ನನ್ನ ಪ್ರವಾಸ ಪೂರ್ವ ನಿಯೋಜಿತವಾಗಿತ್ತು: ಸವದಿ

ಬೆಂಗಳೂರು: ಏಕಾಏಕಿ ದೆಹಲಿ ಪ್ರವಾಸ ಮಾಡಿ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿ ಇಂದು ಬೆಂಗಳೂರಿಗೆ ವಾಪಸ್ಸಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.ಈ ವೇಳೆ ಅವರು ತನ್ನ ದೆಹಲಿ ಪ್ರವಾಸ ಪೂರ್ವ ನಿಯೋಜಿತವಾಗಿತ್ತು ಎಂದರು.

ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸದ ಮೇಲೆ ದೆಹಲಿಗೆ ಹೋಗಿದ್ದೆ. ಎಲೆಕ್ಟ್ರಿಕ್ ಬಸ್​ಗಳ ವಿಚಾರವಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರೊಂದಿಗೆ ಚರ್ಚಿಸಬೇಕಿತ್ತು. ಬೆಂಗಳೂರು ವಿಭಾಗಕ್ಕೆ 300, ಹುಬ್ಬಳ್ಳಿ-ಧಾರವಾಡ ವಿಭಾಗಕ್ಕೆ 50 ಎಲೆಕ್ಟ್ರಿಕ್ ಬಸ್​ಗಳನ್ನು ನೀಡಲು ನಮ್ಮ ಇಲಾಖೆ ನಿರ್ಧರಿಸಿದೆ ಎಂದು ಸವದಿ ಹೇಳಿದರು.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ಅಥಣಿ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳ ವಿಷಯವಾಗಿ ಚರ್ಚಿಸಬೇಕಿತ್ತು ಎಂದು ಹೇಳಿದ ಸವದಿ, ನಿರ್ಭಯ ಯೋಜನೆಯಡಿ ರಾಜ್ಯಕ್ಕೆ ಸ್ವಲ್ಪ ಮಾತ್ರವೇ ಹಣ ಬಿಡುಗಡೆಯಾಗಿದೆ ಈ ವಿಷಯವಾಗಿಯೂ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತಾಡಿರುವುದಾಗಿ ತಿಳಿಸಿದ್ರು..

ನನ್ನ ದೆಹಲಿ ಪ್ರವಾಸದ ವಿಷಯದಲ್ಲಿ ಯಾಕೆ ಇಷ್ಟೆಲ್ಲ ಚರ್ಚೆಗಳಾಗುತ್ತಿವೆ ಅಂತ ಅರ್ಥವಾಗುತ್ತಿಲ್ಲ. ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದೇ ಅಲ್ಲಿಗೆ ಹೋಗಿದ್ದು, ಪ್ರವಾಸ ಪೂರ್ವ ನಿಯೋಜಿತವಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

Related Tags:

Related Posts :

Category:

error: Content is protected !!