ಲೈಂಗಿಕ ಅಪರಾಧ (Sex offence) ನಡೆಸಿ ಜೈಲು ಸೇರಿರುವ ವ್ಯಕ್ತಿಯೊಬ್ಬನ ಕಂಪ್ಯೂಟರ್ ನಲ್ಲಿ ಮನುಕುಲಕ್ಕೆ ಸೇರಿದವರು ಊಹಿಸಲೂ ಸಾಧ್ಯವಾಗದ, ಅಸಹ್ಯಕರ ಮತ್ತು ಹೇವರಿಕೆ ಹುಟ್ಟಿಸುವ ಶಿಶುಕಾಮದ ಚಿತ್ರ ಪತ್ತೆಯಾಗಿದೆ. ಆಡಂ ಪಾರ್ಕ್ ಹೆಸರಿನ ಅಪರಾಧಿಯು, ಒಂದು ವರ್ಷದ ಹಸುಳೆಯ ಮೇಲೆ ವಯಸ್ಕನೊಬ್ಬ ಲೈಂಗಿಕ ಅತ್ಯಾಚಾರ ನಡೆಸುತ್ತಿರುವ ಅಮಾನವೀಯ ವಿಡಿಯೋವನ್ನು ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡಿದ್ದಾನೆ. 41-ವರ್ಷ-ವಯಸ್ಸಿನ ಪಾರ್ಕ್ ಡಾರ್ಕ್ ವೆಬ್ ಅನ್ನು ಎಕ್ಸೆಸ್ ಮಾಡಿಕೊಳ್ಳಲು ಟಾರ್ ಬ್ರೌಸರ್ ಬಳಸಿರುವುದನ್ನು ಸಹ ಪೊಲೀಸರು ಪತ್ತೆ ಮಾಡಿದ್ದಾರೆ.
ಇದರರ್ಥ, ಇಂಗ್ಲೆಂಡ್ ಸ್ಟಾಫರ್ಡ್ ಶೈರ್ ನ ಫೆಂಟನ್ ನಿವಾಸಿಯಾಗಿರುವ ಪಾರ್ಕ್ ಸೆಕ್ಸುಯಲ್ ಹಾರ್ಮ್ ಪ್ರಿವೆನ್ಷನ್ ಆರ್ಡರ್ (ಎಸ್ ಎಚ್ ಪಿ ಒ) ಅಡಿಯಲ್ಲಿ ಪುನಃ ಅಪರಾಧವೆಸಗಿದ್ದಾನೆ. ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಮತ್ತು ಇಮೇಜುಗಳನ್ನು ಸೃಷ್ಟಿಸುವುದು ಮತ್ತು ಹೊಂದುವುದು ಈ ಆರ್ಡರ್ ಅಡಿ ಗಂಭೀರ ಅಪರಾಧವಾಗಿದೆ. ಶಿಕ್ಷೆ ಅನುಭವಿಸುವಾಗ ಪರೋಲ್ ಪಡೆದು ಮನೆಗೆ ಹೋದಾಗ ಅವನು ಅದೇ ಅಪರಾಧಗಳನ್ನು ಪುನರಾವರ್ತಿಸಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರೊಬ್ಬರು ಹೇಳಿದ್ದಾರೆ.
ಅಸಲಿಗೆ ಅವನಿಗೆ 2016 ರಲ್ಲಿ ಎಸ್ ಎಚ್ ಪಿ ಒ ಆರ್ಡರ್ ಅಡಿ 5-ವರ್ಷ ಶಿಕ್ಷೆಯಾಗಿತ್ತು ಮತ್ತು ಆದು ಏಪ್ರಿಲ್ 29, 2021ರಲ್ಲಿ ಕೊನೆಗೊಳ್ಳುವುದಿತ್ತು. ಯುಕೆಯಲ್ಲಿ ಕೈದಿಯೊಬ್ಬನನ್ನು ಬಿಡುಗಡೆ ಮಾಡುವ ಮೊದಲು ಪೊಲೀಸರು ಒಂದು ರಿಸ್ಕ್ ಅಸೆಸ್ಮೆಂಟ್ ಪ್ರಕ್ರಿಯೆ ನಡೆಸುತ್ತಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಮಾರ್ಕ್ ಬ್ರೂಕ್ಸ್ ಅವರು ಹೇಳಿರುವ ಪ್ರಕಾರ ಒಬ್ಬ ಪೊಲೀಸ್ ರಿಸ್ಕ್ ಅಸ್ಸೆಸ್ಸರ್ ಏಪ್ರಿಲ್ 18, 2021 ರಂದು ರಿಸ್ಕ್ ಅಸೆಸ್ಮೆಂಟ್ ನಡೆಸಲು ಅವನ ಮನೆಗೆ ಹೋಗಿದ್ದಾರೆ.
ಪಾರ್ಕ್ ಕಂಪ್ಯೂಟರ್ ನಲ್ಲಿ ಅತ್ಯಂತ ಹೀನ ಶಿಶುಕಾಮದ ವಿಡಿಯೋ ಪತ್ತೆಯಾಗಿದೆ. ಅಶ್ಲೀಲ ವಿಡಿಯೋಗಳ ಪೈಕಿ ಹೀನ ಮತ್ತು ಹೇಸಿಗೆ ಹುಟ್ಟಿಸುವ ವಿಡಿಯೋಗಳನ್ನು ಯುಕೆಯಲ್ಲಿ ಎ ಕೆಟೆಗೆರಿಯೆಂದು ವರ್ಗೀಕರಿಸಲಾಗುತ್ತದೆ.
‘ಒಬ್ಬ ವಯಸ್ಕ ವ್ಯಕ್ತಿ ಒಂದು ವರ್ಷದ ಹಸುಳೆಯ ಮೇಲೆ ಅತ್ಯಾಚಾರ ನಡೆಸುವ ವಿಡಿಯೋ ಪಾರ್ಕ್ ಮನೆಯಲ್ಲಿ ಸಿಕ್ಕಿದೆ’ ಎಂದು ಮಾರ್ಕ್ ಬ್ರೂಕ್ಸ್ ಹೇಳಿದ್ದಾರೆ.
ಆನ್ಲೈನ್ ನಲ್ಲಿ ತನ್ನ ಹೆಸರು ಯಾರಿಗೂ ಗೊತ್ತಾಗದಿರಲು ಅವನು ಟೋರ್ ಸ್ಟ್ರೀಮಿಂಗ್ ಫೆಸಿಲಿಟಿಯನ್ನು ಬಳಸಿದ್ದಾನೆ,’ ಎಂದ ಬ್ರೂಕ್ಸ್ ಹೇಳಿದ್ದಾರೆ.
‘ಎಸ್ ಎಚ್ ಪಿ ಒ ಆರ್ಡರ್ ಉಲ್ಲಂಘಿಸಿದ ಮತ್ತು ಮಗುವಿನ ಅಸಭ್ಯ, ಅಶ್ಲೀಲ ಚಿತ್ರವನ್ನು ಹೊಂದಿದ ಎರಡು ಆರೋಪಗಳಿಗೆ ಪಾರ್ಕ್ ತಪ್ಪೊಪ್ಪಿಕೊಂಡಿದ್ದಾನೆ. ಪಾರ್ಕ್ ಒಬ್ಬ ಮದ್ಯ ವ್ಯಸನಿಯಾಗಿದ್ದಾನೆ, ಎಂದು ಅವನ ಪರ ವಕೀಲ ಹಮಿಶ್ ನೋಬಲ್ ಹೇಳಿದ್ದಾರೆ.
ಇದನ್ನೂಓದಿ: ಯುದ್ಧ ನಿಲ್ಲಿಸಿ, ಶಾಂತಿ ಕಾಪಾಡಿ, ರಷ್ಯಾಕ್ಕೆ ಸಲಹೆ ನೀಡಿದ ವಿದೇಶಾಂಗ ಸಚಿವ ಜೈಶಂಕರ್
‘ಅವನು ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದ ಮತ್ತ್ತು ಸಾಮಾಜಿಕವಾಗಿ ಯಾರೊಂದಿಗೂ ಬೆರೆಯುತ್ತ್ತಿರಲಿಲ್ಲ. ಯಾವುದೇ ಮಹಿಳೆಯೊಂದಿಗೆ ಅವನು ದೀರ್ಘಾವಧಿಯ ಸಂಬಂಧವನ್ನು ಹೊಂದಿರಲಿಲ್ಲ. ಅವನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಒತ್ತಡ ಜಾಸ್ತಿ ಇತ್ತು. ಸಹೋದ್ಯೋಗಿಗಳು ಮತ್ತು ಬಾಸ್ ಗಳು ಪೀಡಿಸುತ್ತಾರೆ ಅಂತ ಅವನು ಹೇಳುತ್ತಿದ್ದ. ಬಾಲ್ಯದಲ್ಲೂ ಶಾಲೆಯಲ್ಲಿ ಬುಲ್ಲಿಯಿಂಗ್ ಗೆ ಅವನು ತುತ್ತಾಗುತ್ತಿದ್ದ ಮತ್ತು ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ’ ಎಂದು ನೋಬಲ್ ಹೇಳಿದ್ದಾರೆ.
ಪಾರ್ಕ್ ಟಾರ್ ಬ್ರೌಸರ್ ಬಳಸಿದ್ದನ್ನು ಮತ್ತು ಎ ಕೆಟೆಗೆರಿಯ ವಿಡಿಯೋಗೆ ಌಕ್ಸೆಸ್ ಪಡೆದಿದ್ದನ್ನು ಅಂಗೀಕರಿಸಿದ್ದಾನೆ. ಸಮುದಾಯದಲ್ಲಿ ಅವನನ್ನು ನಿರ್ವಹಿಸಬಹುದು ಎಂದು ವರದಿ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿದ ಹಲವಾರು ಅಪರಾಧಗಳಿಗೆ ನಿನ್ನನ್ನು 2016 ರಲ್ಲಿ ಶಿಕ್ಷೆಗೊಳಪಡಿಸಲಾಯಿತು. ಸೆರೆವಾಸ ಶಿಕ್ಷೆಯ ಅಂತಿಮ ಹಂತಕ್ಕೆ ನೀನು ಬಂದಿದ್ದೆ. ನಿನ್ನನ್ನು ಬಿಡುಗಡೆ ಮಾಡಿದರೆ ಸಮಾಜಕ್ಕೆ ಏನಾದರೂ ಸಮಸ್ಯೆ ಎದುರಾಗಬಹುದಾ ಅಂತ ಅಧಿಕಾರಿಯೊಬ್ಬರರು ನಿನ್ನ ಮನೆಗೆ ಬೇಟಿ ನೀಡಿದಾಗ ಈ ವಾಸ್ತವ ನಮ್ಮೆದಿರು ಬಿಚ್ಚಿಕೊಂಡಿದೆ,’ ಎಂದು ನ್ಯಾಯಾಧೀಶ ಡೇವಿಡ್ ಫ್ಲೆಚರ್ ಹೇಳಿದರು.
‘ಎಸ್ ಎಚ್ ಪಿ ಒ ಅನ್ನು ನೀನು ಎರಡು ಬಾರಿ ಉಲ್ಲಂಘಿಸಿರುವೆ. ಮೊದಲನೆಯದ್ದು ಇಂಟರ್ನೆಟ್ ಹಿಸ್ಟರಿಯನ್ನು ಡಿಲೀಟ್ ಮಾಡಿದ್ದು ಮತ್ತ್ತು ಟಾರ್ ವಿಧಾನವನ್ನು ಬಳಸಿದ್ದು. ಅದರ ಮೂಲಕ ನಿನಗೆ ಡಾರ್ಕ್ ವೆಬ್ ಗೆ ಌಕ್ಸೆಸ್ ಪಡೆಯಲು ಸಾಧ್ಯವಾಯಿತು’ ಎಂದು ನ್ಯಾಯಾಧೀಶರು ಹೇಳಿದರು.
‘ನಿನ್ನ ಕಂಪ್ಯೂಟರ್ ನಲ್ಲಿ ಇಮೇಜ್ ಇದ್ದಿದ್ದು ಈಗ ಸ್ಪಷ್ಟವಾಗಿದೆ, ಆ ಇಮೇಜ್ ಒಂದು ಹಸುಳೆಯದ್ದು ಮತ್ತು ನ್ಯಾವ್ಯಾರೂ ಊಹಿಸಲು ಕೂಡ ಸಾಧ್ಯವಾಗದಷ್ಟು ಕೆಟ್ಟ ಮತ್ತು ಅಸಹ್ಯ ಇಮೇಜ್. 2016 ರ ನಂತರ ನಿನ್ನಲ್ಲಿ ಯಾವುದೇ ಸುಧಾರಣೆ ಕಾಣದಿರುವುದು ಕಳವಳಕಾರಿ ಮತ್ತು ವಿಷಾದಕರ ಸಂಗತಿಯಾಗಿದೆ. ನೀನೀಗ ಎಸಗಿರುವುದು ಬಹಳ ಗಂಭೀರವಾದ ಅಪರಾಧ,’ ಎಂದು ನ್ಯಾಯಾಧೀಶರು ಹೇಳಿದರು.
ಎಸ್ ಎಚ್ ಪಿಒ ಉಲ್ಲಂಘನೆ ಮಾಡಿದ ಅಪರಾಧದಲ್ಲಿ ಕೋರ್ಟ್ ಪಾರ್ಕ್ ಗೆ 10 ವರ್ಷಗಳ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಅರ್ಧಭಾಗವನ್ನು ಸೆರೆಮನೆಯಲ್ಲಿ ಮತ್ತು ಉಳಿದರ್ಧ ಭಾಗವನ್ನು ಕೋರ್ಟಿನ ಪರವಾನಗಿ ಮೇರೆಗೆ ಹೊರಗೆ ಕಳೆಯಲಿದ್ದಾನೆ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ