ಪೋಕಿರಿ ಡೈಲಾಗ್​ ಹೊಡೆದ ಡೆಡ್ಲಿ ಬ್ಯಾಟ್ಸ್​ಮನ್​ ವಾರ್ನರ್​ಗೆ ಟಾಲಿವುಡ್​ ಆಫರ್!

ಆಸ್ಟ್ರೇಲಿಯಾ ತಂಡದ ಡೆಡ್ಲಿ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್, ಲಾಕ್​ಡೌನ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಭಾರತೀಯ ಸಿನಿಮಾ ಹಾಡುಗಳಿಗೆ ಟಿಕ್ ಟಾಕ್ ವಿಡಿಯೋ ಮೂಲಕ, ಇಲ್ಲಿನ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನೂ ಕದ್ದಿದ್ದಾರೆ.

ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಪ್ರತಿನಿಧಿಸೋ ಡೇವಿಡ್ ವಾರ್ನರ್, ತೆಲುಗು ಸಿನಿಮಾ ಡೈಲಾಗ್​ಗಳನ್ನ ಹೊಡೆಯೋ ಮೂಲಕ, ತೆಲುಗು ಕ್ರಿಕೆಟ್ ಪ್ರೇಮಿಗಳ ಮನಸ್ಸು ಕದ್ದಿದ್ದಾರೆ. ಇತ್ತೀಚೆಗೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಸಿನಿಮಾದ ಬುಟ್ಟ ಬೊಮ್ಮಾ.. ಬುಟ್ಟ ಬೊಮ್ಮಾ ಹಾಡಿಗೆ ವಾರ್ನರ್ ಮತ್ತು ಪತ್ನಿ ಕ್ಯಾಂಡಿ ಟಿಕ್ ಟಾಕ್​ ಮಾಡಿದ್ದರು.

ಈ ವಿಡಿಯೋವನ್ನ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಈ ಟಿಕ್​ ಟಾಕ್​​ ವಿಡಿಯೋ ನೋಡಿ ಅಲ್ಲು ಅರ್ಜುನ್​ ಕೂಡ ಟ್ವಿಟರ್ ಮೂಲಕ ವಾರ್ನರ್​ಗೆ ಧನ್ಯವಾದ ತಿಳಿಸಿದ್ದರು.

ಪೋಕಿರಿ ಡೈಲಾಗ್ ಹೇಳಿದ ವಾರ್ನರ್:
ಇದಾದ ಬಳಿಕ ಡೇವಿಡ್ ವಾರ್ನರ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಪೋಕಿರಿ ಸಿನಿಮಾ ಡೈಲಾಗ್ ಹೇಳಿದ್ದ ಟಿಕ್ ಟಾಕ್ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಅನೇಕರು ವಾರ್ನರ್ ಅವರ ತೆಲುಗು ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಡೇವಿಡ್ ವಾರ್ನರ್ ತೆಲುಗು ಪ್ರೀತಿಗೆ ಟಾಲಿವುಡ್​ನಲ್ಲಿ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದೆ. ನಿಜ.. ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್, ಡೇವಿಡ್ ವಾರ್ನರ್​ಗೆ ತಮ್ಮ ಸಿನಿಮಾದಲ್ಲಿ ನಟಿಸೋದಕ್ಕೆ ಆಫರ್ ನೀಡಿದ್ದಾರೆ.

ಅತಿಥಿ ಪಾತ್ರಕ್ಕೆ ಆಫರ್ ನೀಡಿದ ಪುರಿ ಜಗನ್ನಾಥ್​:
ಟಾಲಿವುಡ್​ನಲ್ಲಿ ಪೋಕಿರಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿರೋ ಪುರಿ, ಈಗ ಹೊಸ ಸಿನಿಮಾದ ನಿರ್ಮಾಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ವಾರ್ನರ್​ಗೆ ಪಾತ್ರವೊಂದನ್ನ ನೀಡೋದಕ್ಕೆ ಮುಂದಾಗಿದ್ದಾರೆ. ವಾರ್ನರ್ ಪೋಕಿರಿ ಸಿನಿಮಾದ ಡೈಲಾಗ್ ಟಿಕ್ ಟಾಕ್ ವಿಡಿಯೋಗೆ, ಪುರಿ ರೀ ಟ್ವಿಟ್ ಮಾಡಿದ್ದಾರೆ. ಡೇವಿಡ್ ಇದು ನೀವು. ಈ ಸಂಭಾಷಣೆ ನಿಮಗೆ ಸೂಕ್ತವಾಗಿದೆ. ನೀವು ನಟನಾಗಿ ಅದ್ಭುತವಾಗಿದ್ದೀರಿ. ನನ್ನ ಚಿತ್ರದಲ್ಲಿ ನೀವು ಅತಿಥಿ ಪಾತ್ರ ಮಾಡುತ್ತೀರಿ ಎಂದು ಭಾವಿಸುತ್ತೇವೆ. ನಿಮ್ಮನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.

ಪುರಿ ಜಗನ್ನಾಥ್​ ಟ್ವೀಟ್​ಗೆ ವಾರ್ನರ್ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ವಾರ್ನರ್ ತೆಲುಗು ಸಿನಿಮಾ ಟಿಕ್ ಟಾಕ್ ವಿಡಿಯೋ ಮಾಡ್ತೀರೋದನ್ನ ನೋಡಿದ್ರೆ, ಟಾಲಿವುಡ್​ನಲ್ಲಿ ಒಂದು ಕೈ ನೋಡೇ ಬಿಡೋಣ ಅನ್ನೋ ಆಲೋಚನೆಯಲ್ಲಿದ್ದಂತೆ ಕಾಣ್ತಿದ್ದಾರೆ.

 

Related Tags:

Related Posts :

Category:

error: Content is protected !!