ಲಾಕ್‌ಡೌನ್​ ವೇಳೆ ಬೆಂಗಳೂರಿನಿಂದ ‌ಮನೆಗೆ ತೆರಳಿದ್ದ ಪತ್ನಿ ಶವವಾಗಿ ಪತ್ತೆ, ಗಂಡ ನಾಪತ್ತೆ

ದಾವಣಗೆರೆ: ಶ್ರೀರಾಮ ನಗರದ ಬಳಿ ಬರುವ ಇಮಾನಮಟ್ಟಿ ಪ್ರದೇಶದ ಗೃಹಿಣಿ ರಂಜಿತಾ ಎಂಬ ಮಹಿಳೆಯ ಶವ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದೆ. ಇದು ದಾವಣಗೆರೆಯಲ್ಲಿ ಕೊರೊನಾ ಅಟ್ಟಹಾಸದ ನಡುವೆಯೂ ತಲ್ಲಣ ಸೃಷ್ಟಿಸಿದೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ದಿದ್ದಿಗಿ ತಾಂಡಾದ ನಿವಾಸಿ 24 ವರ್ಷದ ರಂಜಿತಾ ವಿವಾಹ, ಮೂರು ವರ್ಷದ ಹಿಂದೆ ರವಿ ನಾಯ್ಕ ಜೊತೆ ಆಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿ ನಂತರ ಹಿರಿಯರ ಒಪ್ಪಿಗೆ ಪಡಿದೇ ವಿವಾಹವಾಗಿದ್ದರು. ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ಲಾಕ್​ಡೌನ್ ಆದ ಹಿನ್ನೆಲೆಯಲ್ಲಿ ಕಂಪನಿ ಕೆಲಸ ನಿಲ್ಲಿಸಿತ್ತು. ಹೀಗಾಗಿ ಪತಿಯ ತಂದೆ ತಾಯಿ ವಾಸವಿದ್ದ ದಾವಣಗೆರೆಗೆ ಬಂದು ನೆಲೆಸಿದ್ದರು.

ದಾವಣಗೆರೆಗೆ ಬಂದ ಎರಡು ತಿಂಗಳಲ್ಲೇ ಸಾವು
ಆದ್ರೆ ದಾವಣಗೆರೆಗೆ ಬಂದ ಎರಡು ತಿಂಗಳಾಗಿಲ್ಲ ರಂಜಿತಾ ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆಯಲ್ಲ ಕೊಲೆ. ವರದಕ್ಷಿಣೆಗಾಗಿ ಗಂಡ ಹಾಗೂ ಅವನ ಮನೆಯವರು ಮಾನಸಿಕ ಹಿಂಸೆ ನೀಡಿ ಹೊಡೆದು ಕೊಲೆ ಮಾಡಿದ್ದಾರೆ ಎನ್ನುವುದು ರಂಜಿತಾ ಕುಟುಂಬದ ಆರೋಪ. ಇದಕ್ಕೆ ಪೂರಕವೆಂಬಂತೆ ರಂಜಿತಾ ಸಾವನ್ನಪ್ಪಿದ ಬಳಿಕ ಪತಿಯ ಮನೆಯವರ ಸುಳಿವೇ ಇಲ್ಲ. ಇದು ನಾನಾ ಸಂಶಯಕ್ಕೆ ಕಾರಣವಾಗಿದೆ.

ಹಣಕ್ಕಾಗಿ ರಂಜಿತಾಳಿಗೆ ಗಂಡನಿಂದ ಹಿಂಸೆ
ರಂಜಿತಾ-ರವಿ ದಂಪತಿಗೆ ಮಕ್ಕಳಾಗಿರಲಿಲ್ಲ. ಮೇಲಾಗಿ ಪತಿ ರವಿ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಹಲವಾರು ಸಾರಿ ದಂಪತಿ ನಡುವೆ ಜಗಳವಾಗಿ ರಾಜಿ ಪಂಚಾಯಿತಿಯೂ ಆಗಿತ್ತಂತೆ. ಆದ್ರೂ ಸಹ ಇಬ್ಬರ ನಡುವಿನ ಜಗಳ ಮುಂದುವರಿದೇ ಇತ್ತು. ಅಂತಿಮವಾಗಿ ಈಗ ಜನ ರಂಜಿತಾಳನ್ನ ಬಲಿ ಪಡೆದುಕೊಂಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ಮಹಿಳಾ ಠಾಣೆ ಪೊಲೀಸರು, ರಂಜಿತಾಳ ಪತಿ ಹಾಗೂ ಆತನ ಸಂಬಂಧಿಕರ ಹುಡುಕಾಟ ಆರಂಭಿಸಿದ್ದಾರೆ.

Related Tags:

Related Posts :

Category:

error: Content is protected !!