತ ನಾಳವೊಂದು ಬ್ಲಾಕ್ ಮತ್ತು ಹೊಟ್ಟೆಯಲ್ಲಿ ರಕ್ತಸ್ರಾವ ಆದ ಕಾರಣ ನಿಲ್ಸನ್ ಮೇ 12, 2018ರಂದು ಕೊನೆಯುಸಿರೆಳೆದ.

ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada