ಸಿಗಂದೂರು ಚೌಡೇಶ್ವರಿ ದೇಗುಲ ವಿವಾದ: ಮೇಲ್ವಿಚಾರಣೆ ಹೊಣೆ ನೂತನ ಸಮಿತಿಯ ಹೆಗಲಿಗೆ

  • KUSHAL V
  • Published On - 11:40 AM, 24 Oct 2020

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸುಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ವಿವಾದ ಮತ್ತು ಭಕ್ತನೊಬ್ಬನ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮೇಲ್ವಿಚಾರಣೆ ನಡೆಯಲಿದ್ದು ಜೊತೆಗೆ ಸಲಹಾ ಸಮಿತಿಯ ರಚನೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಮಿತಿ ರಚನೆ ಮಾಡಲಾಗಿದೆ.

ಅರ್ಚಕರು ಮತ್ತು ಟ್ರಸ್ಟಿಗಳ ನಡುವೆ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ದೇವಾಲಯವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ವಿವಿಧ ಸಂಘಟನೆಗಳಿಂದ ಮನವಿ ಮಾಡಲಾಗಿತ್ತು. ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸಾಗರ, ನಿವೃತ್ತ ಜಿಲ್ಲಾ ನ್ಯಾಯಾಧೀಶರು (ನಾಮ ನಿರ್ದೇಶಿತ) ಹಾಗೂ ಸ್ಥಳೀಯ ಲೆಕ್ಕ ಪರಿಶೋಧಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಾಗರ ಶಾಸಕ, ಶಿವಮೊಗ್ಗ ಲೋಕಸಭಾ ಸದಸ್ಯ, ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ ಸದಸ್ಯರಾಗಿರಲಿದ್ದಾರೆ.

ಇತ್ತ, ಅರಣ್ಯ ಭೂಮಿಯಲ್ಲಿ ದೇವಾಲಯ ಮತ್ತು ಭೋಜನಶಾಲೆಯನ್ನು ನಿರ್ಮಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. ದೇವಸ್ಥಾನ ಮತ್ತು ಭೋಜನಶಾಲೆ ಸರ್ಕಾರಿ ಸ್ಥಳದಲ್ಲಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆಯಂತೆ. ಜೊತೆಗೆ, ಅಲ್ಲೇ ಲಾಡ್ಜ್ ನಿರ್ಮಾಣ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆಯಂತೆ.

ಭಕ್ತನ ಮೇಲೆ ಹಲ್ಲೆ ಪ್ರಕರಣ: ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ DC-SP