ಕೊಪ್ಪಳ ಗವಿ ಮಠ ಜಾತ್ರೆಯ ವೈಶಿಷ್ಟ್ಯತೆ ಹೆಚ್ಚಿಸಿದೆ ಗರಮಾಗರಂ ಮಿರ್ಚಿ ಬಜ್ಜಿ!

ಜಾತ್ರೆ ಅಂದ್ರೆ ಹೇಳ್ಬೇಕಾ.. ಜನಸಾಗರವೇ ಹರಿದು ಬಂದಿರುತ್ತೆ. ಇಡೀ ಕುಟುಂಬಸ್ಥರೆಲ್ಲಾ ಜಾತ್ರೆಯಲ್ಲಿ ರೌಂಡ್ಸ್ ಹಾಕಿ ಖುಷಿ ಪಡ್ತಾರೆ. ಇನ್ನು ಕೆಲವರು ವಿವಿಧ ಬಗೆಯ ಆಟಗಳನ್ನ ಆಡಿ ಕಾಲ ಕಳೀತಾರೆ. ಆದ್ರೀಗ, ನಾವಿಲ್ಲಿ ಹೇಳೋಕೆ ಹೊರಟಿರೋ ಜಾತ್ರೆ ಮಾತ್ರ ಸ್ಪೆಷಲ್.. ಹಾಗಾದ್ರೆ ಅಂತಾದ್ದು ಏನಿದೆ ಅಲ್ಲಿ? ಅಂದ್ರಾ.. ನೀವೇ ನೋಡಿ..

ಡಿಫರೆಂಟ್ ಡಿಫರೆಂಟ್ ಐಟಮ್ಸ್.. ಗರ್ಮಾ ಗರಂ ಮಿರ್ಚಿ

ಅನ್ನ ಸಾಂಬರ್ ಜೊತೆ ಖಡಕ್ ರೊಟ್ಟಿ, ರುಚಿ ರುಚಿಯಾದ ಐಟಮ್ಸ್ ನಡುವೆ ಮಿಂಚಿದ್ದು. ಎಲ್ಲರ ಗಮನ ಸೆಳೆದಿದ್ದು ಒಂದೇ ಒಂದು. ಅದುವೇ ಮಿರ್ಚಿ ಬಜ್ಜಿ.. ಬಿಸಿ ಬಿಸಿ ಬಜ್ಜಿ.. ಖಡಕ್ ರೊಟ್ಟಿ.. ಅನ್ನ ಸಾಂಬರ್ ಒಟ್ಟಿಗೆ ಸಿಗ್ತಿದೆ ಅಂದ್ರೆ ನಮ್ ಜನ ಬಿಡ್ತಾರಾ. ಸಾಧ್ಯನೇ ಇಲ್ಲ.. ಎಲ್ರು ಸರತಿ ಸಾಲಿನಲ್ಲಿ ಬಂದು ಬ್ಯಾಟಿಂಗ್ ಮಾಡಿದ್ರು.. ಫುಲ್ ಖುಷಿಯಾಗಿ ಕಾಲನೂ ಕಳೆದ್ರು.

ಹೀಗೆ ಲಕ್ಷಾಂತರ ಜನರ ನಾಲಗೆ ಥಣಿಸ್ತಿರೋ ಈ ಸ್ಪೆಷಲ್ ಮಿರ್ಚಿ ತಯಾರಿಗಿದ್ದು ಕೊಪ್ಪಳದ ಗವಿ ಮಠದಲ್ಲಿ. ವಿಶೇಷ ಅಂದ್ರೆ, ಮೂರು ಲಕ್ಷ ಜನಕ್ಕೆ ಮಿರ್ಚಿ ನೀಡೋದ್ರ ಮೂಲಕ ದಾಸೋಹಕ್ಕೆ ಈ ಮಠ ಹೊಸ ಬಾಷ್ಯ ಬರೆದಿದೆ. ಇಷ್ಟು ದಿನ ಗವಿ ಮಠದ ಜಾತ್ರೆ ದಾಸೋಹದಲ್ಲಿ ಮಾದಲಿ ನೀಡ್ತಿದ್ರು. ಆದ್ರೆ ಕಳೆದ ನಾಲ್ಕು ವರ್ಷದಿಂದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿಯ ಭಕ್ತ ಸಮೂಹ ಮೂರು ಲಕ್ಷ ಜನರಿಗೆ ಮಿರ್ಚಿ ನೀಡಿದ್ದಾರೆ. ಈ ಬಾರಿ ಮಿರ್ಚಿಗಾಗಿ ಸುಮಾರು 18 ಕ್ವಿಂಟಾಲ್ ಹಿಟ್ಟು, 15 ಕ್ವಿಂಟಾಲ್ ಮೆಣಸಿಣಕಾಯಿ, 09 ಬ್ಯಾರಲ್ ಎಣ್ಣೆ, 25 ಕೆಜಿ ಅಜ್ವಾನ, 20 ಕೆ.ಜಿ ಸೋಡಾಪುಡಿ ತಂದು ಮಿರ್ಚಿ ತಯಾರಿಸಿದ್ರು. ಈ ಮಿರ್ಚಿ ತಯಾರಿಯಲ್ಲಿ ಸುಮಾರು 300 ಜನ ಭಾಗಿಯಾಗಿದ್ರು.

ಇನ್ನು, ಮಠಕ್ಕೆ ಹೊರ ರಾಜ್ಯದಿಂದ್ಲೂ ಭಕ್ತರು ಆಗಮಿಸ್ತಾರೆ. ಅದ್ರಲ್ಲೂ ಜಾತ್ರೆ ಅಂದ್ರೆ ಸಾಕು ಭಕ್ತರ ದಂಡೇ ಎಂಟ್ರಿ ಕೊಡುತ್ತೆ. ಈ ಬಾರಿಯೂ ಹೊರ ರಾಜ್ಯದಿಂದ ಜನ ಆಗಮಿಸಿದ್ರು. ಈ ವೇಳೆ ಉತ್ತರ ಕರ್ನಾಟದ ಸ್ಪೆಷಲ್ ಅಂತ್ಲೇ ಫೇಮಸ್ ಆಗಿರೋ ಮಿರ್ಚಿ ರುಚಿ ನೋಡಿದ್ರು. ಅಷ್ಟೇ ಅಲ್ಲ, ಮಿರ್ಚಿ ಜೊತೆ ಮಾದಲಿ, ಬುಂದೆ, ಕಾಳು ಪಲ್ಯ, ಅನ್ನ ಸಾರು, ಖಡಕ್ ರೊಟ್ಟಿಯನ್ನೂ ಭಕ್ತರಿಗೆ ಉಣ ಬಡಿಸಲಾಯ್ತು.

ಇಷ್ಟು ದಿನ ದಾಸೋಹ, ಸಾಮಾಜಿಕ ಕಾರ್ಯಕ್ಕೆ ಹೆಸರುವಾಸಿಯಾಗಿದ್ದ ಗವಿ ಮಠ ಕಳೆದ ನಾಲ್ಕು ವರ್ಷಗಳಿಂದ ಮಿರ್ಚಿಗೆ ಫೇಮಸ್ ಆಗಿದೆ. ಇದ್ರ ಜೊತೆ ಜೊತೆಗೆ ಉತ್ತರ ಕರ್ನಾಟಕದ ಫೇಮಸ್ ಮಿರ್ಚಿ ಹೊರ ರಾಜ್ಯದ ಭಕ್ತರಿಗೂ ತಲುಪುತ್ತಿದೆ. ಈ ಮೂಲಕ ಕೊಪ್ಪಳ ಗವಿ ಮಠದ ವೈಶಿಷ್ಟ್ಯತೆ ಮತ್ತಷ್ಟು ಹೆಚ್ಚಾಗಿದೆ. (ಶಿವಕುಮಾರ್ ಪತ್ತಾರ್, ಟಿವಿ9, ಕೊಪ್ಪಳ)

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!