ದಾವಣಗೆರೆ: ಹಾಡಹಗಲೇ ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಗಣೇಶ್ ಪ್ರಮುಖ ಆರೋಪಿಯಾಗಿದ್ದಾನೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಮಹದೇವಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈಟ್ ವಿಚಾರವಾಗಿ ಗಣೇಶ್, ಸಿಮೆಂಟ್ ಅಂಗಡಿ ಮಾಲೀಕ ಪಿ.ಡಿ.ಮಹದೇವಪ್ಪ ನಡುವೆ ಜಗಳವಾಗಿತ್ತು. ಇದೇ ವಿಚಾರವಾಗಿ ಮಹದೇವಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಸೈಟ್ ವಿಚಾರವಾಗಿ ಡಿ.24ರಂದು ಮಹದೇವಪ್ಪ ಮೇಲೆ ಬೈಕ್ನಲ್ಲಿ ಬಂದಿದ್ದ ಪುಂಡರು ಮಚ್ಚಿನಿಂದ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದೆ.
ಈ ಸಂಬಂಧ ಗಾಯಾಳು ಮಹದೇವಪ್ಪ ಸಹೋದರ ಮಹೇಶ್ ಎಂಬುವರು ದೂರು ದಾಖಲಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ಎ1 ಆರೋಪಿಯೆಂದು ಎಫ್ಐಆರ್ ದಾಖಲಿಸಿರುವ ವಿದ್ಯಾನಗರ ಪೊಲೀಸರು ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದಾರೆ.
Published On - 4:36 pm, Thu, 26 December 19