ಕ್ರೈಸ್ತ ಮತದಾರರ ಮೇಲೆ ಕಾಂಗ್ರೆಸ್ ಕಣ್ಣು: ಚರ್ಚ್​ನಲ್ಲಿ ಡಿ ಕೆ ಶಿವಕುಮಾರ್ ಪ್ರತ್ಯಕ್ಷ

  • sadhu srinath
  • Published On - 13:30 PM, 29 Oct 2020

ಬೆಂಗಳೂರು: ನವೆಂಬರ್ 3ರಂದು ಆರ್.ಆರ್. ನಗರ ಕ್ಷೇತ್ರದಲ್ಲಿ ಅಸೆಂಬ್ಲಿ ಉಪ‌ ಚುನಾವಣೆ ನಡೆಯಲಿದೆ. ಹೀಗಾಗಿ ಸೋಲು ಗೆಲುವಿನ ಯುದ್ಧಕ್ಕೆ ಅಖಾಡ ಸಿದ್ಧವಾಗಿದೆ. ಮೂರೂ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸಿವೆ. ಸದ್ಯ ಈಗ ಕ್ರೈಸ್ತ ಸಮುದಾಯದ ಮತದಾರರ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದೆ.

ಸ್ಥಳೀಯ ಕ್ರೈಸ್ತ ಮುಖಂಡರ ಜೊತೆ ಆರ್.ಆರ್. ನಗರ ಚರ್ಚ್​ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಡಿಕೆಶಿ ಕ್ರೈಸ್ತ ಸಮುದಾಯದ ಪರ ನಾನಿದ್ದೇನೆಂದು ಹೇಳುತ್ತಿದ್ದಾರೆ. ಈಗ ಕೇಳಿ ಬರುತ್ತಿರುವ ಮಾತುಗಳ ಬಗ್ಗೆ ಚರ್ಚೆ ಬೇಡ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ. ಚುನಾವಣೆ ಮುಗಿದ ಮೇಲೆ ನಿಮ್ಮ ಬಳಿ ಮತ್ತೆ ಬರ್ತೇನೆ ಎಂದು ಹೇಳಿದ್ರು.