30 ಕೆಜಿ ಕಲ್ಲನ್ನೇ ಸಲೀಸಾಗಿ ಎತ್ತಬಲ್ಲ ಧಾರವಾಡದ ಕಲಿಯುಗ ಬಲಭೀಮ!

ಧಾರವಾಡ: ಸಾಧನೆ ಮಾಡ್ಬೇಕು ಅನ್ನೋ ಛಲ. ಮೈಯಲ್ಲಿ ಗುರಿ ಮುಟ್ಟೋಕೆ ಬೇಕಾದ ಬಲ. ದಿನಬೆಳಕಾದ್ರೆ ಶಿಸ್ತಾಗಿ ಸಾಹಸಕ್ಕೆ ನಿಲ್ತಿದ್ದ. ಅದೇ ಶಿಸ್ತು ಈಗ ಆತನನ್ನ ಹತ್ತೂರಲ್ಲೂ ಹೀರೋ ಮಾಡಿಬಿಟ್ಟಿದೆ. ನೋಡೋರು ಆತನ ಸಾಧನೆಗೆ ತಲೆದೂಗಿದ್ದಾರೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಪೈಲ್ವಾನ ಶಿವನಗೌಡ ಬಾಳನಗೌಡರ ಕಳೆದೊಂದು ವರ್ಷದಿಂದ ಶಿವನಗೌಡ ತೋಳ್ಬಲದಿಂದ್ಲೇ ಹತ್ತೂರಲ್ಲಿ ಫೇಮಸ್ ಆಗೋಗಿದ್ದಾರೆ. ಯಾಕಂದ್ರೆ ಅವರು ಕುತ್ತಿಗೆಯಲ್ಲೇ ತಮ್ಮ ಕರಾಮತ್ತು ತೋರಿಸೋ ಧೀರ. ಮೇಲೆ ಮಣಭಾರದ ಗುಂಡಿದ್ರೂ ಲೀಲಾಜಾಲವಾಗಿ ಎದ್ದು ಕೂರೋ ವೀರ. ರಟ್ಟೆಯಲ್ಲೇ ಬೃಹತ್ ಕಲ್ಲು ಮೇಲೆತ್ತಿ ಬಿಸಾಡೋ ಹಮ್ಮೀರ. ತಿರುಗೋ ಗಾಲಿಯಲ್ಲೂ ಗುಂಡಿಗೆ ಪ್ರದರ್ಶಿಸೋ ಕಲೆಗಾರ. ಗುಂಡುಗಳನ್ನ ಎತ್ತಿ ಬಿಸಾಡೋ ಗಂಡೆದೆ ವೀರನ ಕರಾಮತ್ತು ಹಾಗೂ ಅವರು ಭಾರ ಎತ್ತೋಕೆ ನಿಂತ್ರೆ ನೋಡೋರು ನಿಬ್ಬೆರಗಾಗ್ತಾರೆ.

ಹೀಗಾಗೇ ಆತನ ಶಕ್ತಿಪ್ರದರ್ಶನಕ್ಕೆಂದೇ ಗ್ರಾಮಸ್ಥರೆಲ್ಲಾ ಸೇರಿ ಅಖಾಡ ಸಿದ್ಧಗೊಳಿಸಿದ್ದಾರೆ. ಗ್ರಾಮದ ಹೊರ ಭಾಗದ ಮೈದಾನದಲ್ಲಿ ಜನರ ಮಧ್ಯೆ ಶಿವನಗೌಡ ಹತ್ತಾರು ಬಗೆಯ ಕಲ್ಲುಗಳನ್ನು ಎತ್ತಿ ತಾಕತ್ತು ಶಕ್ತಿ ಪ್ರದರ್ಶನ ತೋರಿದ್ದಾರೆ.

ಇನ್ನು ಶಿವನಗೌಡ 13 ಬಗೆಯ ಶಕ್ತಿ ಪ್ರದರ್ಶನ ಮಾಡಿದ್ದು, 30 ಕೆಜಿಯಿಂದ 70 ಕೆಜಿವರೆಗಿನ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತಿ ಎಸೆದಿದ್ದ.. ಬಳಿಕ ಸಾಲಾಗಿ ಇಟ್ಟಿದ್ದ ಅವೇ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತಿ ಹಿಂದಕ್ಕೆ ಬಿಸಾಕಿದ್ದು ನೋಡುಗರ ಹುಬ್ಬೇರಿಸಿತ್ತು.. ಅಲ್ದೇ 10 ಕಲ್ಲುಗಳ ಮೇಲೆ ನಿಂತು ಬ್ಯಾಲೆನ್ಸ್ ಮಾಡುತ್ತಾ ಕಲ್ಲನ್ನು ಎತ್ತಿ ಕೆಳಗೆ ಎಸೆಯುತ್ತಿದ್ರೆ ಎಲ್ಲರ ಎದೆ ಝಲ್ ಅಂತಿತ್ತು.. ಇದೆಲ್ಲಕ್ಕಿಂತ ಹೆಚ್ಚಿಗೆ ತಿರುಗುವ ಚಕ್ಕಡಿ ಗಾಲಿ ಮೇಲೆ ಕಲ್ಲುಗಳನ್ನು ಇಟ್ಟು, ಗಾಲಿ ತಿರುಗುತ್ತಿರುವಾಗಲೇ ಕಲ್ಲುಗಳನ್ನು ಎತ್ತಿ ಎಸೆಯೋದು ರೋಮಾಂಚನ ಮೂಡಿಸಿತ್ತು.

ಆಧುಕಿನ ಭರಾಟೆಯಲ್ಲಿ ಜಿಮ್​ಗೆ ಹೋಗಿ ಬೆವರಿಳಿಸೋ ಮಂದಿ ನಡುವೆ ಶಿವನಗೌಡ ಡಿಫ್ರೆಂಟ್ ಆಗಿ ಕಾಣ್ತಾರೆ. ಜೊತೆಗೆ ಹಳ್ಳಿ ಸ್ಟೈಲ್​ನಲ್ಲೇ ದೇಹ ದಂಡಿಸಿ ಶಕ್ತಿ ಪ್ರದರ್ಶಿಸಿದ್ದಾರೆ

Related Tags:

Related Posts :

Category: