6 ತಿಂಗಳ ಹಿಂದೆ 7 ಲಕ್ಷ ರೂ ಸಿಗರೇಟ್ ಬಾಕ್ಸ್ ಕದ್ದ ಆರೋಪಿ ಅರೆಸ್ಟ್

ನೆಲಮಂಗಲ: ಏಳು ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಬಾಕ್ಸ್​ಗಳನ್ನು ಕದ್ದಿದ್ದ ಇಬ್ಬರು ಕಳ್ಳರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ರಾಮಕೃಷ್ಣ(30) ಬಂಧಿತ ಆರೋಪಿ.

6 ತಿಂಗಳ ಹಿಂದೆ ITC ಕಂಪನಿಯ ಗೋಡಾನ್​ನಿಂದ ಇವರಿಬ್ಬರೂ 7 ಲಕ್ಷ ಮೌಲ್ಯದ ಸಿಗರೇಟ್ ಬಾಕ್ಸ್​ ಕದ್ದಿದ್ದರು. ಸದ್ಯ ಇಬ್ಬರೂ ಕಳ್ಳರ ಪೈಕಿ ಒಬ್ಬನನ್ನು ದಾಬಸ್ ಪೇಟೆ ಪೋಲಿಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಈ ಕಳ್ಳತನ ನಡೆದಿತ್ತು.

ಪ್ರಕರಣ ದಾಖಲಿಸಿಕೊಂಡು ದಾಬಸ್ ಪೇಟೆ ಪೋಲಿಸರು ತನಿಖೆ ಆರಂಭಿಸಿದ್ದರು. ಈಗ ರಾಮಕೃಷ್ಣ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧನ ವೇಳೆ ಆರೋಪಿ ಬಳಿ ಇದ್ದ 2 ಲಕ್ಷ ಜಪ್ತಿ ಮಾಡಲಾಗಿದೆ. ಇವರು ಕದ್ದ ಮಾಲನ್ನ ಟ್ರಾನ್ಸ್‌ಪೋರ್ಟ್‌ ಕಂಪನಿಗಳ ಬಳಿ ಅತಿ ಕಮ್ಮಿ ಬೆಲೆಗೆ ಮಾರುತ್ತಿದ್ರು. ಇನ್ನೋರ್ವ ಆರೋಪಿ ಅನಿಲ್​ಗೆ ಶೋಧ ಕಾರ್ಯ ಮುಂದುವರೆದಿದೆ.

Related Tags:

Related Posts :

Category: