ಅಗಲಿದ ‘ರಾಜ ಮಾರ್ತಾಂಡ’ನಿಗೆ ದನಿಗೂಡಿಸಲಿದ್ದಾರೆ ದರ್ಶನ್, ಧ್ರುವ

ಬೆಂಗಳೂರು: ಸ್ಯಾಂಡಲ್​ವುಡ್​ನ ಉತ್ತುಂಗಕ್ಕೆ ಏರುತ್ತಿದ್ದ ಯುವ ನಟ, ಅಗಾಧ ಪ್ರತಿಭೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರ ಹಠಾತ್​ ನಿಧನ ಎಲ್ಲರನ್ನೂ ದಂಗು ಬಡಿಸಿತ್ತು. ತನ್ನ ಸರಳ ಸ್ವಭಾವ ಹಾಗೂ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಚಿರು ಈಗ ಎಲ್ಲರನ್ನು ಬಿಟ್ಟು ಬಹುದೂರ ಹೋಗಿದ್ದಾರೆ.

ಈ ಮಧ್ಯೆ ತಾವು ನಟಿಸುತ್ತಿದ್ದ ಕೆಲವು ಸಿನಿಮಾಗಳು ಅಪೂರ್ಣವಾಗಿ ಉಳಿದಿವೆ. ಅವುಗಳಲ್ಲಿ ರಾಜ ಮಾರ್ತಾಂಡ ಸಿನಿಮಾ ಕೂಡಾ ಒಂದು. ಶೂಟಿಂಗ್​ ಭಾಗ ಮುಗಿದಿದ್ದ ಚಿತ್ರಕ್ಕೆ ಲಾಕ್​ಡೌನ್ ಎದುರಾಗಿ ಡಬ್ಬಿಂಗ್ ಮಾಡುವುದು ಮಾತ್ರ ಬ್ಯಾಲೆನ್ಸ್ ಉಳಿದಿತ್ತು. ಆದ್ರೆ ಚಿರು ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಅವರ ವಾಯ್ಸ್​ ಡಬ್ಬಿಂಗ್​ ಭಾಗವು ಹಾಗೇ ಉಳಿದುಬಿಟ್ಟಿತ್ತು. ಹೀಗಾಗಿ ಚಿತ್ರದ ನಿರ್ಮಾಪಕರಿಗೆ ತುಸು ಚಿಂತೆ ಶುರುವಾಗಿತ್ತು.

ರಾಜ ಮಾರ್ತಾಂಡನಿಗೆ ವಾಯ್ಸ್​ ನೀಡಲಿದ್ದಾರೆ ದರ್ಶನ್​, ಧ್ರುವ
ಆದರೆ, ಅಗಲಿದ ಅಣ್ಣನಿಗೆ ಬಲಗೈ ಭಂಟನಂತಿದ್ದ ತಮ್ಮ ಧ್ರುವ ಇದೀಗ ಸಿನಿಮಾದ ನಿರ್ಮಾಪಕರಿಗೆ ಅರ್ಧಕ್ಕೆ ನಿಂತ ಚಿತ್ರವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಚಿರು ಪುಣ್ಯತಿಥಿ ನಡೆದ ದಿನದಂದು ಧ್ರುವ ನಿರ್ಮಾಪಕರಿಗೆ ಮಾತು ಕೊಟ್ಟಿದ್ದಾರೆ. ಇದರ ಜೊತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ನೆರವಿನ ಹಸ್ತ ಚಾಚಿದ್ದು ಅಗತ್ಯ ಬಿದ್ದರೆ ಸ್ವತಃ ತಾವೇ ವಾಯ್ಸ್ ಡಬ್ ಮಾಡೋದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ ನೋವಲ್ಲೂ ಸ್ಟಾರ್ ನಟರು ನೀಡಿರೋ ಮಾತಿಗೆ ಚಿತ್ರತಂಡ ಸಂತಸಗೊಂಡಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more