ವಿಕ್ಟೋರಿಯಾ, ಬೌರಿಂಗ್, ಕೆಸಿಜಿ, ಸಂಜಯಗಾಂಧಿ, ಕಿಮ್ಸ್, ಆರ್ ಆರ್​ ಕಾಲೇಜ್ ಎಲ್ಲೂ ಸಿಗ್ತಿಲ್ಲ ಚಿಕಿತ್ಸೆ

ಬೆಂಗಳೂರು: ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಸಾಮನ್ಯ ಜನರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಅದ್ರಲ್ಲೂ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಇಂಥದ್ದೆ ಒಂದು ಘಟನೆ ಬೆಂಗಳೂರಿನ ನೀಲಸಂದ್ರದಲ್ಲಿ ವರದಿಯಾಗಿದೆ.

ನೀಲಸಂದ್ರದ ಆಟೋಚಾಲಕನ ತಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದ್ರೆ ಅವರಿಗೆ ಡಯಾಲಿಸಿಸ್‌ ಮಾಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಯಾವುದೇ ಆಸ್ಪತ್ರೆಗೆ ಹೋದ್ರೂ, ಡಯಾಲಿಸಿಸ್‌ ಮಾಡುತ್ತಿಲ್ಲ. ಮೊದಲೂ ಕೊರೊನಾ ಟೆಸ್ಟ್‌ ರಿಪೋರ್ಟ್‌ ತನ್ನಿ. ಆಮೇಲೆ ಚಿಕಿತ್ಸೆ ಅಂತಾ ಕೆಲವರು ವಾಪಸ್ ಕಳುಹಿಸಿದ್ರೆ, ಇನ್ನು ಕೆಲವೆಡೆ ಆಸ್ಪತ್ರೆಯಲ್ಲಿ ಬೆಡ್‌ ಇಲ್ಲಾ ಅಂತಾ ವಾಪಸ್‌ ಕಳಿಸುತ್ತಿದ್ದಾರಂತೆ.

ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್, ಕೆಸಿ ಜನರಲ್, ಸಂಜಯ್ ಗಾಂಧಿ, ಕಿಮ್ಸ್, ರಾಜ ರಾಜೇಶ್ವರಿ ಮೆಡಿಕಲ್ ಕಾಲೇಜ್ ಹೀಗೆ ಎಲ್ಲಾ ಕಡೆ ಹೋದ್ರೂ ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸುತ್ತಿದ್ದಾರಂತೆ. ಇದರಿಂದ ನೊಂದಿರುವ ಆಟೋಚಾಲಕ, ದಯವಿಟ್ಟು ನಮ್ಮ ತಂದೆಗೆ ಚಿಕಿತ್ಸೆ ಕೊಡಿ ಅಂತಾ ಆಟೋದಲ್ಲೇ ತಂದೆಯನ್ನು ಕೂರಿಸಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಾ ಗೋಗೆರಿಯುತ್ತಿದ್ದಾರೆ.

Related Tags:

Related Posts :

Category:

error: Content is protected !!