ಗವಿಸಿದ್ದೇಶ್ವರ ಜಾತ್ರೆಗೆ ಹಳ್ಳಿ ಜನತೆಯಿಂದ ತಯಾರಾಗ್ತಿವೆ ಲಕ್ಷಾಂತರ ರೊಟ್ಟಿ

ಕೊಪ್ಪಳ: ದಕ್ಷಿಣ ಭಾರತ ಮಹಾ ಕುಂಬಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಈಗ ಕ್ಷಣ ಗಣನೇ ಆರಂಭವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆಗಾಗಿ ಕೊಪ್ಪಳ ಜಿಲ್ಲೆಯ ಹಳ್ಳಿಯ ಜನತೆ ರೊಟ್ಟಿ ತಯಾರಿಯಲ್ಲಿ ತೊಡಗಿದ್ದಾರೆ.

ಎಲ್ಲಿ ನೋಡಿದ್ರೂ ಪಟಪಟ..ಪಟಪಟ ಅನ್ನೋ ಶಬ್ದ. ಎಲ್ಲಿ ನೋಡಿದ್ರೂ ಹೆಂಗಳೆಯರು. ಕೆಲವರು ರೊಟ್ಟಿ ಬಡಿಯುತ್ತಿದ್ರೆ, ಹಲವರು ರೊಟ್ಟಿ ಬೇಯಿಸುತ್ತಿದ್ದಾರೆ. ನೂರಾರು ಮಹಿಳೆಯರು ಒಂದೆಡೆ ಸೇರಿ ಸಾಮೂಹಿಕವಾಗಿ ರೊಟ್ಟಿ ತಯಾರಿಸೋ ದೃಶ್ಯ ಕಣ್ಣಿಗೆ ಹಬ್ಬ ಉಂಟುಮಾಡುತ್ತೆ. ಅಷ್ಟಕ್ಕೂ ಇದು ಅಜ್ಜನ ಜಾತ್ರೆಗೆ ನಡೆದಿರೋ ತಯಾರಿ. ದಕ್ಷಿಣ ಭಾರತದ ಕುಂಭಮೇಳದ ತಯಾರಿ. ಜಾತ್ರೆಗೆ ಬರೋ ಭಕ್ತಾಧಿಗಳಿಗಾಗಿ ನಡೆದಿರೋ ತಯಾರಿ.

ದಕ್ಷಿಣ ಭಾರತದ ಕುಂಭಮೇಳ ಅಂತಾನೆ ಪ್ರಖ್ಯಾತಿ ಪಡೆದಿರೋ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಇದೇ ಜನವರಿ 12 ರಂದು ಗವಿಸಿದ್ದೇಶ್ವರ ರಥೋತ್ಸವ ನಡೆಯಲಿದೆ. ಅಂದು ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಜಾತ್ರೆಯ ವಿಶೇಷ ಅಂದ್ರೆ ಅಂದು ಆಗಮಿಸಿದ ಭಕ್ತರಿಗೆಲ್ಲಾ ರೊಟ್ಟಿ ಊಟ ಇರುತ್ತೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ರೊಟ್ಟಿ ತಯಾರಿ ಜೋರಾಗಿ ನಡೆದಿದೆ. ಅದ್ರಲ್ಲೂ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮವೊಂದರಲ್ಲೇ ಬರೋಬ್ಬರಿ ಎರಡು ಕ್ವಿಂಟಾಲ್‌ ಜೋಳದ ಹಿಟ್ಟಿನಿಂದ ರೊಟ್ಟಿ ತಯಾರಿಸಲಾಗ್ತಿದೆ.

ಇನ್ನು ಹಟ್ಟಿ ಗ್ರಾಮದ ಮಹಿಳೆಯರು, ಮಕ್ಕಳು ಒಂದೆಡೆ ಸೇರಿ ರೊಟ್ಟಿ ತಯಾರಿಸ್ತಿರೋ ವಿಷ್ಯ ಕಿವಿಗೆ ಬೀಳ್ತಿದ್ದಂತೆ ಗವಿಸಿದ್ದೇಶ್ವರ ಮಠದ ಶ್ರೀಗಳೇ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮದ ಮಹಿಳೆಯರು ಮಕ್ಕಳ ಸೇವೆಯನ್ನು ನೋಡಿ ಆಶೀರ್ವದಿಸಿದ್ರು. ಅಷ್ಟಕ್ಕೂ ಹಟ್ಟಿ ಗ್ರಾಮದ ಜನ ಒಟ್ಟಾಗಿ ಪ್ರತಿ ವರ್ಷವೂ ಈ ರೀತಿ ರೊಟ್ಟಿ ತಯಾರಿಸಿ ಜಾತ್ರೆಗೂ ಮುನ್ನ ಶ್ರೀಮಠಕ್ಕೆ ಒಪ್ಪಿಸಿ ಬರ್ತಾರೆ.

ಒಟ್ನಲ್ಲಿ ಉತ್ತರ ಕರ್ನಾಟಕ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರೋ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗ ಇನ್ನೊಂದೇವಾರ ಬಾಕಿ ಉಳಿದಿದೆ. ಜಾತ್ರೆಗಾಗಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮ ಜೋರಾಗಿದ್ದು, ಹಳ್ಳಿ ಹಳ್ಳಿಗಳಲ್ಲೂ ಲಕ್ಷಂತಾರ ರೊಟ್ಟಿ ತಯಾರಾಗ್ತಿವೆ.

 

 

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!