ಇನಾಂ ದತ್ತಪೀಠದೊಳಗೆ ಫೋಟೋ, ವಿಡಿಯೋ ಚಿತ್ರೀಕರಣ: ಸಚಿವ CT ರವಿಯಿಂದ ಎಡವಟ್ಟು

ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ CT ರವಿ ದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾಕ್ಕೆ ಭೇಟಿಕೊಟ್ಟ ವೇಳೆ ಎಡವಟ್ಟು ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವರು ದತ್ತ ಪಾದುಕೆಯ ದರ್ಶನ ಪಡೆಯಲು ಆಗಮಿಸಿದ್ದರು. ಇನಾಂ ದತ್ತಪೀಠದೊಳಗೆ CT ರವಿ ದರ್ಶನ ಪಡೆಯುತ್ತಿರುವಾಗ ಫೋಟೋ ಮತ್ತು ವಿಡಿಯೋ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಇನಾಂ ದತ್ತಪೀಠದ ವಿಚಾರ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ಮಾಡದಂತೆ ಕೋರ್ಟ್​ ಆದೇಶಿಸಿತ್ತು. ಆದರೆ, ಸಚಿವರು WhatsApp​ ಗ್ರೂಪ್​ನಲ್ಲಿ ತಾವು ತೆಗೆಸಿಕೊಂಡ ಫೋಟೋಗಳನ್ನ ಶೇರ್​ ಮಾಡಿದ್ದರಂತೆ. ಬಳಿಕ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದೀಗ, ಸಚಿವ ರವಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಪ್ರವಾಸೋದ್ಯಮ ಸಚಿವರ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Related Tags:

Related Posts :

Category:

error: Content is protected !!