ಈ IAS-IPS ದಂಪತಿ ಅನೇಕ ಪ್ರಥಮಗಳ ‘ಸರ್ದಾರ’ರು, ಏನು ಅಂತೀರಾ? ಓದಿ

ಚಂಡೀಗಢ: ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನ ಹೊಂದಿದ ದೇಶ. ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ, ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಹಾಗೆನೇ ಅಪರೂಪದ ಸಾಧನೆಗಳಿಗೂ ಕೂಡಾ. ಇಂಥದ್ದೇ ಒಂದು ಅಪೂರ್ವ ಸಾಧನೆ  ಪಂಜಾಬ್‌ ರಾಜ್ಯದಲ್ಲಿ ಆಗಿದೆ.

ಹೌದು, ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್‌ ಮಹಾನಿರ್ದೇಶಕ ಮತ್ತು ಮುಖ್ಯಕಾರ್ಯದರ್ಶಿಯಾಗಿ ಪತಿ-ಪತ್ನಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿದ್ದಾರೆ. ವಿನಿ ಮಹಾಜನ್‌ ಎನ್ನುವ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ ಈಗ ಸರ್ದಾರ್‌ಗಳ ಸಾಮ್ರಾಜ್ಯ ಪಂಜಾಬ್‌ನ ಮುಖ್ಯಕಾರ್ಯದರ್ಶಿ ಪಟ್ಟಕ್ಕೇರಿದ್ದಾರೆ.

ಕೇವಲ ಇದಿಷ್ಟೇ ಅಲ್ಲ ವಿನಿ ಮಹಾಜನ್‌ ಅವರ ಪತಿ ಡಿಜಿಪಿ ದಿನಕರ್‌ ಗುಪ್ತಾ ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕ. ಈ ರೀತಿ ಪತಿ ಪೊಲೀಸ್‌ ಸರ್ವಿಸ್‌ ಮುಖ್ಯಸ್ಥ, ಪತ್ನಿ ಸಿವಿಲ್‌ ಸರ್ವಿಸ್‌ ಮುಖ್ಯಸ್ಥರಾಗಿರೋದು ಪಂಜಾಬ್‌ನ ಇತಿಹಾಸದಲ್ಲಿಯೇ ಪ್ರಥಮವಾಗಿದೆ.

ದಂಪತಿಯ ಸಾಧನೆ ದೇಶದಲ್ಲಿಯೇ ಮೊದಲು
 ಈ ರೀತಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾ ನಿರ್ದೇಶಕರಾಗಿ ಪತ್ನಿ ಮತ್ತು ಪತಿ ಕಾರ್ಯನಿರ್ವಹಿಸಲು ಆಯ್ಕೆಯಾಗಿರೋದು ಕೇವಲ ಪಂಜಾಬ್‌ ಮಾತ್ರವಲ್ಲ, ಇಡೀ ಭಾರತ ದೇಶದಲ್ಲಿಯೇ ಪ್ರಥಮ ಬಾರಿಯಾಗಿದೆ. ಹಲವೆಡೆ ಪತಿ ಮತ್ತು ಪತ್ನಿ ಐಎಎಸ್‌ ಅಧಿಕಾರಿಗಳಿರುವುದು, ಐಪಿಸ್-ಐಎಎಸ್‌ ಕೇಡರ್ ದಂಪತಿಗಳಿರುವುದು ಮತ್ತು ಐಪಿಎಸ್‌-ಐಪಿಎಸ್‌ ಕೇಡರ್‌ನ ದಂಪತಿಗಳು ಕಾರ್ಯನಿರ್ವಹಿಸಿದ ಮತ್ತು ನಿರ್ವಹಿಸುತ್ತಿರುವ ಉದಾಹರಣೆಗಳಿವೆ. ಆದ್ರೆ ಸಿವಿಲ್‌ ಸರ್ವಿಸ್‌ ಮತ್ತು ಪೊಲೀಸ್‌ ಸರ್ವಿಸ್‌ಗಳ ಅತ್ಯುನ್ನತ ಮುಖ್ಯಸ್ಥರಾಗಿ ದಂಪತಿ ಕಾರ್ಯನಿರ್ವಹಿಸಿದ ಉಹಾಹರಣೆಗಳಿರಲಿಲ್ಲ.

ಕ್ಯಾಪ್ಟನ್‌ ಅಮರಿಂದರ್‌ರ ಗಟ್ಟಿ ನಿರ್ಧಾರ
ಆದರೆೆ ಸರ್ದಾರ್‌ಗಳ ಸಾಮ್ರಾಜ್ಯ ಪಂಜಾಬ್‌ನಲ್ಲಿ ಇದು ಸಾಧ್ಯವಾಗಿದೆ. ಇದು ಸಾಧ್ಯವಾಗಲು ಕಾರಣರಾಗಿರೋದು ಪಂಜಾಬ್‌ನ ಮುಖ್ಯಮುಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌. ಸ್ವತಃ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ರಾಜಕೀಯದಲ್ಲಿ ಬೆಳೆದು ಮುಖ್ಯಮಂತ್ರಿಯಾಗಿರುವ ಅಮರಿಂದರ್‌ ಸಿಂಗ್‌ ಪ್ರಥಮ ಬಾರಿಗೆ ಮಹಿಳಾ ಅಧಿಕಾರಿಯನ್ನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಇಷ್ಟೆ ಅಲ್ಲ ಪತಿ-ಪತ್ನಿಗಳಿಬ್ಬರೂ ರಾಜ್ಯದ ಕಾರ್ಯಾಂಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

ವಿನಿ-ದಿನಕರ್‌ ದಂಪತಿ 1987 ಬ್ಯಾಚ್‌ ಅಧಿಕಾರಿಗಳು
ವಿನಿ ಮಹಾಜನ್‌ ಮತ್ತು ದಿನಕರ್‌ ಗುಪ್ತಾ ಇಬ್ಬರೂ 1987ರ ಬ್ಯಾಚ್‌ನ ಅಧಿಕಾರಿಗಳು. ವಿನಿ ಮಹಾಜನ್‌ ಐಎಎಸ್‌ ಕ್ಯಾಡರ್‌ ಆದ್ರೆ, ದಿನಕರ್‌ ಗುಪ್ತಾ ಐಪಿಎಸ್‌ ಕ್ಯಾಡರ್‌. ಒಂದೇ ಬ್ಯಾಚ್‌ನ ಅಧಿಕಾರಿಗಳಿಬ್ಬರೂ ಒಂದು ರಾಜ್ಯದ ಸಿವಿಲ್‌ ಸರ್ವಿಸ್‌ ಮತ್ತು ಪೊಲೀಸ್‌ ಸರ್ವಿಸ್‌ಗಳ ಮುಖ್ಯಸ್ಥರಾಗಿರೋದು ಕೂಡಾ ಮೊದಲ ಸಲ. ಒಂದೇ ಬ್ಯಾಚ್‌ ಮತ್ತು ಒಂದೇ ರಾಜ್ಯದ ಅಧಿಕಾರಿಗಳಾಗಿದ್ದ ಇವರಿಬ್ಬರೂ 1989ರಲ್ಲಿ ಮದುವೆಯಾಗಿದ್ದಾರೆ. ಇದುವರೆಗೆ 31 ವರ್ಷಗಳ ಸೇವಾ ಅನುಭವ ಇರುವ ದಂಪತಿ ಈಗ ಪಂಜಾಬ್‌ನ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಹೀಗಾಗಿ ಇಡೀ ದೇಶದ ಗಮನ ಈಗ ಈ ದಂಪತಿಯತ್ತ ತಿರುಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more