ಕಲಬುರಗಿಯಲ್ಲಿ ಗಣೇಶೋತ್ಸವಕ್ಕೆ DC ಬ್ರೇಕ್, ಕಟ್ಟುನಿಟ್ಟು ಕ್ರಮಕ್ಕೆ ಸೂಚನೆ

ಕಲಬುರಗಿ ಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಡಿಸಿ ಸೂಚಿಸಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ.

ಮನೆ ಸೀಲ್, ಕುಟುಂಬಸ್ಥರ ಪರದಾಟ
ಧಾರವಾಡದ ಕೆಲಗೇರಿ ಬಡಾವಣೆಯಲ್ಲಿ ಸೀಲ್​ಡೌನ್ ಆಗಿರೋ ಕುಟುಂಬವೊಂದ್ರ ಸದಸ್ಯರು ಪರದಾಡುವಂತಾಗಿದೆ. ಒಂದೇ ಮನೆಯಲ್ಲಿ 36 ಜನರಿದ್ದು, ಆ ಪೈಕಿ 7 ಮಂದಿಗೆ ಕೊರೊನಾ ಹೊಕ್ಕಿದೆ. ಸದ್ಯ ಮನೆ ಸೀಲ್ ಮಾಡಲಾಗಿದ್ದು, ಅಗತ್ಯ ವಸ್ತು ಸೇರಿ ಜಾನುವಾರುಗಳಿಗೆ ಮೇವು ಸಿಗದೆ ಕುಟುಂಬದ ಸದಸ್ಯರು ಕಂಗಲಾಗಿದ್ದಾರೆ.

‘ಮಾಸಿಕ ₹12 ಸಾವಿರ ವೇತನ ನೀಡಿ’
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಕೊರೊನಾ ವಾರಿಯರ್ಸ್ ಪ್ರತಿಭಟನೆ ನಡೆಸಿದ್ದಾರೆ. ಮಾಸಿಕ 12 ಸಾವಿರ ವೇತನ ಸೇರಿ ವಿವಿಧ ಬೇಡಿಕೆಗೆ ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಎಐಯುಟಿಯುಸಿ ನೇತೃತ್ವದಲ್ಲಿ ಧರಣಿ ನಡೆಸಿ ಸೇವೆ ಖಾಯಂ ಮಾಡುವಂತೆ ಒತ್ತಾಯಿಸಿದ್ದಾರೆ.

ವಾರಿಯರ್ಸ್​ಗೆ ಕೊರೊನಾ ಕಂಟಕ
ಬೆಳಗಾವಿಯಲ್ಲಿ ವಾರಿಯರ್ಸ್​ಗಳಿಗೆ ಕೊರೊನಾ ಅಟ್ಯಾಕ್ ಆಗಿದೆ. ಜಿಲ್ಲಾ ಸರ್ಜನ್​ ಸೇರಿ ಬಿಮ್ಸ್‌ ಆಸ್ಪತ್ರೆಯ 8 ವೈದ್ಯರು, ಇಬ್ಬರು ನರ್ಸ್‌ಗಳಿಗೆ ಪಾಸಿಟಿವ್ ಇರೋದು ದೃಢಪಟ್ಟಿದೆ. ಅಲ್ಲದೆ, ಡಾಟಾ ಎಂಟ್ರಿ ಆಪರೇಟರ್, ನಾಲ್ವರು ಟೆಕ್ನಿಷಿಯನ್ಸ್, ಡಿಹೆಚ್‌ಒ ಕಚೇರಿಯ ಓರ್ವ ಸಿಬ್ಬಂದಿಗೂ ವೈರಸ್ ತಗುಲಿದೆ.

ದೇವರಾಜ ಮಾರ್ಕೆಟ್ ಬಂದ್
ಮೈಸೂರಿನ ದೇವರಾಜ ಮಾರುಕಟ್ಟೆಯನ್ನ ಬಂದ್ ಮಾಡಲಾಗಿದೆ. ಕೊರೊನಾ ಕೇಸ್​ಗಳು ಹೆಚ್ಚುತ್ತಿರೋದ್ರಿಂದ ಇಂದಿನಿಂದ 3 ದಿನ ಮಾರುಕಟ್ಟೆ ಬಂದ್ ಇರಲಿದೆ. ಮಾರ್ಕೆಟ್​ನಲ್ಲಿ ನಡೆಯುತ್ತಿದ್ದ ಹೂವು ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಜೆ.ಕೆ. ಮೈದಾನದಲ್ಲಿ ಹೂವು ಮಾರಾಟಕ್ಕೆ ಪಾಲಿಕೆ ಆಯುಕ್ತರು ಅವಕಾಶ ಕಲ್ಪಿಸಿದ್ದಾರೆ.

ಇಂದು 90 ಕೊರೊನಾ ಕೇಸ್?
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 90 ಜನರಲ್ಲಿ ಕೊರೊನಾ ಪತ್ತೆಯಾಗೋ ಸಾಧ್ಯತೆ ಇದೆ. ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ, ಭದ್ರಾವತಿ, ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ 85 ಮಂದಿಗೆ ವೈರಸ್ ಅಟ್ಯಾಕ್ ಆಗೋ ಶಂಕೆ ಮೂಡಿದೆ. ಅಲ್ಲದೆ, ಹೊರ ಜಿಲ್ಲೆಯ ಐವರಿಗೆ ಸೋಂಕು ತಗುಲೋ ಅನುಮಾನವಿದೆ.

50ಕ್ಕೂ ಹೆಚ್ಚು ಪಾಸಿಟಿವ್?
ಗದಗ ಜಿಲ್ಲೆಯಲ್ಲೂ ಇಂದು 50 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳೋ ಸಂಭವವವಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯಲಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 1 ಸಾವಿರದ 140 ಸೋಂಕಿತರಿದ್ದು, ಹಳ್ಳಿ ಹಳ್ಳಿಗೂ ಹಬ್ಬುವ ಆತಂಕ ಎದುರಾಗಿದೆ.

7 ಮಂದಿಗೆ ವಕ್ಕರಿಸಿದ ವೈರಸ್
ಕೊಡಗು ಜಿಲ್ಲೆಯಲ್ಲಿ ಇಂದು 7 ಮಂದಿಗೆ ಪಾಸಿಟಿವ್ ಹೊಕ್ಕಿರೋದು ದೃಢಪಟ್ಟಿದೆ. ವಿರಾಜಪೇಟೆ ತಾಲೂಕಿನ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ವಕ್ಕರಿಸಿದೆ. ಅಲ್ಲದೆ, ಮಡಿಕೇರಿಯ ಮೂವರಿಗೂ ಸೋಂಕು ತಗುಲಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 363ಕ್ಕೆ ಏರಿದ್ದು, ಈ ಬಗ್ಗೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.

ನಿಯಮ ಉಲ್ಲಂಘನೆ ಱಲಿ
ಬಂದ್ ಹೆಸರಲ್ಲಿ ಮಂಡ್ಯದಲ್ಲಿ ಕೆಲ ಸಂಘಟನೆಗಳು ಕೊವಿಡ್ ನಿಯಮ ಉಲ್ಲಂಘಿಸಿವೆ. ಮಾಸ್ಕ್ ಧರಿಸದೆ, ಅಂತರ ಪಾಲಿಸದೆ ಸಂಘಟನೆ ಕಾರ್ಯಕರ್ತರು ಪ್ರತಿಭಟನಾ ಱಲಿ ನಡೆಸಿದ್ದಾರೆ. ಸೋಂಕು ಹೆಚ್ಚುತ್ತಿರೋದ್ರಿಂದ ಪ್ರತಿಭಟನೆ ನಡೆಸುವಂತಿಲ್ಲ ಅಂತಾ ಜಿಲ್ಲಾಡಳಿತ ಆದೇಶಿಸಿದೆ. ಆದ್ರೂ ಱಲಿ ನಡೆಸಲಾಯ್ತು.

Related Tags:

Related Posts :

Category:

error: Content is protected !!