ನಡುರಸ್ತೆಯಲ್ಲೇ ಜಿಲ್ಲಾಧಿಕಾರಿಯಿಂದ RIಗೆ ಕಪಾಳಮೋಕ್ಷ

ಚಿಕ್ಕಮಗಳೂರು: ನಡುರಸ್ತೆಯಲ್ಲೇ ಜಿಲ್ಲಾಧಿಕಾರಿಯಿಂದ RIಗೆ ಕಪಾಳಮೋಕ್ಷವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಿರೇಬೈಲ್​ನಲ್ಲಿ ಡಿಸಿ ಬಗಾದಿ ಗೌತಮ್‌ ಕಳಸ ಕಂದಾಯ ನಿರೀಕ್ಷಕ ಅಜ್ಜೇಗೌಡರಿಗೆ ಕಪಾಳಕ್ಕೆ ಬಾರಿಸಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಅಗತ್ಯವಸ್ತುಗಳನ್ನು ನೀಡಲು ಸೂಚನೆ ನೀಡಲಾಗಿತ್ತು.

ನಂತರ RI ಸೂಚನೆಯಂತೆ ಪ್ರವಾಹ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಜನರು ಸಹಕಾರ ನೀಡಿದ್ದರು. ಆದರೆ ಅದಕ್ಕೆ ಈವರೆಗೆ RI ಹಣ ನೀಡದ ಹಿನ್ನೆಲೆ ಸ್ಥಳೀಯ ಅಂಗಡಿ ಮಾಲೀಕರು ಡಿಸಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡು ಡಿಸಿಯಿಂದ RIಗೆ ಕಪಾಳಮೋಕ್ಷವಾಗಿದೆ.

Related Tags:

Related Posts :

Category: