ಡ್ಯುಯೆಟ್​ ಬಾರ್ ಮಾಲೀಕ ಮನೀಶ್​ ಶೆಟ್ಟಿ ಹತ್ಯೆ ಪ್ರಕರಣ: ನಾಲ್ವರು ಅರೆಸ್ಟ್, ಇಬ್ಬರ ಮೇಲೆ ಖಾಕಿ ಫೈರಿಂಗ್​​

ಬೆಂಗಳೂರು: ಡ್ಯುಯೆಟ್​ ಬಾರ್ ಮಾಲೀಕ ಮನೀಶ್​ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ​ಪಾರ್ಕ್​ ಪೊಲೀಸರು ನಾಲ್ವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳನ್ನು ಶಶಿಕಿರಣ್ (45) , ಗಣೇಶ್ (39), ನಿತ್ಯಾ (29)  ಮತ್ತು ಅಕ್ಷಯ್ (32)​ ಎಂದು ಗುರುತಿಸಲಾಗಿದೆ.

ಅಕ್ಟೋಬರ್​ 15ರಂದು ನಗರದ RHP ರಸ್ತೆಯಲ್ಲಿ ಮನೀಶ್​ ಶೆಟ್ಟಿ ಮೇಲೆ ಗುಂಡುಹಾರಿಸಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ನಡುವೆ, ಭೂಗತ ಪಾತಕಿ ವಿಕ್ಕಿ ಶೆಟ್ಟಿ ಮನೀಶ್​ ಹತ್ಯೆಯ ಹೊಣೆಹೊತ್ತುಕೊಂಡಿದ್ದ. ಹಾಗಾಗಿ, ಹಂತಕರ ಬಂಧನಕ್ಕಾಗಿ 9 ವಿಶೇಷ ತಂಡಗಳನ್ನ ರಚಿಸಲಾಗಿತ್ತು. ಮತ್ತೊಂದೆಡೆ, ಆರೋಪಿಗಳು ತಾವೇ ಶರಣಾಗಲು ಸಿದ್ಧತೆ ನಡೆಸಿದ್ದರು ಎಂದು ಸಹ ಹೇಳಲಾಗಿದೆ.

ಈ ನಡುವೆ ಇಬ್ಬರು ಆರೋಪಿಗಳಾದ ಶಶಿಕಿರಣ್ ಹಾಗೂ ಅಕ್ಷಯ್ ಮೇಲೆ ಪೊಲೀಸರ ಗುಂಡಿನ ದಾಳಿ ನಡೆಸಿದ್ದಾರೆ. ಶಾಂತಿನಗರದ ಸ್ಮಶಾನದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ. ಆಗ, ಆತ್ಮರಕ್ಷಣೆಗಾಗಿ ಇಬ್ಬರ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಾಗಿ ಸದ್ಯ ಅವರನ್ನು ಸೇಂಟ್ ​ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Tags:

Related Posts :

Category:

error: Content is protected !!