Mobile Snatching: ಕದ್ದ ಮೊಬೈಲ್​ಗಳ ಐಎಂಇಐ ನಂಬರ್ ಬದಲಾವಣೆ: ಟೆಕ್ನಾಲಜಿ ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಖದೀಮರು

ಬೆಂಗಳೂರಿನಲ್ಲಿ ಪ್ರತಿನಿತ್ಯ ನಡೆಯುತ್ತಿರುವಂತ ಅತೀಹೆಚ್ಚು ಕ್ರೈಂಗಳು ಅಂದ್ರೆ ಅದು ಮೊಬೈಲ್​ ಸ್ನ್ಯಾಚಿಂಗ್​, ಕನಿಷ್ಠ ಅಂದ್ರು ನಗರದಲ್ಲಿ ದಿನಕ್ಕೆ 100 ಕ್ಕೂ ಹೆಚ್ಚು ಮೊಬೈಲ್ ಸ್ನ್ಯಾಚಿಂಗ್ ಆಗುತ್ತವೆ.

Mobile Snatching: ಕದ್ದ ಮೊಬೈಲ್​ಗಳ ಐಎಂಇಐ ನಂಬರ್ ಬದಲಾವಣೆ: ಟೆಕ್ನಾಲಜಿ ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಖದೀಮರು
ಪ್ರಾತಿನಿಧಿಕ ಚಿತ್ರImage Credit source: deccanherald.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 29, 2022 | 9:53 PM

ಬೆಂಗಳೂರು: ನಗರದಲ್ಲಿ ಪ್ರತಿನಿತ್ಯ ನಡೆಯುತ್ತಿರುವಂತ ಅತೀಹೆಚ್ಚು ಕ್ರೈಂಗಳು ಅಂದ್ರೆ ಅದು ಮೊಬೈಲ್​ ಸ್ನ್ಯಾಚಿಂಗ್ (Mobile Snatching)​, ಕನಿಷ್ಠ ಅಂದ್ರು ನಗರದಲ್ಲಿ ದಿನಕ್ಕೆ 100 ಕ್ಕೂ ಹೆಚ್ಚು ಮೊಬೈಲ್ ಸ್ನ್ಯಾಚಿಂಗ್ ಆಗುತ್ತವೆ. ಇಲ್ಲಿ ಮೊಬೈಲ್ ಕಳ್ಳತನ ಹಾಗೂ ಮೊಬೈಲ್ ಸ್ನ್ಯಾಚಿಂಗ್​ಗೂ ವ್ಯತ್ಯಾಸ ಇದೆ. ಯಾಕಂದ್ರೆ ಕಳ್ಳತನ ಅಂದ್ರೆ ಏಲ್ಲಿಯೋ ಇಟ್ಟಿದ್ದ ಮೊಬೈಲ್ ಕಳ್ಳತನ ಮಾಡುವುದು ಅಥವಾ ಜೋಬಿನಲ್ಲಿ ಇರುವ ಮೊಬೈಲ್​ನ್ನು ಕಳ್ಳತನ ಮಾಡುವುದು. ಆದರೆ ಮೊಬೈಲ್ ಸ್ನ್ಯಾಚಿಂಗ್​ ಅಂದ್ರೆ ರಸ್ತೆ ಬದಿಯಲ್ಲಿ ಒಂಟಿಯಾಗಿ ನಡೆದುಹೋಗುತ್ತಿರುವಾಗ ಕಿವಿಯಲ್ಲಿ ಮೊಬೈಲ್ ಇಟ್ಟುಕೊಂಡು ಮಾತನಾಡುತಿರುವಾಗ ಅದನ್ನು ದ್ವಿಚಕ್ರ ವಾಹನದಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಹೋಗುತ್ತಾರೆ. ನಗರದಲ್ಲಿ ಕನಿಷ್ಠ ಅಂದ್ರು 1000ಕೂ ಹೆಚ್ಚು ಮೊಬೈಲ್ ಸ್ನಾಚರ್ಸ್​ಗಳು ಆಕ್ಟಿವ್ ಆಗಿದ್ದಾರೆ ಎನ್ನೊ ಮಾಹಿತಿ ಇದೆ.

ಇದೆಲ್ಲದರ ನಡುವೆ ಕದ್ದ ಮೊಬೈಲ್​ಗಳನ್ನು ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದರು. ಅದನ್ನು ಹೈದ್ರಬಾದ್​ನಲ್ಲಿ ಇರುವ ಹಲವು ಲೀಕಲ್ ಮಾರ್ಕೇಟ್​ನಿಂದ ಸಹ ಹಲವು ಬಾರಿ ಸೀಜ್ ಮಾಡಿಕೊಂಡು ಬಂದಿದ್ದಾರೆ ಬೆಂಗಳೂರು ಪೊಲೀಸರು. ಆದರೆ ಇದೇ ಕದೀಮರು ಪೊಲೀಸರಿಗೆ ಕದ್ದ ಮೊಬೈಲ್​ಗಳನ್ನು ಟ್ರಾಕ್ ಮಾಡಲಿಕ್ಕೆ ಇರುವ ಒಂದೇ ಒಂದು ದಾರಿ ಅಂದರೆ ಅದು ಐಎಂಇಐ ನಂಬರ್. ಪ್ರತಿ ಮೊಬೈಲ್​ಗೂ ಬೇರೆ ಬೇರೆಯಾಗಿರುವ ಐಎಂಇ ನಂಬರ್​ಗಳಿರುತ್ತದೆ. ಆದ್ರೆ ಈಗ ಐಎಂಇಐ ನಂಬರ್​ಗಳನ್ನೆ ಚೇಂಜ್ ಮಾಡಿ ಮಾರಟ ಮಾಡ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Kidnap: ಹಣ ವಸೂಲಿಗೆ ಹೈಡ್ರಾಮಾ -ಕಿಡ್ನಾಪರ್​​ಗಳನ್ನೇ ಮೀರಿಸಿದ ಹಾವೇರಿ ಸೈಬರ್ ಪೊಲೀಸರು, ಸ್ವಲ್ಪದರಲ್ಲಿ ಚಿಕ್ಕಬಳ್ಳಾಪುರ ಪೊಲೀಸರಿಂದ ಬಚಾವ್

ಮಲ್ಟಿ ಯುಟಿಲಿಟಿ ಟೂಲ್ ಬಳಸಿ ಐಎಂಇಐ ನಂಬರ್ ಬದಲಾವಣೆ

ಬೆಂಗಳೂರಿನ ಅಶೋಕ್ ನಗರ ಪೊಲೀಸರು ಅಜೀತ್ ಮತ್ತು ಗೋಪಿ ಮೊಬೈಲ್ ಸ್ನಾಚರ್ಸ್​ಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಇಬ್ಬರು ಆರೋಪಿಗಳು ಕದ್ದ ಮೊಬೈಲ್​ಗಳನ್ನು ಏನು ಮಾಡ್ತಿದ್ರು ಅನ್ನೊ ವಿಚಾರಣೆ ನಡೆಸಿದ್ದಾರೆ. ಆಗ ಬೆಂಗಳೂರಿನ ಮೊಬೈಲ್ ಸ್ನ್ಯಾಚಿಂಗ್ ನೆಟ್ವರ್ಕ್ ಸಂಪರ್ಣವಾಗಿ ಅರ್ಥ ಮಾಡಿಕೊಂಡು ನೋಡಿದ್ರೆ ಕೊನೆಗೆ ಬಂದು ನಿಲ್ಲುವುದು ಎಸ್​ಪಿ ರೋಡ್ ಗಲ್ಲಿಗಳಿಂದ ಜೆಜೆ ನಗರದ ಕಡೆಗೆ. ಇಲ್ಲೂ ಸಹ ಹಾಗೆಯೇ ಮಾಹಿತಿ ಸಿಕ್ಕಿದೆ. ಅಜೀತ್ ಮತ್ತು ಗೋಪಿ ಕದ್ದ ಮೊಬೈಲ್​ಗಳನ್ನು ಎಸ್ ಪಿ ರೋಡ್​ನಲ್ಲಿ ಓರ್ವನಿಗೆ ಕೊಡ್ತಿದ್ದರಂತೆ. ನಂತರ ಅಲ್ಲಿಂದ ಮೊಬೈಲ್ ಜೆಜೆನಗರದ ಶಾಹೀಲ್​ಗೆ ತಲುಪುತಿತ್ತು. ಶಾಹೀಲ್ ಕೈಗೆ ಮೊಬೈಲ್ ಬಂದ ನಂತ್ರ ಈ ಆರೋಪಿ ಟೆಕ್ನಾಲಜಿ ಬಳಸಿ ಐಎಂಇ ನಂಬರ್​ನ್ನು ಬದಲಾವಣೆ ಮಾಡ್ತಿದ್ದ.

ಒಂದು ಮೊಬೈಲ್ ಐಎಂಇ ನಂಬರ್ ಬದಲಾವಣೆ ಮಾಡಲಿಕ್ಕೆ 600 ರೂ ಹಣ ಪಡೆದುಕೊಳ್ತಿದ್ದ ಈ ಶಾಹೀಲ್. ಅಷ್ಟಕ್ಕೂ ಇಲ್ಲಿ ಶಾಹೀಲ್ ಡಿಪ್ಲೊಮಾ ವ್ಯಾಸಾಂಗ್ ಮಾಡಿ ಮನೆಯಲ್ಲಿದ. ಇವನಿಗೆ ಟೆಕ್ನಾಲಜಿ ಬಗ್ಗೆ ಚೆನ್ನಾಗಿ ಗೊತ್ತಿತ್ತು ಹೀಗಾಗಿ ಒಂದು ಕಂಪ್ಯೂಟರ್ ಅದಕ್ಕೆ ಒಂದು ಡಾಂಗಲ್ ಮೂಲಕ ಇಂಟರ್​ನೆಟ್ ವ್ಯವಸ್ಥೆ ಮಾಡಿಕೊಂಡಿದ್ದ. ಮಲ್ಟಿ ಯುಟಿಲಿಟಿ ಟೂಲ್ ಎನ್ನುವ ವೆಬ್ ಸೈಟ್​ಗೆ ಲಾಗಿನ್ ಆಗಿ, ಅಲ್ಲಿ ಒಂದಷ್ಟು ಹಣವನ್ನು ಪೇ ಮಾಡಿ ಸಾಫ್ವೇರ್ ಖರೀದಿ ಮಾಡಿದ್ದಾನೆ. ಅದೇ ಸಾಫ್ವೇರ್ ಬಳಸಿಕೊಂಡು ಕದೀಮರು ಕದ್ದು ತಂದು ಕೊಡ್ತಿದ್ದ ಮೊಬೈಲ್​ಗಳನ್ನು ಫ್ಲಾಶ್ ಮಾಡಿ ಐಎಂಇ ನಂಬರ್​ನ್ನು ಡಿಲೀಟ್ ಮಾಡ್ತಿದ್ದ.

ಇದನ್ನೂ ಓದಿ: Gadag News: ಗ್ರಾಮೀಣ ಭಾಗದ ಜನ್ರ ಮುಗ್ಧತೆ ದುರುಪಯೋಗ: ಕ್ರೇಡಿಟ್ ಕಾರ್ಡ್ ಬಳಸಿ 6 ಲಕ್ಷ ರೂ. ದೋಚಿದ ಸೇಲ್ಸ್ ಮನ್

ಕದ್ದ ಮೊಬೈಲ್​ಗೆ ಸ್ಕ್ರಾಪ್ ಆಗಿರುವ ಮೊಬೈಲ್ ಐಎಂಇ

ಒಂದು ಸಹ ಮೊಬೈಲ್ ಶಾಹೀಲ್ ಕೈಗೆ ಸಿಕ್ಕರೆ ಅದನ್ನು ಡೆಟಾ ಕೇಬಲ್ ಮೂಲಕ ಕಂಪ್ಯೂಟರ್​ಗೆ ಕನಕ್ಟ್ ಮಾಡುತ್ತಿದ್ದ. ನಂತರ ಮೊಬೈಲ್ ಸಾಫ್ವೇರ್​ಗೆ ಎಂಟರ್ ಆಗಿ ಮೊಬೈಲ್ ಫ್ಲಾಶ್ ಮಾಡುತ್ತಿದ್ದ. ಒಂದು ಸಲ ಮೊಬೈಲ್ ಫ್ಲಾಶ್ ಆಯ್ತು ಅಂದ್ರೆ ಅಲ್ಲಿ ಐಎಂಇ ನಂಬರ್ ಇಲ್ಲದಂತೆ ಆಗುತ್ತೆ. ಆಗ ಅವರ ಹತ್ತಿರವಿರುವ ಬೇಸಿಕ್ ಮೊಬೈಲ್ ಅಂದರೆ ಮಾರ್ಕೇಟ್​ನಲ್ಲಿ 200, 300ರೂಗೆ ಸಿಗುವ ಹಳೆಯ ಸ್ಕ್ರಾಪ್ ಮೊಬೈಲ್​ಗಳನ್ನು ಮೊದಲೇ ಕೊಂಡಿರುತಿದ್ರು. ಹಳೆಯ ಮೊಬೈಲ್ ಐಎಂಇಐ ನಂಬರ್​ಗಳನ್ನು ಅಪ್ಡೇಟ್ ಮಾಡ್ತಿದ್ರು. ಒಂದು ಸಲ ಮೊಬೈಲ್ ಫ್ಲಾಶ್ ಆಗಿ ಅದಕ್ಕೆ ಹೊಸ ಐಎಂಇ ನಂಬರ್ ಬಂದ ನಂತ್ರ ಮತ್ತೆ ಮಾರ್ಕೆಟ್​ನಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಅಂತ ಸೇಲ್ ಮಾಡ್ತಾರೆ. ಇನ್ನು ಐಫೋನ್​ಗಳಾದ್ರೆ ಅದನ್ನು ಬಿಡಿ ಭಾಗಗಳಾಗಿ ವಿಂಗಡಿಸಿ ಸ್ಪೇರ್ ಪಾರ್ಟ್ ಗಳನ್ನೆ ಮಾರಾಟ ಮಾಡ್ತಾರೆ. ಇಲ್ಲಿ ಪೊಲೀಸರು ಕದ್ದ ಮೊಬೈಲ್​ಗಳ ಐಎಂಇ ನಂಬರ್ ಟ್ರಾಕ್​ಗೆ ಹಾಕಿಕೊಂಡು ನೋಡ್ತಿದ್ರೆ ಆ ಮೊಬೈಲ್​ಗಳು ಎಂದಿಗೂ ಆನ್ ಆಗುವುದೆ ಇಲ್ಲಾ.

ವರದಿ: ಪ್ರಜ್ವಲ್ ಟಿವಿ 9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:51 pm, Thu, 29 December 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ