ದೆಹಲಿ ಗದ್ದುಗೆಗಾಗಿ ತ್ರಿಕೋನ ಸಮರ, ಮೋದಿ ಹಿಂದಿಟ್ಟು ಅಮಿತ್ ಶಾ ರಣತಂತ್ರ

ಗಲ್ಲಿ ಗಲ್ಲಿಯಲ್ಲೂ ಪ್ರಚಾರ. ಕೇರಿ ಕೇರಿಯಲ್ಲೂ ಮತಶಿಕಾರಿ. ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಜನರ ದಿಲ್​ ಗೆಲ್ಲೋಕೆ ರಣತಂತ್ರ. ರಾಷ್ಟ್ರ ರಾಜಧಾನಿಯಲ್ಲಿ ಗದ್ದುಗೆ ಏರೋಕೆ ಕೇಸರಿ ಟೀಂ ಹವಣಿಸ್ತಿದ್ರೆ, ಹೊಸ ಸ್ಟ್ರಾಟಜಿ ಮೂಲಕ ಆಮ್ ಆದ್ಮಿ ಅಖಾಡದಲ್ಲಿ ಅಬ್ಬರಿಸ್ತಿದೆ. ಕೈ ಕಲಿಗಳು ಕೂಡ ಸೈಲೆಂಟಾಗೆ ತಂತ್ರ ಹೂಡ್ತಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ರಂಗೇರಿದ ಚುನಾವಣಾ ಅಖಾಡ!
ಯೆಸ್. ದೆಹಲಿ ವಿಧಾನಸಭೆ ಚುನಾವಣೆ ಅಖಾಡ ದಿನೇ ದಿನೇ ಕಾವು ಪಡೆದುಕೊಳ್ತಿದೆ. ಮತದಾನಕ್ಕೆ ಮೂರೇ ಮೂರು ದಿನ ಬಾಕಿ ಇದೆ. ಹೀಗಾಗಿ ಮೂರು ಪಕ್ಷಗಳು ಜನರ ಮನ ಗೆಲ್ಲೋಕೆ ಅಖಾಡದಲ್ಲಿ ಘೀಳಿಡ್ತಿದ್ದಾರೆ. ಬರೋಬ್ಬರಿ 21ವರ್ಷದ ಬಳಿಕ ರಾಜಧಾನಿಯಲ್ಲಿ ರಾಜ್ಯಭಾರ ಮಾಡೋಕೆ ಬಿಜೆಪಿ ತವಕದಲ್ಲಿದೆ. ಆದ್ರೆ, ಇಷ್ಟು ದಿನ ಎಲ್ಲಾ ಚುನಾವಣೆಯಲ್ಲೂ ಪ್ರಧಾನಿ ಮೋದಿ ಮುಂದಿಟ್ಟು ಪ್ರಚಾರಕ್ಕಿಳಿಯುತ್ತಿದ್ದ ಕೇಸರಿ ಟೀಂ ದೆಹಲಿಯಲ್ಲಿ ಮಾತ್ರ ಚಾಣಕ್ಯ ತಂತ್ರ ಹೆಣೆದಿದೆ.

ದ್ವಾರಕದಲ್ಲಿ ಇಂದು ಪ್ರಧಾನಿ ಮೋದಿ ಕ್ಯಾಂಪೇನ್!
ಪ್ರಧಾನಿ ಮೋದಿಯನ್ನೇ ಮುಂದಿಟ್ಕೊಂಡು ಎಲ್ಲಾ ಎಲೆಕ್ಷನ್​​ನಲ್ಲಿ ಕ್ಯಾಂಪೇನ್ ಮಾಡ್ತಿದ್ದ ಕೇಸರಿ ಬ್ರಿಗೇಡ್, ದೆಹಲಿಯಲ್ಲಿ ಮಾತ್ರ ವಿಭಿನ್ನ ಪ್ಲ್ಯಾನ್ ಮಾಡಿದೆ. ಅದೇನಂದ್ರೆ ಹೈವೋಲ್ಟೇಜ್ ಕದನದಲ್ಲಿ ಪ್ರಧಾನಿ ಮೋದಿ ಕೇವಲ ಎರಡು ಱಲಿ ಮಾತ್ರ ನಡೆಸಲಿದ್ದಾರೆ. ಇಂದು ದ್ವಾರಕದಲ್ಲಿ ಅಬ್ಬರದ ಪ್ರಚಾರ ನಡೆಸಲಿರೋ ನಮೋ ಮತ್ತೆಲ್ಲೂ ಕ್ಯಾಂಪೇನ್ ಮಾಡ್ತಿಲ್ಲ. ಯಾಕಂದ್ರೆ, ಒಂದು ವೇಳೆ ದೆಹಲಿ ಚುನಾವಣೆಯಲ್ಲಿ ಸೋತರೆ ಸೋಲಿನ ಹೊಣೆ ಮೋದಿಗೆ ಹೊರಿಸಬಾರ್ದು ಅನ್ನೋ ತಂತ್ರ ಬಿಜೆಪಿಯದ್ದು. ಇದರ ಜೊತೆಗೆ ಮತದಾರರ ಸೆಳಯೋಕೆ ಹಲವು ತಂತ್ರಗಳನ್ನೂ ಕೇಸರಿ ಟೀಂ ಮಾಡ್ಕೊಂಡಿದೆ.

ಬಿಜೆಪಿ ತಂತ್ರಗಳೇನು..?
ದೆಹಲಿ ಚುನಾವಣಾ ಅಖಾಡದಲ್ಲಿ ಕೇಸರಿ ಟೀಂ ಆಪ್‌ ಸರ್ಕಾರದ ಅಭಿವೃದ್ಧಿ ಅಜೆಂಡಾವನ್ನ ಟಾರ್ಗೆಟ್ ಮಾಡಿದೆ. ಆಪ್ ಸರ್ಕಾರ ಹೇಳುವಂತೆ ದೆಹಲಿಯಲ್ಲಿ ಶಾಲೆ, ಮೊಹಲ್ಲಾ ಕ್ಲಿನಿಕ್ ಅಭಿವೃದ್ಧಿಯಾಗಿಲ್ಲ ಎಂದು ಹೇಳಿ ಮತ ಸೆಳೆಯೋಕೆ ತಂತ್ರ ಹೆಣೆದಿದೆ. ಜೊತೆಗೆ ಉಚಿತ ನೀರು ಕೊಟ್ಟರು ಅದು ಕುಡಿಯೋಕೆ ಯೋಗ್ಯವಾಗಿಲ್ಲ ಎನ್ನುವುದು ಹಾಗೂ ಆಪ್ ವೈಫಲ್ಯಗಳಿರೋ ಸ್ಥಳದಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದೆ. ಅಲ್ಲದೇ, ಶಾಹೀನ್‌ ಬಾಗ್ ಹೋರಾಟವನ್ನ ಪದೇ ಪದೆ ಪ್ರಸ್ತಾಪಿಸೋ ಮೂಲಕ ಹಿಂದೂ ಸಮುದಾಯದ ಮತ ಸೆಳಯೋಕೆ ಸಜ್ಜಾಗಿದೆ.

ಆಪ್ ತಂತ್ರಗಳೇನು..?
ಇನ್ನು, ಚುನಾವಣೆಯಲ್ಲಿ ಗೆಲ್ಲೋಕೆ ಮಾಸ್ಟರ್ ಪ್ಲ್ಯಾನ್ ಮಾಡಿರೋ ಆಪ್ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಟ್ರಂಪ್ ಕಾರ್ಡ್ ಮಾಡ್ಕೊಂಡಿದೆ. ಉಚಿತ ನೀರು, ವಿದ್ಯುತ್ ಸೌಲಭ್ಯಗಳನ್ನು ಜನರ ಮುಂದಿಡೋದು. ಅಲ್ಲದೇ, ಯಾವುದೇ ಸಮುದಾಯ ಟಾರ್ಗೆಟ್ ಮಾಡದೇ ಎಲ್ಲಾ ಮತಗಳನ್ನು ಸೆಳೆಯೋಕೆ ಪ್ರಚಾರ ಮಾಡ್ತಿದೆ. ಈಗಾಗಲೇ ಶಾಹೀನ್‌ ಬಾಗ್ ಹೋರಾಟಗಾರರನ್ನು ಸ್ಥಳದಿಂದ ಗೇಟ್​ಪಾಸ್ ನೀಡಿದ್ದು ಅವರಿಗೆ ನಮ್ಮ ಬೆಂಬಲ ನೀಡಿಲ್ಲ ಎಂದು ಬಿಂಬಿಸುತ್ತಿದೆ. ಜೊತೆಗೆ ಸಿಎಎ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ಟಾರ್ಗೆಟ್ ಮಾಡಿ ಪ್ರಚಾರ ನಡೆಸುತ್ತಿದೆ. GFX

ಹೈವೋಲ್ಟೇಜ್ ಕಣದಲ್ಲಿಂದು ಅಣ್ಣ-ತಂಗಿ ಮತಶಿಕಾರಿ..!
ಇತ್ತ, ಸೋಲಿನ ಹೊಡೆತಕ್ಕೆ ಸಿಲುಕಿ ಸೊರಗಿ ಹೋಗಿರೋ ಕಾಂಗ್ರೆಸ್ ಕೂಡ ಅಸ್ವಿತ್ವ ಉಳಿಸಿಕೊಳ್ಳೋಕೆ ಒದ್ದಾಡ್ತಿದೆ. ಕಾಂಗ್ರೆಸ್‌ಗೆ ಚೈತನ್ಯ ನೀಡಲು ಇಂದು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿ ಜಂಗಪುರ ಹಾಗೂ ಸಂಗಮ್ ವಿಹಾರ್‌ನಲ್ಲಿ ಱಲಿ ನಡೆಸಲಿದ್ದಾರೆ. ಜೊತೆಗೆ ದೆಹಲಿಯ ವಿವಿಧೆಡೆ ಕೈ ನಾಯಕರು ಮತಬೇಟೆ ನಡೆಸಲಿದ್ದಾರೆ.

ಒಟ್ನಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಚುನಾವಣಾ ಕಣ ಕಣ ರಂಗೇರಿದೆ. ರಣಕಣದಲ್ಲಿ ಮೋದಿಯನ್ನ ಹಿಂದಿಟ್ಟು ಬಿಜೆಪಿ ಪ್ರಚಾರದ ಕಣಕ್ಕಿಳಿದಿದೆ. ಇದು ಆಮ್ ಆದ್ಮಿಗೂ ದೊಡ್ಡ ವರವಾಗಲಿದೆ. ಅದೇನೆ ಇರ್ಲಿ ಕೇಸರಿ ಟೀಂ ಹೊಸ ತಂತ್ರ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಕಾದು ನೋಡ್ಬೇಕು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!