ಕೊರೊನಾ ಮಹಾಮಾರಿಗೆ ಜಿಲ್ಲಾಧಿಕಾರಿ ಬಲಿ.. ಎಲ್ಲಿ?

ಕೊರೊನಾದಿಂದಾಗಿ ಪಶ್ಚಿಮ ಬಂಗಾಳದ ಚಂದನ್ ನಗರದ ಜಿಲ್ಲಾಧಿಕಾರಿ ದೇಬದತ್ತ ರಾಯ್ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

34 ವರ್ಷದ ದೇಬದತ್ತ ರಾಯ್ ಪಶ್ಚಿಮ ಬಂಗಾಳ ಸಿವಿಲ್ ಸರ್ವಿಸ್ ಅಧಿಕಾರಿಯಾಗಿದ್ದು, ಹೂಗ್ಲಿ ಜಿಲ್ಲೆಯ ಚಂದನ್ ನಗರದ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದ ಮೇಲೆ ಮನೆಯಲ್ಲೇ ‌ಚಿಕಿತ್ಸೆ ಪಡೆಯುತ್ತಿದ್ದ ದೇಬದತ್ತ ರಾಯ್ ರವರು ತಮ್ಮ ಆರೋಗ್ಯ ತೀವ್ರ ಹದಗೆಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರಿಳೆದಿದ್ದಾರೆ.

ದೇಬದತ್ತ ರಾಯ್ ರವರ ಪತಿಗೂ ಕೊರೊನ ಪಾಸಿಟಿವ್ ಬಂದಿದ್ದು,ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರಾಯ್ ರವರ ಪತಿಗೆ ಪತ್ರ ಬರೆದು ಸಾಂತ್ವನ ವ್ಯಕ್ತಪಡಿಸಿದ್ದಾರೆ.

Related Tags:

Related Posts :

Category:

error: Content is protected !!