ರಾಷ್ಟ್ರ ರಾಜಧಾನಿಯಲ್ಲಿ ಗುಂಡು ಹಾರಿಸಿ ಮಹಿಳಾ SI ಹತ್ಯೆ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಡರಾತ್ರಿ ಗುಂಡು ಹಾರಿಸಿ ಮಹಿಳಾ ಎಸ್​ಐ ಪ್ರೀತಿ ಅಹ್ಲಾವತ್ ಅವರನ್ನು ಹತ್ಯೆಮಾಡಲಾಗಿದೆ. ರೋಹಿಣಿ ಪ್ರದೇಶದಲ್ಲಿ ಎಸ್​ಐ ಪ್ರೀತಿ(26) ಹತ್ಯೆ ನಡೆದಿದ್ದು, ರಾಜಧಾನಿ ಜನರನ್ನು ಬೆಚ್ಚಿ ಬೀಳಿಸಿದೆ.

ಪತ್‌ಪರ್‌ಗಂಜ್ ಇಂಡಸ್ಟ್ರಿಯಲ್ ಏರಿಯಾ ಠಾಣೆ ಎಸ್‌ಐ ಪ್ರೀತಿ ಅಹ್ಲಾವತ್ ಅವರು ಅತ್ಯಾಚಾರ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದರು. ತಡರಾತ್ರಿ ಕೆಲಸ ಮುಗಿಸಿಕೊಂಡು ರೋಹಿಣಿ ಮೆಟ್ರೋ ಸ್ಟೇಷನ್​ನಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ತಲೆಗೆ ಒಂದು ಗುಂಡು ತಗುಲಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಪ್ರೀತಿ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಸ್ಥಳದಿಂದ ಅಪರಿಚಿತ ದುಷ್ಕರ್ಮಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

7AM- TV9 Kannada Facebook LIVE ಟಿವಿ9 ಕನ್ನಡ ಫೇಸ್ ಬುಕ್ ಲೈವ್

#Delhi #SubInspector #SI #Death ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳಾ ಎಸ್​ಐ ಹತ್ಯೆ#Murder #TV9Kannada #KannadaNews #TV9FBLive #FBLive #FacebookLive #TV9FacebookLive #TV9KannadaFacebookLive #TV9KannadaFBLive

Tv9Kannada यांनी वर पोस्ट केले शुक्रवार, ७ फेब्रुवारी, २०२०

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!