AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ಲುಶಿಕ್ಷೆಯಿಂದ ಪಾರಾಗಲು ಉಮೇಶ್‌ ರೆಡ್ಡಿ ಯೋಜಿಸಿರುವ ಮುಂದಿನ ದಾರಿಯೇನು?

Umesh Reddy: ಸುಪ್ರೀಂಕೋರ್ಟ್ ಶತೃಘ್ನ ಚೌಹಾಣ್ ಪ್ರಕರಣದಲ್ಲಿ ಕರ್ನಾಟಕದ ಇಬ್ಬರೂ ಸೇರಿದಂತೆ 15 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸಿತ್ತು.

ಗಲ್ಲುಶಿಕ್ಷೆಯಿಂದ ಪಾರಾಗಲು ಉಮೇಶ್‌ ರೆಡ್ಡಿ ಯೋಜಿಸಿರುವ ಮುಂದಿನ ದಾರಿಯೇನು?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Sep 30, 2021 | 8:37 PM

Share

ವಿಕೃತಕಾಮಿ ಉಮೇಶ್‌ ರೆಡ್ಡಿಗೆ ಹೈಕೋರ್ಟ್ 6 ವಾರಗಳ ಜೀವದಾನ ನೀಡಿದೆ. ಶತಾಯಗತಾಯ ಗಲ್ಲು ಶಿಕ್ಷೆಯಿಂದ ಪಾರಾಗಲು ಸರ್ವಪ್ರಯತ್ನ ನಡೆಸಿರುವ ಉಮೇಶ್ ರೆಡ್ಡಿ ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾನೆ. ಇದಕ್ಕಾಗಿ ಪ್ರಯತ್ನ ನಡೆಸಿರುವ ಉಮೇಶ್ ರೆಡ್ಡಿ ಪರ ವಕೀಲರು ಸುಪ್ರೀಂಕೋರ್ಟ್​ ತೀರ್ಪನ್ನೇ ಆಯುಧವನ್ನಾಗಿ ಬಳಸಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಉಮೇಶ್‌ ರೆಡ್ಡಿ ಪ್ಲಾನ್ ಏನು? ಸುಪ್ರೀಂಕೋರ್ಟ್​ನಲ್ಲಿ ಉಮೇಶ್‌ ರೆಡ್ಡಿಗೆ ರಿಲೀಫ್‌ ಸಿಗುತ್ತಾ ಅನ್ನೋ ವಿಶ್ಲೇಷಣೆ ಇಲ್ಲಿದೆ.

ಉಮೇಶ್‌ ರೆಡ್ಡಿ ಗಲ್ಲಿನಿಂದ ಪಾರಾಗಲು 3 ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದ್ದ. ಕ್ಷಮಾದಾನ ನೀಡಲು ರಾಷ್ಟ್ರಪತಿಗಳ ವಿಳಂಬ, ಒಂಟಿ ಸೆರೆವಾಸ, ಮಾನಸಿಕ ಖಿನ್ನತೆಯನ್ನೇ ಮುಂದಿಟ್ಟುಕೊಂಡು ಸುಪ್ರೀಕೋರ್ಟ್​ನಿಂದ ಜೀವದಾನ ಪಡೆಯಲು ಮುಂದಾಗಿದ್ದಾನೆ. ಬುಧವಾರವಷ್ಟೇ ಹೈಕೋರ್ಟ್ ಈತ ಮುಂದಿಟ್ಟಿದ್ದ ಕಾರಣಗಳನ್ನು ಅಸಮಂಜಸವೆಂದು ತಳ್ಳಿಹಾಕಿದೆ. ಆದರೆ 6 ವಾರಗಳ ಕಾಲ ಜೀವದಾನವನ್ನು ಕರುಣಿಸಿದೆ. ಸದ್ಯ ಸಿಕ್ಕಿರುವ 6 ವಾರಗಳಲ್ಲಿ ಸುಪ್ರೀಂಕೋರ್ಟ್ ಮನವೊಲಿಸಿ ಗಲ್ಲಿನಿಂದ ಪಾರಾಗಲು ಉಮೇಶ್‌ ರೆಡ್ಡಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಹೈಕೋರ್ಟ್ ತೀರ್ಪಿನ ಪ್ರತಿಗಾಗಿ ಕಾಯುತ್ತಿರುವ ವಕೀಲರು, ಪ್ರತಿ ಸಿಕ್ಕ ಕೂಡಲೇ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ಶತ್ರುಘ್ನ ಚೌಹಾಣ್ ವಿರುದ್ಧ ಯೂನಿಯನ್ ಆಫ್‌ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಗೆ ಒಳಗಾಗಿದ್ದ 15 ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಇದೀಗ ಅದೇ ಮಾನದಂಡವನ್ನು ಮುಂದಿಟ್ಟು ತನಗೂ ಗಲ್ಲು ಶಿಕ್ಷೆಯ ಬದಲು ಜೀವಾವಧಿ ವಿಧಿಸುವಂತೆ ಕೋರಲು ಉಮೇಶ್ ರೆಡ್ಡಿ ಮುಂದಾಗಿದ್ದಾನೆ.

ಏನಿದು ಶತೃಘ್ನ ಚೌಹಾಣ್ ಪ್ರಕರಣ? ಸುಪ್ರೀಂಕೋರ್ಟ್ ಶತೃಘ್ನ ಚೌಹಾಣ್ ಪ್ರಕರಣದಲ್ಲಿ ಕರ್ನಾಟಕದ ಇಬ್ಬರೂ ಸೇರಿದಂತೆ 15 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸಿತ್ತು. ಕೆಲವರ ಕ್ಷಮಾದಾನ ಅರ್ಜಿಯನ್ನು ತೀರ್ಮಾನಿಸಲು ರಾಷ್ಟ್ರಪತಿಗಳು 6 ರಿಂದ 9 ವರ್ಷಗಳ ಕಾಲಾವಕಾಶ ತೆಗೆದುಕೊಂಡಿದ್ದರು. ಕ್ಷಮಾದಾನ ಅರ್ಜಿ ತೀರ್ಮಾನಿಸಲು ರಾಷ್ಟ್ರಪತಿಗಳ ಸುದೀರ್ಘ ವಿಳಂಬ ನ್ಯಾಯಸಮ್ಮತವಲ್ಲ ಎಂದಿದ್ದ ಸುಪ್ರೀಂಕೋರ್ಟ್ ಇದೇ ಕಾರಣಕ್ಕೆ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. ಇನ್ನೂ ಕೆಲವು ಅಪರಾಧಿಗಳು ಮಾನಸಿಕ ಖಾಯಿಲೆ, ಸ್ಕ್ರಿಜೋಫ್ರೇನಿಯಾದಂತಹ ಗುಣಪಡಿಸಲಾಗದ ಖಾಯಿಲೆಯಿಂದ ಬಳಲುತ್ತಿದ್ದ ಕಾರಣಕ್ಕೆ ಅವರ ಗಲ್ಲು ಶಿಕ್ಷೆಯನ್ನು ಜೀವಾವಧಿಯನ್ನಾಗಿ ಪರಿವರ್ತಿಸಲಾಗಿತ್ತು. ಇದಲ್ಲದೇ ಅಪರಾಧಿಗಳನ್ನು ಕಾನೂನು ಬಾಹಿರವಾದ ಒಂಟಿ ಸೆರೆವಾಸದಲ್ಲಿಟ್ಟರೆಂಬ ಕಾರಣವನ್ನೂ ಶಿಕ್ಷೆ ಕಡಿತಕ್ಕೆ ಕಾರಣವನ್ನಾಗಿ ನೀಡಲಾಗಿತ್ತು. ಇದನ್ನೇ ಮುಂದಿಟ್ಟು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಉಮೇಶ್ ರೆಡ್ಡಿ ಸಿದ್ಧತೆ ನಡೆಸಿದ್ದಾನೆ.

ಆದರೆ, ಉಮೇಶ್‌ ರೆಡ್ಡಿ ಪಾಲಿಗೆ ಈ ಹಾದಿಯೂ ಸಲೀಸಾಗಿಲ್ಲ. ಏಕೆಂದರೆ ಇದೇ ಕಾರಣಗಳನ್ನು ಮುಂದಿಟ್ಟು ಉಮೇಶ್ ರೆಡ್ಡಿ ಪರ ವಕೀಲರು ಮಂಡಿಸಿದ್ದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಉಮೇಶ್ ರೆಡ್ಡಿ ಕ್ಷಮಾದಾನ ಅರ್ಜಿ ತೀರ್ಮಾನಿಸಲು ರಾಷ್ಟ್ರಪತಿಗಳು ಐದಾರು ವರ್ಷ ವಿಳಂಬ ಮಾಡಿಲ್ಲ. ಒಂದೂವರೆ ವರ್ಷಗಳ ವಿಳಂಬ ಅಸಹಜವಲ್ಲ ಎಂದಿರುವ ಹೈಕೋರ್ಟ್ ಒಂಟಿ ಸೆರೆವಾಸ, ಮಾನಸಿಕ ಖಿನ್ನತೆಯ ಕಾರಣಗಳನ್ನೂ ತಳ್ಳಿಹಾಕಿದೆ. ಹೀಗಾಗಿ ಸದ್ಯ ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್ ಮೊರೆ ಹೋದರೂ ಬಹುಕಾಲ ನೇಣು ಕುಣಿಕೆಯಿಂದ ಪಾರಾಗುವ ಸಾಧ್ಯತೆ ಇಲ್ಲ. ಆದರೂ ಸುಪ್ರೀಂಕೋರ್ಟ್ ನೀಡುವ ತೀರ್ಪೇ ಅಂತಿಮವಾದ್ದರಿಂದ ಎಲ್ಲರ ಗಮನ ಸರ್ವೋಚ್ಚ ನ್ಯಾಯಾಲಯದ ಮೇಲಿದೆ.

ರಮೇಶ್, ಟಿವಿ.9, ಬೆಂಗಳೂರು.

ಇದನ್ನೂ ಓದಿ: 

Umesh Reddy Profile: ಯಾರೀತ ಉಮೇಶ್ ರೆಡ್ಡಿ? ಈತನ ಹೆಸರು ಕೇಳಿದರೆ ಜನರೇಕೆ ಭಯ ಪಡುತ್ತಿದ್ದರು?

ವಾಯುಪಡೆ ಮುಖ್ಯಸ್ಥರಾಗಿ ವಿ.ಆರ್.ಚೌಧರಿ ಅಧಿಕಾರ ಸ್ವೀಕಾರ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್