ನಮ್ಮ ತಂದೆ-ತಾಯಿ ಒಕ್ಕಲಿಗರು, ಹೀಗಾಗಿ ನಾನು ಒಕ್ಕಲಿಗ: ಡಿ.ಕೆ. ಶಿವಕುಮಾರ್

ಬೆಂಗಳೂರು: ನಾನು ಒಕ್ಕಲಿಗೆ, ಆ ಜಾತಿ ಈ ಜಾತಿ ಅಂತ ಹೋಗುವುದಿಲ್ಲ. ಜಾತಿ ವಿಚಾರದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತನ್ಮೂಲಕ ಒಕ್ಕಲಿಗ ಸಮುದಾಯದ ನಾಯಕತ್ವ ವಿಚಾರವಾಗಿ ಎಚ್​ ಡಿ ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ
ನಮ್ಮ ತಂದೆ-ತಾಯಿ ಒಕ್ಕಲಿಗರು, ಹೀಗಾಗಿ ನಾನು ಒಕ್ಕಲಿಗ. ಶಾಲೆಗೆ ಸೇರುವಾಗ ಒಕ್ಕಲಿಗ ಅಂತ ಕೊಟ್ಟಿದ್ದೇನೆ. ನಾನು ಹುಟ್ಡಿನಿಂದ ಒಕ್ಕಲುತನ ಮಾಡುವವನು. ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ. ನಾನೊಂದು ಪಕ್ಷದ ಅಧ್ಯಕ್ಷ, ನನಗೆ ಕಾಂಗ್ರೆಸ್ ಪಕ್ಷವೇ ಜಾತಿ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದ್ದಾರೆ.

ಎಚ್ಡಿಕೆ ಎಲ್ಲಿಯೂ ನನ್ನ ಹೆಸರು ಬಳಸಿಲ್ಲ, ಹಾಗಿದ್ದಾಗ ನಾನು ಯಾಕೆ ಉತ್ತರ ಕೊಡಲಿ. ನಮಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯ. ಅದಕ್ಕಾಗಿ ನಾವು ಬಿಜೆಪಿಯವರ ಮತವನ್ನೂ ಸೆಳೆಯುತ್ತೇವೆ, ಜೆಡಿಎಸ್ ನ ಮತವನ್ನೂಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ ಎಂದು ಡಿಕೆಶಿ ತಿಳಿಸಿದರು.

Related Tags:

Related Posts :

Category:

error: Content is protected !!