ಮಹಿಳೆಯ ಕತ್ತು ಸೀಳಿ ಕೊಲ್ಲಲು ಪ್ರಯತ್ನಿಸಿದ ಟಿಆರ್‌ಎಸ್ ನಾಯಕ? ಮಹಿಳೆ ಸ್ಥಿತಿ ಚಿಂತಾಜನಕ

TRS ಪಕ್ಷ ನಾಯಕನೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಕತ್ತು ಸೀಳಲು ಯತ್ನಿಸಿದ ಎಂಬ ಆರೋಪದ ಮೇಲೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯ ಕತ್ತು ಸೀಳಿ ಕೊಲ್ಲಲು ಪ್ರಯತ್ನಿಸಿದ ಟಿಆರ್‌ಎಸ್ ನಾಯಕ? ಮಹಿಳೆ ಸ್ಥಿತಿ ಚಿಂತಾಜನಕ
TRS leader
TV9kannada Web Team

| Edited By: ಅಕ್ಷಯ್​ ಕುಮಾರ್​​

Sep 19, 2022 | 5:26 PM

ಹೈದರಾಬಾದ್‌: ತೆಲಂಗಾಣ TRS ಪಕ್ಷ ನಾಯಕನೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಕತ್ತು ಸೀಳಲು ಯತ್ನಿಸಿದ ಎಂಬ ಆರೋಪದ ಮೇಲೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೈದರಾಬಾದ್‌ನ ಪಂಜಗುಟ್ಟಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಶಾ (35) ಎಂಬ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಪಂಜಗುಟ್ಟಾ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಚಂದ್ರ ರೆಡ್ಡಿ ಮಾತನಾಡಿ, ಎಫ್​ಐಆರ್ ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 448, 324, 354(ಎ) 506 ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿಶಾ ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತುಗಳಿತ್ತು. ಆಕೆ ನೋವಿನಿಂದ ನರಳುತ್ತಿರುವ ವೀಡಿಯೊ ವೈರಲ್ ಆಗಿದ್ದು ಇದೀಗ ಈ ವಿಡಿಯೋ ಆಧಾರದಲ್ಲಿ ಕ್ರಮ ಕೈಗೊಳಲಾಗಿದೆ. ಸೋಮವಾರ ಮುಂಜಾನೆ ವಿಜಯ್ ಸಿಂಹ ರೆಡ್ಡಿ ಪತ್ನಿಯ ಕತ್ತು ಕೊಯ್ಯಲು ಯತ್ನಿಸಿದ್ದ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಪೊಲೀಸರು ಎರಡು ಮೂರು ಬಾರಿ ಕರೆ ಮಾಡಿದಳು, ಆರೋಪಿ ಜೂಬ್ಲಿ ಹಿಲ್ಸ್ ಶಾಸಕರ ಪಿಎ ವಿಜಯ್ ಸಿನ್ಹಾ ಎಂದು ಮಹಿಳೆಯ ಪತಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿನ್ಹಾ ತನ್ನ ಪತ್ನಿಯ ಸ್ನೇಹಿತ ಮತ್ತು ದಿನಕ್ಕೆ ಹಲವಾರು ಬಾರಿ ಆಕೆಗೆ ಕರೆ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಅವನು ನನ್ನ ಹೆಂಡತಿಯ ಫೋನ್​ಗೆ ಹಲವಾರು ಬಾರಿ ಕರೆ ಮಾಡುತ್ತಿದ್ದನು. ಈ ಬಗ್ಗೆ ಫೋನ್ ದಾಖಲೆಯನ್ನು ಸಂಗ್ರಹ ಮಾಡಿಕೊಂಡಿದ್ದೇನೆ. ಅವನು ನಗ್ನ ವೀಡಿಯೊ ಕರೆಗಳನ್ನು ಮಾಡುತ್ತಾನೆ ಎಂದು ಆಕೆ ಪತಿ ಹೇಳಿದ್ದಾರೆ.

ಆದರೆ ಆತ ನನ್ನ ಮನೆಯ ವಿಳಾಸ ಪತ್ತೆ ಮಾಡಿ ದಾಳಿ ನಡೆಸಿದ್ದು ಅನಿರೀಕ್ಷಿತ. ಈಗ ಆಕೆ ಸ್ಥಿತಿ ಚಿಂತಾಜನಕ ಮತ್ತು ಪ್ರಜ್ಞಾಹೀನಳಾಗಿದ್ದಾಳೆ. ಅವಳು ಈಗ ಏನು ಹೇಳಬಲ್ಲಳು. ಅವನು ಎಂಎಲ್‌ಎ ಜೊತೆ ಒಳ್ಳೆ ಸಂಪರ್ಕವಿದೆ. ಇದರ ಜೊತೆಗೆ ಆತನಿಗೆ ರೌಡಿಶೀಟರ್‌ಗಳ ಸ್ನೇಹವು ಇದೆ ಎಂಬ ಭಯ ಇದೆ ಎಂದು ಹೇಳಿದ್ದಾರೆ.

ಇದು ನನ್ನ ವಿರುದ್ಧ ನಡೆದ ದೊಡ್ಡ ಪಿತೂರಿ, ನನ್ನ ರಾಜಕೀಯ ಬದುಕಿಗೆ ಅಂತ್ಯವಾಡಲು ಮಾಡಿದ ಬಹುದೊಡ್ಡ ಕೃತ್ಯ ಎಂದು ಮಾಜಿ ಉಪಮೇಯರ್ ವಿರುದ್ಧ ದೂರಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿನ್ಹಾ, ನಾನು ಬೋರಬಂಡ ವಿಭಾಗದ ಟಿಆರ್‌ಎಸ್‌ ಪಕ್ಷದ ಸಂಯೋಜಕ, ಕಳೆದ ಆರು ವರ್ಷಗಳಿಂದ ಮಾಜಿ ಉಪಮೇಯರ್‌ ಹಾಗೂ ಹಾಲಿ ಬೋರಬಂಡ ವಿಭಾಗದ ಕಾರ್ಪೊರೇಟರ್‌ ಬಾಬಾ ಫಸಿಯುದ್ದೀನ್‌ ಅವರ ಪಿಎ ಆಗಿ ಕೆಲಸ ಮಾಡಿದ್ದೇನೆ. ಅವರ ಸುಲಿಗೆ ಮತ್ತು ಷಡ್ಯಂತ್ರದ ಕೃತ್ಯಗಳನ್ನು ಕಣ್ಣಾರೆ ಕಂಡ ನಂತರ, ಅವರನ್ನು ಬಿಟ್ಟು ಪಕ್ಷದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.

ಒಂದು ವಾರದ ಹಿಂದೆ ನನ್ನ ಗಮನಕ್ಕೆ ಬಂದಿದ್ದು, ಆತ (ಬಾಬಾ ಫಸಿಯುದ್ದೀನ್) ಸಂಚು ರೂಪಿಸಿ ನನ್ನ ವಿರುದ್ಧ ಪ್ರಕರಣ ದಾಖಲಿಸಲು ಅವರಿಗೆ (ಮಹಿಳೆ ಮತ್ತು ಆಕೆಯ ಪತಿ) 3 ಲಕ್ಷ ರೂ. ನೀಡಿದ್ದಾರೆ ಮತ್ತು ಆ ಸಮಯದಲ್ಲಿ ನಾನು ಎಲ್ಲಿದ್ದೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಪೊಲೀಸ್ ಇಲಾಖೆಯ ಮೂಲಕ ಎಲ್ಲಾ ಸತ್ಯಗಳನ್ನು ಹೊರತರಲಾಗುವುದು, ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada