JNU ಆಯ್ತು ಈಗ ಹೊಸ ಸಂಕಷ್ಟ ಶುರುವಾಯ್ತು, ವಿವಾದದ ಸುಳಿಯಲ್ಲಿ ದೀಪಿಕಾ

ಯಾಕೋ ಸದ್ಯದ ಮಟ್ಟಿಗೆ ದೀಪಿಕಾ ಪಡುಕೋಣೆ ಟೈಂ ಸರಿಯಾಗಿಲ್ಲ ಅಂತಾ ಕಾಣುತ್ತೆ. ಆ ಕಡೆ ಬಹುನಿರೀಕ್ಷಿತ ಚಿತ್ರ ‘ಛಪಾಕ್’ ಮಕಾಡೆ ಮಲಗಿದ್ರೆ, ಇನ್ನೊಂದ್ಕಡೆ ಅದೇ ಸಿನಿಮಾದ ಪ್ರಮೋಷನ್ ಮಾಡೋಕೆ ಹೋಗಿ ಡಿಪ್ಪಿ ಎಡವಟ್ಟು ಮಾಡ್ಕೊಂಡಿದ್ದಾಳೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಯಾಂಡಲ್​ವುಡ್​ನ ಐಶ್ವರ್ಯ, ಬಾಲಿವುಡ್​ನ ಪದ್ಮಾವತಿ ದೀಪಿಕಾ ಪಡುಕೋಣೆಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಿವೆ. ಅದ್ಯಾವಾಗ ಜೆಎನ್​ಯು ಹೋರಾಟ ನಡೆಯುತ್ತಿದ್ದ ಜಾಗಕ್ಕೆ ದೀಪಿಕಾ ಹೋಗಿ ಬಂದ್ರೋ, ಆಹೊತ್ತಿನಿಂದ ಇಲ್ಲಿಯವರೆಗೆ ದೀಪಿಕಾಗೆ ನೆಮ್ಮದಿಯೇ ಇಲ್ಲ. ಆಕಡೆ ‘ಛಪಾಕ್’ ಸಿನಿಮಾ ಮಕಾಡೆ ಮಲಗಿದೆ. ಇನ್ನು ಇದೇ ‘ಛಪಾಕ್’ ಚಿತ್ರಕ್ಕಾಗಿ ಪ್ರಮೋಷನ್ ಮಾಡಲು ಹೋಗಿ ದೀಪಿಕಾ ಎಡವಿದ್ದಾರೆ.

ಪ್ರಚಾರದ ಅಬ್ಬರದಲ್ಲಿ ದೀಪಿಕಾ ಎಡವಟ್ಟು!
ಅಂದಹಾಗೆ ವಿಭಿನ್ನ ಕಥೆಯ ಮೂಲಕವೇ ಇಡೀ ಭಾರತ ಸಿನಿಮಾರಂಗದ ಗಮನ ಸೆಳೆದಿದ್ದ ಛಪಾಕ್ ಮೂವಿ, ಅಟ್ಟರ್ ಫ್ಲಾಪ್ ಆಗಿದೆ. ಅತ್ತ ಜನರಿಂದಲೂ ದೀಪಿಕಾ ಕೆಂಗಣ್ಣಿಗೆ ಗುರಿಯಾಗಿರುವಾಗಲೇ, ಇತ್ತ ಬಾಕ್ಸ್ ಆಫೀಸ್​ನಲ್ಲು ಸದ್ದು ಮಾಡುತ್ತಿಲ್ಲ. ಹೀಗಾಗಿ ಚಿತ್ರ ಬಿಡುಗಡೆಯಾಗಿ 1 ವಾರದ ನಂತರವೂ ಪ್ರಮೋಷನ್​ಗಾಗಿ ಡಿಪ್ಪಿ ಹೊಸದೊಂದು ಪ್ರಯತ್ನ ಮಾಡಿದ್ದರು. ಟಿಕ್​ಟಾಕ್ ಮೂಲಕ ಪ್ರಮೋಟ್ ಮಾಡಲು ಹೋಗಿದ್ದಾಗ, ಆಸಿಡ್ ಸಂತ್ರಸ್ತರಿಗೆ ಅವಮಾನ ಮಾಡಲಾಗಿದೆ ಅಂತಾ ದೀಪಿಕಾ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ.

ದೀಪಿಕಾ ಸಿನಿ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ?
ಇನ್ನು ಈ ಘಟನೆಗಳೆಲ್ಲಾ ನೇರ ಪರಿಣಾಮ ಬೀರುತ್ತಿರೋದು ದೀಪಿಕಾ ಪಡುಕೋಣೆಯ ಸಿನಿ ಭವಿಷ್ಯದ ಮೇಲೆ. ಒಂದ್ಕಡೆ ಜಾಹೀರಾತು ಕಂಪೆನಿಗಳು ಕೂಡ ಹೆದರಿಕೊಂಡಿದ್ದರೆ, ಮುಂದೆ ದೀಪಿಕಾಗೆ ಬರುವ ಸಿನಿಮಾ ಆಫರ್​ಗಳಿಗೂ ಪ್ರಸಕ್ತ ಘಟನೆಗಳು ಎಫೆಕ್ಟ್ ಕೊಡುವ ಸಾಧ್ಯತೆ ದಟ್ಟವಾಗಿದೆ.

ಒಟ್ನಲ್ಲಿ ದೀಪಿಕಾ ಏನೋ ಮಾಡಲು ಹೋಗಿ ಏನೋ ಮಾಡ್ಕೊಂಡಿದ್ದಾರೆ. ಪ್ರಮೋಷನ್​ನಲ್ಲಿ ಮಾಡಿಕೊಂಡ ಯಡವಟ್ಟು ಮತ್ತೊಂದು ಎಫೆಕ್ಟ್ ಕೊಡುತ್ತಿದೆ. ಆದರೆ ಇದನ್ನೆಲ್ಲಾ ದೀಪಿಕಾ ಭವಿಷ್ಯದಲ್ಲಿ ಹೇಗೆ ಫೇಸ್ ಮಾಡುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!