Crime News: ಡ್ರಗ್ಸ್​ನೊಂದಿಗೆ ಯುವತಿ ಜೊತೆ ಲಾಡ್ಜ್​​ನಲ್ಲಿದ್ದ ನಾಲ್ವರ ಬಂಧನ..!

Crime News In Kannada: ಈ ವೇಳೆ ಹೊಟೇಲ್​ ಲಾಡ್ಜ್​ನಲ್ಲಿ ಓರ್ವ ಯುವತಿ ಸೇರಿದಂತೆ ಐವರು ರೂಮ್ ಬುಕ್ ಮಾಡಿಕೊಂಡಿರುವುದು ಕಂಡು ಬಂದಿದೆ. ಇವರನ್ನು ವಶಕ್ಕೆ ಪಡೆದು ಕೊಠಡಿ ಪರಿಶೀಲಿಸಿದಾಗ ಎಂಡಿಎಂಎ ಸಿಕ್ಕಿದೆ.

Crime News: ಡ್ರಗ್ಸ್​ನೊಂದಿಗೆ ಯುವತಿ ಜೊತೆ ಲಾಡ್ಜ್​​ನಲ್ಲಿದ್ದ ನಾಲ್ವರ ಬಂಧನ..!
ಬಂಧಿತ ಐವರು
TV9kannada Web Team

| Edited By: Zahir PY

Jul 31, 2022 | 6:02 PM

Crime News In Kannada: ಮಾದಕ ವಸ್ತುಗಳು ಮತ್ತು ಸೆಕ್ಸ್ ಟಾಯ್ಸ್ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ನ ಕೇರಳದ ಪಂದಳಂ ನಗರ ನಾರ್ಕೋಟಿಕ್ ಸೆಲ್ ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂನ ಶಾಹಿನಾ ಪಳ್ಳಿಕಲ್, ಅಡೂರಿನ ರಾಹುಲ್ (ಮೊನೈ), ಪೆರಿಂಗನಾಡಿನ ಆರ್ಯನ್, ಪಂದಳಂನ ವಿಧು ಕೃಷ್ಣನ್ ಮತ್ತು ಕೊಡುಮೋನಿನ ಸಜಿನ್ ಬಂಧಿತರು. ಶುಕ್ರವಾರ ಸಂಜೆ ಶಾಹಿನಾ ಮತ್ತು ರಾಹುಲ್ ಪಂದಳಂನ ರಿವರ್​ವಾಕ್​ ಹೊಟೇಲ್‌ ಲಾಡ್ಜ್​ನಲ್ಲಿ ರೂಂ ಬುಕ್ ಮಾಡಿದ್ದರು. ಇದೇ ವೇಳೆ ಕೆಲವು ಗ್ರಾಹಕರು ಅವರನ್ನು ಭೇಟಿ ಮಾಡಿದ್ದಾರೆ.

ಅದಾಗಲೇ ನಗರದಲ್ಲಿನ ಡ್ರಗ್ಸ್​ ಮಾಫಿಯಾ ಮೇಲೆ ಮೊದಲೇ ಕಣ್ಣಿಟ್ಟಿದ್ದ ನಾರ್ಕೋಟಿಕ್ ಸೆಲ್​ ಪೊಲೀಸರಿಗೆ ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಮಾದಕ ವಸ್ತುಗಳು ರವಾನೆಯಾಗಿರುವ ಖಚಿತ ಮಾಹಿತಿ ಲಭಿಸಿತ್ತು. ಹೀಗಾಗಿ ವಿಶೇಷ ತಂಡವನ್ನು ರಚಿಸಿ ಮಾದಕ ವಸ್ತುಗಳ ಮಾರಾಟಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಅದರಂತೆ ರಿವರ್​​ವಾಕ್ ಲಾಡ್ಜ್​ನಿಂದ ಡ್ರಗ್ಸ್ ಸಪ್ಲೈ ಆಗುತ್ತಿರುವ ಖಚಿತ ಮಾಹಿತಿ ಪಡೆದ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯ ಪಡೆ (ಡಾನ್‌ಸಾಫ್) ಹೊಟೇಲ್​ ಮೇಲೆ ದಾಳಿ ನಡೆಸಿದೆ.

ಈ ವೇಳೆ ಹೊಟೇಲ್​ ಲಾಡ್ಜ್​ನಲ್ಲಿ ಓರ್ವ ಯುವತಿ ಸೇರಿದಂತೆ ಐವರು ರೂಮ್ ಬುಕ್ ಮಾಡಿಕೊಂಡಿರುವುದು ಕಂಡು ಬಂದಿದೆ. ಇವರನ್ನು ವಶಕ್ಕೆ ಪಡೆದು ಕೊಠಡಿ ಪರಿಶೀಲಿಸಿದಾಗ ಎಂಡಿಎಂಎ ಮಾದಕ ಮಾತ್ರೆಗಳು ಹಾಗೂ ಸೆಕ್ಸ್​ ಟಾಯ್ಸ್​ಗಳು ಸಿಕ್ಕಿದೆ. ಈ ತಂಡವು ಮಾದಕ ವಸ್ತುಗಳನ್ನು ಲಾಡ್ಜ್​ನಿಂದ ಇತರೆಡೆಗೆ ರವಾನಿಸಲು ಪ್ಲ್ಯಾನ್ ರೂಪಿಸಿತ್ತು. ಇದೀಗ ದಾಳಿ ವೇಳೆ ಅಪಾರ ಪ್ರಮಾಣದ ಎಂಡಿಎಂಎ ಡ್ರಗ್ಸ್​ ಸಿಕ್ಕಿರುವುದಾಗಿ ನಾರ್ಕೋಟಿಕ್ ಸೆಲ್ ಉಪ ಪೊಲೀಸ್ ಅಧೀಕ್ಷಕ ಕೆಎ ವಿದ್ಯಾಧರನ್ ತಿಳಿಸಿದ್ದಾರೆ.

ಆರೋಪಿಗಳೆಲ್ಲರೂ ಡ್ರಗ್ಸ್ ಡೀಲರ್‌ಗಳಾಗಿದ್ದು, ಎಂಡಿಎಂಎ ಅನ್ನು ಬೆಂಗಳೂರಿನಿಂದ ತರಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮಾರಾಟಕ್ಕೂ ಮುನ್ನ ಪಂದಳಂನಲ್ಲಿರುವ ಹೋಟೆಲ್ ಕೊಠಡಿಗೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರ ಜೊತೆಗೆ ಸೆಕ್ಸ್ ಟಾಯ್ಸ್​ಗಳನ್ನು ಇದೇ ತಂಡ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಯಾರಿಗೂ ಅನುಮಾನ ಮೂಡಬಾರದೆಂಬ ಉದ್ದೇಶದೊಂದಿಗೆ, ಲಾಡ್ಜ್​ನಲ್ಲಿ ರೂಮ್ ಬುಕ್ ಮಾಡಿದಾಗ  ಶಾಹಿನಾಳನ್ನು ಜೊತೆಗೆ ಕರೆದುಕೊಂಡು ಬಂದಿದ್ದಾಗಿ ಆರೋಪಿಗಳು ಪ್ರಾಥಮಿಕ ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ. ಸದ್ಯ ದಕ್ಷಿಣ ಕೇರಳದಲ್ಲಿ ನಡೆದ ಅತಿ ದೊಡ್ಡ ಡ್ರಗ್ ದಂಧೆಯಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಖಚಿತವಾಗಿದ್ದು, ಇನ್ನು ಹಲವರು ಈ ಮಾಫಿಯಾ ಹಿಂದೆಯಿದ್ದು,  ಈ ಜಾಲದ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿಯೊಂದಿಗೆ  ಶೀಘ್ರದಲ್ಲೇ ಡ್ರಗ್ಸ್ ಮಾಫಿಯಾ ಹಿಂದಿರುವ ಪ್ರಮುಖ ಆರೋಪಿಗಳನ್ನು ಬಂಧಿಸುವುದಾಗಿ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯ ಪಡೆ (DANSAF) ತಿಳಿಸಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada