26 ಗಂಟೆ ಕಳೆದರೂ ಸೋಂಕಿತನ ಶವವನ್ನ ಮನೆಯಿಂದ ಶಿಫ್ಟ್ ಮಾಡಿಲ್ಲ ಬಿಬಿಎಂಪಿ

ಬೆಂಗಳೂರು: ಕೊರೊನಾ ಹೆಮ್ಮಾರಿಯ ರೌದ್ರನರ್ತನದ ಮಧ್ಯೆ ಪಾಲಿಕೆಯ ಮತ್ತೊಂದು  ಎಡವಟ್ಟು ಬೆಳಕಿಗೆ ಬಂದಿದೆ. ಮುಂಬೈ, ದೆಹಲಿಯಲ್ಲಿ ಕಾಣಸಿಗುತ್ತಿದ್ದ ದೃಶ್ಯಗಳು ಈಗ ಸಿಲಿಕಾನ್​ ಸಿಟಿಯಲ್ಲಿಯೂ ಸಹ ನೋಡಬೇಕಾಗಿದೆ.

ಹೌದು, ಕಲಾಸಿಪಾಳ್ಯದ ತನ್ನ ನಿವಾಸದಲ್ಲಿ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದ ಕೊರೊನಾ ಸೋಂಕಿತ ವೃದ್ಧನ ಮೃತದೇಹವನ್ನ ಒಂದಲ್ಲ ಎರಡಲ್ಲ ಬರೋಬ್ಬರಿ 26 ಗಂಟೆಯಾದ್ರೂ ಶಿಫ್ಟ್ ಮಾಡೋಕೆ ಯಾವುದೇ ಬಿಬಿಎಂಪಿ ಅಧಿಕಾರಿ ಬಂದಿಲ್ಲವಂತೆ. ಹೀಗಾಗಿ, ಸೋಂಕಿತನ ಮೃತದೇಹವನ್ನ ಮನೆಯಲ್ಲೇ ಇಟ್ಟು ಆತನ ಸಹೋದರಿ ಪರದಾಡುತ್ತಿದ್ದಾರೆ.

ಜೊತೆಗೆ, ನಾವೇನು ಬೆಂಗಳೂರಿನಲ್ಲಿ ಇದ್ದೀವಾ ಇಲ್ಲಾ ಕಾಡಿನಲ್ಲಿದ್ದೀವಾ ಎಂದು ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Related Tags:

Related Posts :

Category:

error: Content is protected !!