ನಟ​ ದರ್ಶನ್​‌ Fansಗೆ ಸಿಹಿ ಸುದ್ದಿ!

ಬೆಂಗಳೂರು: ಕೊರೊನಾ ಮತ್ತು ಲಾಕ್​ಡೌನ್​ನಿಂದ ಜನರು ಎಲ್ಲೂ ಹೊರಗಡೆ ಹೋಗೋಕಾಗದೆ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಸಿನಿಮಾ ಪ್ರಿಯರಿಗಂತೂ ಫುಲ್​ ಬೋರ್​ ಆಗಿ ಹೋಗಿದೆ. ಈ ನಡುವೆ ನಟ ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರ ತಂಡ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ರಾಬರ್ಟ್ ಚಿತ್ರವನ್ನು ರಿಲೀಸ್‌ ಮಾಡಲು ಸಿದ್ಧತೆ ನಡೆಸುತ್ತಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್​ನಲ್ಲಿ ರಾಬರ್ಟ್ ತೆರೆಕಾಣಬೇಕಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಬರೋಬ್ಬರಿ 4 ತಿಂಗಳಿಂದ ಸ್ತಬ್ಧವಾಗಿರೋ ಕನ್ನಡ ಚಿತ್ರರಂಗ ಇದೀಗ ಆಗಸ್ಟ್​ನಲ್ಲಿ ಮತ್ತೆ ಚುರುಕುಗೊಳ್ಳಲಿದೆ. ಕೊರೊನಾದಿಂದ ಬಂದ್ ಆಗಿರೋ ಸ್ಯಾಂಡಲ್​ವುಡ್ ಇದೀಗ ರಾಬರ್ಟ್ ಸಿನಿಮಾ ಮೂಲಕ ಮತ್ತೆ ಎಂಟ್ರಿ ಕೊಡೋಕೆ ರೆಡಿಯಾಗ್ತಿದೆ.

ರಾಬರ್ಟ್ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ರಿಲೀಸ್​ಗಾಗಿ ಕಾಯ್ತಿದೆ. ನಾಳೆ ಈ ಚಿತ್ರದ ಮತ್ತೊಂದು ಹೊಸ ಪೋಸ್ಟರ್ ರಿಲೀಸ್ ಆಗಲಿದೆ. ಈ ಮೂಲಕ ಸ್ಯಾಂಡಲ್​ವುಡ್ ಕೊರೊನಾ ಸಂಕಷ್ಟದಿಂದ ಹೊರಬರೋಕೆ ಒಂದೊಂದೇ ಹೆಜ್ಜೆ ಇಡುವ ಪ್ರಯತ್ನ ಮಾಡ್ತಿದೆ. ಅತ್ತ ಶಿವಣ್ಣನ ನೇತೃತ್ವದಲ್ಲಿ ಚಿತ್ರಮಂದಿರ ತೆರೆಯೋದರ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಹ ಸಿದ್ಧತೆ ನಡೀತಿದೆ‌.

Related Tags:

Related Posts :

Category:

error: Content is protected !!