ಬೆಂಗಳೂರಲ್ಲಿ ಕೊರೊನಾ ಸೋಂಕು ಹರಡುವ ಸಾಮರ್ಥ್ಯ ಯಾರಿಗಿದೆ ಗೊತ್ತಾ?

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಯಾವ ರೀತಿ ಹರಡುತ್ತೆ. ನಿಜಕ್ಕೂ ಯಾರಿಗಿದೆ ಕೊರೊನಾ ಹರಡುವ ಸಾಮರ್ಥ್ಯ..? ಸೋಂಕೇ ಇಲ್ಲದವರಿಗೆ ಆಪತ್ತು ಬರುವುದಾದರೂ ಯಾರಿಂದ? ಬೆಂಗಳೂರಲ್ಲಿ ಸೋಂಕು ಹರಡಲು ಕಾರಣವಾದವರು ಯಾರು? ಎಂಬ ಅನೇಕ ಪ್ರಶ್ನೆಗಳು ಮೆದುಳಿನಲ್ಲಿ ಚಕ್ರಸುಳಿಯಂತೆ ಸುಳಿಯುತ್ತಿವೆ.

ಕೊರೊನಾ ವೈರಸ್ ಪ್ರಮಾಣದ ಬಗ್ಗೆ ಲೆಕ್ಕಚಾರ ಶುರುವಾಗಿದೆ. ಕೊರೊನಾ CT ವ್ಯಾಲ್ಯೂ ಮೇಲೆ ವೈರಸ್ ಲೋಡ್ ನಿರ್ಧಾರ ಮಾಡಲಾಗುತ್ತಿದೆ. RTPCR ಟೆಸ್ಟ್​ನಲ್ಲಿ (Reverse transcription polymerase chain reaction RT–PCR) ವೈರಸ್ ಲೋಡ್ ಗೊತ್ತಾಗಲಿದೆ. ವೈರಸ್ ಲೋಡನ್ನ CT ವ್ಯಾಲ್ಯೂನಲ್ಲಿ ಲೆಕ್ಕಚಾರ ಮಾಡಲಾಗುತ್ತೆ.

ಯಾರಿಂದ ಸೋಂಕಿಲ್ಲದವರಿಗೆ ಆಪತ್ತು ಬರುತ್ತೆ ?
17ರಿಂದ 24ರ ಮಧ್ಯೆ CT ವ್ಯಾಲ್ಯೂ ಇದ್ದರೆ ವೈರಸ್ ಲೋಡ್ ಜಾಸ್ತಿ ಇದೆ ಎನ್ನಲಾಗುತ್ತೆ. ಇಂಥ ರೋಗಿಗಳಲ್ಲಿ ವೈರಸ್ ಪ್ರಮಾಣ ಜಾಸ್ತಿಯಿದ್ದು ಬೇರೆಯವರಿಗೂ ರೋಗವನ್ನ ವ್ಯಾಪಕವಾಗಿ ಹರಡಿಸಲಿದ್ದಾರಂತೆ.ಇಂಥವರನ್ನ ಸಿವಿಯರ್ ಪೇಶೆಂಟ್ಸ್ ಎನ್ನಲಾಗುತ್ತೆ. 24 ಯಿಂದ 31 ವೈರಲ್ ಲೋಡ್ ಇದ್ದರೇ ಮಾಡ್ರೇಟ್ ವೈರಲ್ ಲೋಡ್ ರೋಗಿಗಳು ಎನ್ನಲಾಗುತ್ತೆ.

ಇಂಥವರಲ್ಲಿ ಸ್ವಲ್ಪ ಪ್ರಮಾಣದಲ್ಲಿ ವೈರಸ್ ಕಾಡಲಿದೆ. ಆದ್ರೆ ತುಂಬಾ ಸಿರಿಯಸ್ ಪೇಶೆಂಟ್ ಅಂತಾ ಪರಿಗಣಿಸೋಕೆ ಆಗಲ್ಲ. 31 ಕ್ಕಿಂತ ಹೆಚ್ಚು CT ವ್ಯಾಲ್ಯೂ (Cycle Threshold Values) ಇದ್ದರೆ ಅಂಥಹವರನ್ನ ಕಡಿಮೆ ವೈರಸ್ ಹೊಂದಿರುವ ರೋಗಿಗಳಾಗಿ ಪರಿಗಣನೆ ಮಾಡಲಾಗುತ್ತೆ.

31ಕ್ಕಿಂತ ಹೆಚ್ಚು CT ವ್ಯಾಲ್ಯೂ ಇದ್ದರೆ ಕಡಿಮೆ ಸೋಂಕು ಇರುವವರುCT ವ್ಯಾಲ್ಯೂ ಗೊತ್ತಾದ್ರೆ ರೋಗಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತೆ. ಆದರೆ ಟೆಸ್ಟ್ ಲ್ಯಾಬ್​ನವರು ರೋಗಿಗೆ CT ವ್ಯಾಲ್ಯೂ ಮಾಹಿತಿ ನೀಡಲ್ಲ. CT ವ್ಯಾಲ್ಯೂ ಗೊತ್ತಾದರೆ ಮಾನಸಿಕವಾಗಿ ರೋಗಿಯ ಮೇಲೆ ಪರಿಣಾಮ ಬೀರುತ್ತೆ ಅಂತ. ಆದರೆ CT ವ್ಯಾಲ್ಯೂ ಪರಿಗಣಿಸಬಾರದು ಅಂತಾ ಐಸಿಎಂಆರ್ ಸೂಚನೆ ನೀಡಿದೆ. ರೋಗಿಯ ಗುಣಲಕ್ಷಣಗಳ ಮೇಲೆ ಚಿಕಿತ್ಸೆ ನೀಡುವಂತೆ ಐಸಿಎಂಆರ್ ಆದೇಶಿಸಿದೆ.

Related Tags:

Related Posts :

Category: